Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇಂದು ಗುರುವಾರ ಗುರು ಪೂರ್ಣಿಮೆ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ವಿವಿಯ ಗಣ್ಯರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿವಿ ಸಮಕುಲಾಧಿಪತಿ, ಡಾ. ವೈ. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಕುಲಸಚಿವ‌ ಡಾ. ಆರ್. ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಪರೀಕ್ಷೆ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ವೈದ್ಯಕೀಯ ಅಧೀಕ್ಷಕ, ಡಾ. ಆರ್. ಎಂ. ಹೊನ್ನುಟಗಿ, ಫಿಜಿಯೊಲಾಜಿ ವಿಭಾಗದ ಮುಖ್ಯಸ್ಥೆ, ಡಾ. ಲತಾ ಮುಳ್ಳೂರ, ಅಲೈಡ ಹೆಲ್ತ್ ಸೈನ್ಸ ಡೀನ್ ಡಾ. ಎಸ್. ವಿ. ಪಾಟೀಲ, ಆರ್ ಆ್ಯಂಡ್ ಡಿ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ಡಾ. ಎಂ. ಬಿ. ಪಾಟೀಲ, ಡಾ. ಸ್ಮಿತಾ ಮಂಗಲಗಿ, ಹಣಕಾಸು ಅಧಿಕಾರಿ, ಬಿ. ಎಸ್. ಪಾಟೀಲ, ಉಪಕುಲಸಚಿವ ಸತೀಶ ಪಾಟೀಲ, ಸಹಾಯಕ ಕಾನೂನು ಅಧಿಕಾರಿ ಐ. ಬಿ. ಮಠಪತಿ ಹಾಗೂ ವಿಶ್ವವಿದ್ಯಾಲಯದ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಎಮ್ ಇ ಎಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಗುರು ಪೂರ್ಣಿಮೆ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಗುರು ಪೂರ್ಣಿಮೆ ಎರಡು ಪದಗಳ ಸಂಯೋಜನೆಯಾಗಿದೆ. ಗುರುವು ಸಂಸ್ಕೃತದ ಮೂಲ ಪದಗಳಾದ ಗು(ಕತ್ತಲೆ ಅಥವಾ ಅಜ್ಞಾನ),ರು(ಬಿಡಿಸುವವನು) ಗುರು ಎಂದರೆ ಕತ್ತಲೆಯಿಂದ ಬೇಳಕಿನಡೆಗೆ ಅಥವಾ ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವವನೆ ಗುರು. ಶಿಷ್ಯರ ಬದುಕಿಗೆ ದಾರಿದೀಪವಾಗಿ ಜ್ಞಾನ, ವಿವೇಕ ಮತ್ತು ಸಂಸ್ಕಾರಗಳನ್ನು ಕಲಿಸಿ ಶಿಷ್ಯರನ್ನು ಸನ್ಮಾರ್ಗಕ್ಕೆ ತಂದು ಜೀವನವನ್ನು ಹಸನು ಮಾಡುತ್ತಾರೆ ಇಂತಹ ಗುರುಗಳು ದೇವರಿಗಿಂತ ಶ್ರೇಷ್ಠರು ಎಂದು ಶಿಕ್ಷಕ ರಮೇಶ ಮಲ್ಲಾಡಿ ಹೇಳಿದರು.ಗುರು ಪೂರ್ಣಿಮೆಯು ಆಧ್ಯಾತ್ಮಿಕ ಗುರುಗಳನ್ನು ಗೌರವಿಸುವ ಪೂಜ್ಯ ಹಬ್ಬವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಮ್ ಇ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಚೋಳಕೆ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನ ಇದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಸ್ಥಾನ ನೀಡಿದ ದೇಶ ಭಾರತ ಮಾತ್ರ. ಗುರು ಪೂರ್ಣಿಮೆಯಂದು ಗುರುವಿನ ಪಾದ…

