ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇಲಾಖೆಯಲ್ಲಿ ಸೇವಾತತ್ಪರತೆಯ ಮೂಲಕ ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಅಂಚೆ ಅಧಿಕ್ಷಕ ಮಹಾಂತೇಶ ತೊಗರಿ ಹೇಳಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಗುರುವಾರ ಸೇವಾನಿವೃತ್ತರಾದ ಡಾಕ್‌ಸೇವಕ ವೆಂಕಟೇಶ ಕುಲಕರ್ಣಿ ಅವರ ಬೀಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಟ್ಟಣದಲ್ಲಿ ತಮ್ಮ ಸತತ ೩೫ ವರ್ಷಗಳ ಕಾಲ ನಿಷ್ಕಳಂಕ ಸೇವೆಯ ಮೂಲಕ ಮನೆಮಾತಾಗಿರುವ ವೆಂಕಟೇಶ ಕುಲಕರ್ಣಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.
ಸನ್ಮಾನಿತರ ಪರ ಸುಪ್ರೀಯಾ ಕುಲಕರ್ಣಿ ಮಾತನಾಡಿ, ತಂದೆಯ ಸೇವೆಯ ಸಾರ್ಥಕತೆಗೆ ಇಲಾಖೆ ಪರವಾಗಿ ಸಂದ ಗೌರವಕ್ಕೆ ಅಭಿನಂದನೆ ಸಲ್ಲಿಸಿದರು.
ಅಂಚೆ ನಿರೀಕ್ಷಕ ಕರಣ ಎಂ.ಜಿ. ಶಾರದಾ ಹೆಡಜೋಳ, ಮನೋಹರ ಪೋಳ, ಅಮರೇಶ ಕಲಶೆಟ್ಟಿ, ಬಸಯ್ಯ ಸ್ಥಾವರಮಠ, ಭಾಗ್ಯ ಪುರವಂತರಮಠ, ಕೀರ್ತಿ ಪಾಟೀಲ, ಸುವರ್ಣ ಕಲಾಲ್, ಸುನಂದಾ ಬಿರಾದಾರ, ಪ್ರವೀಣ ಕುಲಕರ್ಣಿ, ಬಿ.ಟಿ.ಮಾದರ, ರಾಮನಗೌಡ ಬಿರಾದಾರ ಇದ್ದರು.

