ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
23 ನೆಯ ಶರಣಮಾಸದ ಅನುಭಾವ ಮಾಲಿಕೆಯಲ್ಲಿ

ಡಾ ಕಸ್ತೂರಿ ದಳವಾಯಿ ಅವರು ಮಾತನಾಡುತ್ತಾ ಮೈಲಾರ ಮಹಾದೇವಪ್ಪನವರು ೧೯೧೧ರಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದರು. ಇವರ ತಾಯಿ ಬಸಮ್ಮ ; ತಂದೆ ಮಾರ್ತಾಂಡಪ್ಪ. ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಹಾಗು ಹಂಸಭಾವಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಹೈಸ್ಕೂಲಿನಲ್ಲಿ ಹರ್ಡೇಕರ ಮಂಜಪ್ಪನವರಿಂದ ರಾಷ್ಟ್ರೀಯ ಭಾವನೆಯ ಉದಯವಾಯಿತು. ಅದೇ ಸಮಯದಲ್ಲಿ ಗಳಗನಾಥರ ಸಾಹಿತ್ಯ ಹಾಗು ಲೋಕಮಾನ್ಯ ತಿಲಕರ[೧] ಕೇಸರಿ ಪತ್ರಿಕೆಯಲ್ಲಿಯ ಲೇಖನಗಳಿಂದ ಇವರಿಗೆ ಪ್ರೇರಣೆ ದೊರೆಯಿತು. ಇದರಿಂದ ೧೯೨೯ರಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಖಾದಿ ಪ್ರಚಾರದಲ್ಲಿ ತೊಡಗಿದರು. ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ[೨] ಪ್ರಾರಂಭಿಸಿ ದಾಂಡಿ ಯಾತ್ರೆ ಕೈಗೊಂಡಾಗ ಅದರಲ್ಲಿ ಭಾಗವಹಿಸಿದ ಅತಿ ಕಿರಿಯ ಚಳುವಳಿಗಾರರಾಗಿದ್ದರು. ಜೊತೆಗೆ, ಮೈಲಾರ ಮಹಾದೇವಪ್ಪನವರು ಕರ್ನಾಟಕದಿಂದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ವ್ಯಕ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷರಾದ ಡಾ ಶಶಿಕಾಂತ ಪಟ್ಟಣ ಅವರು ಉತ್ತರ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚರಿತ್ರೆಯಲ್ಲಿ ಇತಿಹಾಸದಲ್ಲಿ ದಾಖಲಾಗದೆ ಇರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು. ಅಲ್ಲದೆ ಮೈಲಾರ ಮಹಾದೇವರು ಅಪ್ಪಟ ರಾಷ್ಟ್ರ ಭಕ್ತರಾಗಿದ್ದರು.
೧೯೪೨ರಲ್ಲಿ ಚಲೇಜಾವ್ ಚಳುವಳಿ ಪ್ರಾರಂಭವಾಗಿ, ಮಹಾತ್ಮಾ ಗಾಂಧೀಜಿ ಯವರು ಸೆರೆಯಾದ ಬಳಿಕ ಚಳುವಳಿ ಉಗ್ರ ರೂಪ ತಾಳಿತು. ಮೈಲಾರ ಮಹಾದೇವಪ್ಪನವರು ಯುವ ಹೋರಾಟಗಾರರನ್ನು ಸಂಘಟಿಸಿದರು. ೧೯೪೩ ಮಾರ್ಚ ೩೧ರಂದು ಹೊಸರಿತ್ತಿಯ ಕಂದಾಯ ಕಚೇರಿಯ ಮೇಲೆ ದಾಳಿ ಮಾಡಿದಾಗ, ಪೋಲೀಸರ ಗುಂಡಿಗೆ ಬಲಿಯಾದರು. ಇವರೊಂದಿಗೆ ಹಿರೇಮಠ ವೀರಯ್ಯ ಹಾಗು ಮಡಿವಾಳ ತಿರಕಪ್ಪನವರೂ ಸಹ ಹುತಾತ್ಮರಾದರು ಎಂಬ ಹೋರಾಟದ ಕ್ರಾಂತಿಯ ಪರಂಪರೆ ಬಗ್ಗೆ ಮಾತನಾಡಿ,
ಡಾ ಮಹದೇವಪ್ಪ ಪಟ್ಟಣ ಹೊಸಮನಿ ಸಿದ್ಧಪ್ಪನವರು ಶ್ರೀ ಸಿದ್ದಪ್ಪ ಕಂಬಳಿ ಹಳ್ಳಿಕೇರಿ ಗುದ್ಲೆಪ್ಪ ವಾಲಿ ಚೆನ್ನಪ್ಪ ಸಿದ್ದಮ್ಮ ಮೈಲಾರ ಮುಂತಾದವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಸುಗುಣ ಮಲ್ಲೇಶ ಅವರ ವಚನ ಪ್ರಾರ್ಥನೆ, ಶರಣೆ ಏoಜಲಿನಾ ಗ್ರೆಗರಿ ಅವರ ಸ್ವಾಗತ, ಶರಣೆ ರತ್ನಕ್ಕ ಬಿರಾದಾರ ಅವರ ಶರಣು ಸಮರ್ಪಣೆ, ಶರಣೆ ಬನಶ್ರೀ ಹತ್ತಿ ಅವರ ವಚನ ಮಂಗಳ ಮತ್ತು ಡಾ. ತಾರಾ. ಬಿ. ಎನ್ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸುಗಮವಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 321
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 321