Read More

ಅಥಣಿ ತಾಲೂಕಿನಲ್ಲಿ ರಸಗೊಬ್ಬರ ಮಾರಾಟಗಾರರಿಂದ ಯೂರಿಯಾ ಕೃತಕ ಅಭಾವ ಉದಯರಶ್ಮಿ ದಿನಪತ್ರಿಕೆ ವರದಿ: ಮಹಾಂತೇಶ ಅಣ್ಣಪ್ಪ ನ್ಯಾಮಗೌಡಅಥಣಿ: ತಾಲೂಕಿನಾದ್ಯಂತ ರಾಸಾಯನಿಕ ರಸಗೊಬ್ಬರಗಳ ಮಾರಾಟಗಾರರು ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಯೂರಿಯಾ ಗೊಬ್ಬರ ಜೊತೆ ಹೆಚ್ಚುವರಿ ಔಷದಿ ಅಥವಾ ಗೊಬ್ಬರ ಅಥವಾ ಯೂರಿಯಾ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ರೈತರಿಗೆ ಅನಗತ್ಯ ವೆಚ್ಚದಾಯಕ ಹೊರೆಯನ್ನು ಹೊರೆಸಿ ವಂಚಿಸುತ್ತಿರುವುದು ಸಾಮಾನ್ಯವಾಗಿದೆಈ ವರ್ಷ ಸಕಾಲಕ್ಕೆ ಮಳೆರಾಯ ಸುರಿಯುತ್ತಿರುವದರಿಂದ ಮುಂಗಾರು ಅವದಿಯಲ್ಲಿ ರೈತರು ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ಪಲವತ್ತತೆಯಿಂದ ನಳನಳಿಸುತ್ತಿರುವದರಿಂದ ಸಂತಸಗೊಂಡಿರುವ ರೈತರು ಹೆಚ್ಚಿನ ಇಳುವರಿ ಪಡೆಯಲು ಬೆಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಯುರಿಯಾ ಗೊಬ್ಬರವನ್ನು ಬಳಸುವದರಿಂದ ರೈತರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚುತ್ತಿರುವ ಬೆಡಿಕೆಯನ್ನೆ ಬಂಡವಾಳ ಮಾಡಿಕೊಂಡು ಗೊಬ್ಬರದ ಕೃತಕ ಅಬಾವ ಸೃಷ್ಟಿಸಿ ಯೂರಿಯಾ ಗೊಬ್ಬರ ಬೇಕಾದರೆ ಅದರ ಜೊತೆ ಅನವಶ್ಯಕವಾಗಿ ಹೆಚ್ಚುವರಿ ಗೊಬ್ಬರ ಔಷದ ಮತ್ತು ಗೊಬ್ಬರದ ಮೆಲೆ ಸರಕಾರದ ಸಹಾಯಧನ ಕಳೆದು ಒಂದು ಚಿಲ ಗೊಬ್ಬರಕ್ಕೆ ೨೬೫.೫೦ ರೂಪಾಯಿ ದರ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅಧ್ಯಕ್ಷತೆಯಲ್ಲಿ ಜು.೧೧ ರಂದು ಬೆಳಗ್ಗೆ ೧೧.೩೦ ಗಂಟೆಗೆ ಸಾಮಾನ್ಯ ಸಭೆ ಜರುಗಲಿದೆ.ಸಭೆಯಲ್ಲಿ ಹಿಂದಿನ ಸಭೆಯ ನಡವಳಿಗಳನ್ನು ಓದಿ ದೃಢಿಕರಿಸುವದು. ಏಪ್ರೀಲ್, ಮೇ ಮತ್ತು ಜೂನ-೨೦೨೫ ಜಮಾ ಖರ್ಚು ಓದಿ ದೃಢೀಕರಿಸುವದು. ೧೫ ನೇ ಹಣಕಾಸು ಮತ್ತು ಎಫ್.ಎಪ್.ಸಿ. ಯೋಜನೆಯ ಟೆಂಡರ್ ದರಗಳಿಗಂ ಮಂಜೂರಾತಿ ನೀಡುವ ಕುರಿತು.ಮೆಗಾ ಮಾರುಕಟ್ಟೆಯ ವಾಹನ ನಿಲುಗಡೆ ಸ್ಥಳದಲ್ಲಿ ವಾಹನ ನಿಲ್ಲಿಸಲು ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದನ್ನು ಬಹಿರಂಗ ಹರಾಜು ಮೂಲಕ ಹೊರಗುತ್ತಿಗೆ ನೀಡುವ ಕುರಿತು, ನೀರು ಶುದ್ಧೀಕರಣ ಘಟಕಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ವಾರ್ಷಿಕ ನಿರ್ವಹಣೆ ನೀಡುವದು.ನೀರು ಶುದ್ಧಿಕರಣ ಘಟಕಗಳನ್ನು ಹೊರಗುತ್ತಿಗೆ ನೀಡುವ ಕುರಿತು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಗುವದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಘಟಕದಿಂದ ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ಮನವಿ ಪತ್ರವನ್ನು ಬುಧವಾರ ತಾಪಂ ಇಓ ಪ್ರಕಾಶ ದೇಸಾಯಿ ಅವರಿಗೆ ಸಲ್ಲಿಸಲಾಯಿತು.ಅವರು ಸಲ್ಲಿಸಿದ ಮನವಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಬಾಂಧವರ ಜೇಷ್ಠತಾ ಪಟ್ಟಿ ತಯಾರಿಸುವದು. ಬಡ್ತಿ ನೀಡುವದು. ಬಾಕಿ ವೇತನ ನೀಡುವುದು. ಬಾಕಿ ಉಳಿದ ಅನೋದನೆ ನೀಡುವದು. ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ಗಳ ಜಾರಿ ವಿರೋಧಿಸಿ, ಕರಡು ಅಧಿಸೂಚನೆಯಲ್ಲಿ ರೂ.೩೧೦೦೦ ನಿಗದಿಪಡಿಸಿ ಅಂತಿಮಗೊಳಿಸಬೇಕು. ಪಿಂಚಿಣಿ, ಸೇವಾ ಹಿರಿತನ ಭತ್ಯೆ ಹೆಚ್ಚಳ, ಪಂಚಾಯಿತಿಗೊಂದು ಎಸ್ಡಿಎ ೨ ನೇ ಡಿಇಓ ನೇಮಕಾತಿ ಮತ್ತು ಆರೋಗ್ಯ ವಿಮೆ ಜಾರಿ ಮಾಡುವುದು. ಸ್ವಚ್ಛವಾಹಿನಿಯರ ಒಡಂಬಡಿಕೆ ರದ್ದು. ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಗಿದೆ.ಮನವಿ ಪತ್ರವನ್ನು ಸ್ವೀಕರಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ತಮ್ಮ ಬೇಡಿಕೆಗಳನ್ನು…

Read More

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮನುಷ್ಯನ ಗುಣವೇ ವಿಚಿತ್ರ ತನಗೆ ತೊಂದರೆ ಕೊಟ್ಟವರನ್ನೇ ಪದೇ ಪದೇ ನೆನಪಿಸಿಕೊಳ್ಳುತ್ತಾನೆ. ಕೈಯಲ್ಲಿರುವ ಕ್ಷಣ ಅದೆಷ್ಟೇ ಸುಂದರವಾಗಿದ್ದರೂ ಸಂತಸವಾಗಿರುವುದನ್ನು ಮರೆಯುತ್ತಾನೆ. ಕೆಟ್ಟ ಗಳಿಗೆಯನ್ನು ನೆನೆನೆನೆದು ಕಣ್ಣೀರು ಹಾಕುತ್ತಾನೆ. ತನ್ನ ಸಂತೋಷಕ್ಕೆ ತಾನೇ ಕಲ್ಲು ಹಾಕಿಕೊಳ್ಳುತ್ತಾನೆ. ನೆಮ್ಮದಿಗೆ ಮನುಷ್ಯನ ಮನಸ್ಸು ಮತ್ತು ಆಲೋಚನೆಗಳನ್ನು ಹದಗೊಳಿಸಲೇಬೇಕು. ಮನಸ್ಸನ್ನು ಒಳ್ಳೆಯದರತ್ತ ಎಳೆದು ತಂದು ಕಟ್ಟಬೇಕು. ಎಲ್ಲಾ ಇರುವ ವಾತಾವರಣದಲ್ಲಿ ಅಂದುಕೊಂಡಂತೆ ಬದುಕುವುದು ಸುಲಭವಲ್ಲ. ಹಾಗಿದ್ದಾಗ್ಯೂ ನೆಮ್ಮದಿಯ ಜೀವನಕ್ಕೆ ನಿಮ್ಮಲ್ಲಿರವುದಕ್ಕೆ ಕೃತಜ್ಞರಾಗಿರಿ; ನೀವು ಹೆಚ್ಚಿನದನ್ನು ಹೊಂದುವಿರಿ. ನಿಮ್ಮ ಬಳಿ ಇಲ್ಲದಿರುವುದರ ಮೇಲೆ ಗಮನಹರಿಸಿದರೆ, ನಿಮಗೆ ಎಂದೂ ಸಾಕಾಗುವುದಿಲ್ಲ. ನೆಮ್ಮದಿಯ ಜೀವನ ನಡೆಸಲು ಸರಳ ಮಾರ್ಗಗಳಿವೆ. ಅದರಲ್ಲೊಂದು ಮುಖ್ಯವಾದುದು ಎಂದರೆ ಕೃತಜ್ಞತೆಯನ್ನು ಮೇಲಂಗಿಯಂತೆ ಧರಿಸಿ ಮತ್ತು ಅದು ನಿಮ್ಮ ಜೀವನದ ಪ್ರತಿಯೊಂದು ಮೂಲೆಯನ್ನು ಪೋಷಿಸುತ್ತದೆ. ಎಂದಿದ್ದಾರೆ ರೂಮಿ. ಕಾಮ ಕ್ರೋಧ ಮದಗಳು ನರಕದ ಹಾದಿಗಳು. ಇವು ಯಾವಾಗಲೂ ನಮ್ಮ ಬೆಂಬತ್ತಿ ಕಾಡುತ್ತವೆ. ಇವುಗಳ ಗೆಳೆತನ ಬಿಡಬೆಕು. ನೆಮ್ಮದಿಯ…

Read More

ರತನೆ- ಅನು ಸತೀಶ’ನಮ್ಮ ಕಥಾ ಅರಮನೆ ’ಬರಹಗಾರರು ಉದಯರಶ್ಮಿ ದಿನಪತ್ರಿಕೆದೂರ ತೀರದಲ್ಲಿ ಮುರಳಿ ನಾದನಾದವು ತಂದಿತು ಮೋಹನ ರಾಗರಾಗದಲ್ಲಿ ಹೊಮ್ಮಿದೆ ಅನುರಾಗದ ಅಲೆಗಳುಅಲೆಗಳಲ್ಲಿ ಮೂಡಿತು ಒಲವಿನ ರಂಗುರಂಗು ತಂದಿತು ಬೆಸುಗೆಯ ಬಂಧಬಂಧನವು ಆಗಿದೆ ಪ್ರೇಮದ ಅನುಬಂಧಅನುಬಂಧದ ಅನುರಾಗವು ಮೂಡಿದೆ ಮನದಲ್ಲಿಮನದಲ್ಲಿ ನಿಂತಿರುವನು ನನ್ನಿ ಇನಿಯಇನಿಯನ ಸ್ಪರ್ಶವು ತಂದಿದೆ ಬಯಕೆಬಯಕೆಯು ತಂದಿದೆ ಹೊಸ ಹರುಷಹರುಷವು ಇರಲಿ ಎಂದೆಂದು ಬದುಕಲ್ಲಿಬದುಕಲ್ಲಿನ ಸೊಗಡು ಉಳಿಯಲಿ ಶಾಶ್ವತವಾಗಿ

Read More

ಇಂದು (ದಿ.10/7/2025 ಗುರುವಾರ) ಉತ್ತರ ಕರ್ನಾಟಕದ ಸತ್ಸಂಗವೆಂದೇ ಹೆಸರಾದ ವಿಜಯಪುರದ ಜ್ಞಾನಯೋಗಾಶ್ರಮದ ಗುರು ಪೌರ್ಣಿಮೆಯ ನಿಮಿತ್ತ ಈ ವಿಶೇಷ ಲೇಖನ ಲೇಖನ- ಜಿ. ಬಿ. ಸಾಲಕ್ಕಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಗುರು ಕಾರುಣ್ಯವೇ ಸದಾಚಾರಗುರು ಕಾರುಣ್ಯವೇ ಶಿವಾಚಾರಗುರು ಕಾರುಣ್ಯವೇ ಪ್ರಸಾದ ರುಚಿಮುಂದೆ ಗುರು ಹಿಂದೆ ಲಿಂಗ*ಕೂಡಲ ಸಂಗಮದೇವ ಅಜ್ನಾನದ ಕತ್ತಲನ್ನು ಕಳಚಿ ಸುಜ್ನಾನದ ಬೀಜ ಬಿತ್ತುವ ಗುರುವಿಗೆ ಭಾಸ್ಕರ ನೆಂದು ಗೌರವಿಸುವ ಪರಂಪರೆ ಹಿಂದು ಸಂಸ್ಕೃತಿಯ ಭವ್ಯ ಇತಿಹಾಸ. ಪ್ರಣತೆ ಕಪ್ಪಾದರೇನು, ಬಿಳಿದಾದರೇನು, ಬೆಳ್ಳಿ ಬಂಗಾರದ್ದಾದರೂ ನೀಡುವ ಬೆಳಕು ಆದ್ಭುತ ಅದು ಜ್ನಾನಾಮೃತ. ನಮ್ಮ ನೆಲದ ತತ್ವಜ್ನಾನಿಗಳಲ್ಲದೇ, ಪಾಶ್ಚಿಮಾತ್ಯ ದಾರ್ಶನಿಕರೂ ಗುರು ಶಿಷ್ಯ ರನ್ನು ಸೂರ್ಯ ಹೂ ಗಳಿಗೆ ಹೋಲಿಸಿದ್ದು ಆ ಗುರು ಶಿಷ್ಯ ಪರಂಪರೆಯ ಮಹತ್ವ. ಭಾರತೀಯರಲ್ಲಿ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದರ ಗುರು ಭಕ್ತಿ ಮೇಲ್ಮಟ್ಟದ್ದು. ಈ ನೆಲೆಯಲ್ಲಿ ವಿಶ್ವದ ಗುರು ಸಂತ ಶ್ರೇಷ್ಟರ ಸ್ಮರಣೆ ಮಾಡುವ ಪುಣ್ಯ ಪರ್ವ ಗುರು ಪೌರ್ಣಿಮೆ ಕಡಲೆಗಾರ ಹುಣ್ಣಿಮೆಯ ದಿನ.ಜ್ನಾನಯೋಗಾಶ್ರಮದ ಗುರು ವಂದನೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸ್ಥಳೀಯ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ, ಜಿಲ್ಲಾ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೋಸಾಯಿಟಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬಾಲ ಮತ್ತು ಕಿಶೋರ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು,ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾರ್ಮಿಕ ನಿರೀಕ್ಷಕ ಡಿ.ಎಮ್.ದೇವರಮನಿ, ಯಾರು ಸಹ ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಕೆಲಸಕ್ಕೆ ಹಚ್ಚಬಾರದು,೧ರಿಂದ ೧೪ ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲೆಬೇಕು, ಶಾಲೆ ಬಿಡಿಸಿ ಬೇರೆ ಯಾವುದೇ ವೃತ್ತಿ ಕೆಲಸಕ್ಕೆ ಹಚ್ಚಬಾರದು ಎಂದರು.ಕಿಶೋರ ಮಕ್ಕಳನ್ನು ಸಹ ಅಂದರೆ ೧೪ರಿಂದ೧೮ವರ್ಷದ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ಉಪಯೋಗಿಸಬಾರದು ಒಂದುವೇಳೆ ಉಪಯೋಗಿಸಿಕೊಂಡರೆ ಅಂತಹ ಜನರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ದಂಡ ಕೂಡ ವಸೂಲಿ ಮಾಡಲಾಗುತ್ತದೆ ಆದಕಾರಣ ಯಾರು ಸಹ ಇಂತಹ ಕೆಲಸಗಳಿಗೆ ಅವಕಾಶ ಮಾಡಿ ಕೊಡಬಾರದು ಎಂದರು.ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ವ್ಯವಹಾರಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಹೀಗಾಗಿ ಡಿಜಿಟಲೀಕರಣದೀಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದೆ. ತಾಂತ್ರೀಕರಣದ ಬದಲಾವಣೆಗೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಡಿಜಿಟಲ್ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ ಅಭಿಪ್ರಾಯಪಟ್ಟರು.ನಬಾರ್ಡ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಾಕಾರಿ ಬ್ಯಾಂಕ್ ಸಹಯೋಗದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪ್ಯಾಕ್ಸುಗಳ ಮುಖ್ಯ ಕಾರ್ಯನಿವಾಹಣಾ ಅಧೀಕಾರಿಗಳಿಗೆ ಹಾಗೂ ಬ್ಯಾಂಕಿನ ಗ್ರಾಹಕರಿಗೆ ಎಂ-ಪಾಸ್ ಮಶಿನ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕತೆಗೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯವೂ ಹೌದು ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಬಾರ್ಡ ಡಿಡಿಎಂ ವಿಕಾಸ ರಾಠೋಡ ಮಾತನಾಡಿ, ಎಂಪಿಒಎಸ್ ಮಸಿನ್ ಬಳಕೆ ಕುರಿತು ಬ್ಯಾಕಿಂಗ್ ಕ್ಷೇತ್ರದಲ್ಲಿರುವವರು ಅಗತ್ಯ ಜ್ಞಾನ ಹೊಂದಿರಬೇಕಿದೆ. ನಗದು ರಹಿತ ವ್ಯವಹಾರ, ಹಣ ವರ್ಗಾವಣೆ ಮತ್ತು ಮೊಬೈಲ್ ಆ್ಯಪ್ ಗಳ ಬಳಕೆ ಕುರಿತು ಅರಿವು ಹೊಂದಿರುವುದು…

Read More