ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
24 ನೆಯ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ
ಶರಣ ಶಿವಶರಣಪ್ಪ ಮದ್ದೂರ ಅವರು ಅನುಭವ ಮಂಟಪದ
ಕುರಿತು ಅತ್ಯಂತ ವಿದ್ವತ್ ಪೂರ್ಣವಾಗಿ ಮಾತಾಡಿದರು.
ಬಸವಣ್ಣನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು ಅನುಭವ ಮಂಟಪವನ್ನು ಸ್ಥಾಪಿಸಿದ್ದು, 12ನೇ ಶತಮಾನದಲ್ಲಿ ಭಾರತಾದ್ಯಂತ ಎಲ್ಲ ವರ್ಗದವರು ಬಂದು ಸೇರುತ್ತಿದ್ದ ಒಂದು ಸಾಮಾಜಿಕ ಧಾರ್ಮಿಕ ಸಂಸತ್ತು, ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿದ್ದವರು ಅಲ್ಲಮಪ್ರಭುಗಳು, ವಿವಿಧ ಜಾತಿ,ಕಾಯಕದವರು ಅನುಭವ ಮಂಟಪದ ಸದಸ್ಯರಾಗಿದ್ದರೆನ್ನುವುದು, ಇದರಲ್ಲಿ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದುದು ಹಾಗೂ ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದುದನ್ನು ತಿಳಿಸಿ ದರು.

ಬಸವಣ್ಣನವರು ವಿಶ್ವವೇ ಒಂದು ಕುಟುಂಬವೆನ್ನು ವುದನ್ನು, ಕೂಡಲಸಂಗಮ ದೇವರ ಮನೆಯ ಮಗನು ನಾನು ಎನ್ನುವ ವಿನೀತ ಭಾವನೆ, ವರ್ಣ, ವರ್ಗ,ಲಿಂಗ, ಬೇಧ ಇಲ್ಲದೆ ಸ್ಥಾಪಿಸಿದ ಸಂಸ್ಥೆ ಅನುಭವ ಮಂಟಪ, ದಯವೇ ಧರ್ಮದ ಮೂಲವಯ್ಯವೆನ್ನುವುದು, ನಮ್ಮ ದುಡಿಮೆಯಿಂದ ಬಂದ ಪ್ರತಿಫಲದ ಒಂದಿಷ್ಟು ಭಾಗವನ್ನು ದಾಸೋಹ ರೂಪದಲ್ಲಿ ಬಳಸುವುದನ್ನು, ಮಾನವ ಹಕ್ಕುಗಳ ಪ್ರತಿಪಾದನೆ, ಇದು ಕರ್ತಾರನ ಕಮ್ಮಟವೆನ್ನುವುದು, ನಡೆ- ನುಡಿ- ಆಚಾರ ಒಂದಾದಾಗ ಮಾತ್ರ ಅದು ಧರ್ಮ ಆಗುತ್ತದೆ, ಅರಿವಿನ ಪಾದೋದಕದಲ್ಲಿ ವಚನ ಸಾಹಿತ್ಯ ಇಂದಿಗೂ ಹರಿಯುತ್ತಿದೆನ್ನುವುದು, ಬಸವಣ್ಣನವರು ಎಲ್ಲರಿಗೂ ಲಿಂಗ ದೀಕ್ಷೆ ಕೊಟ್ಟು ಸರ್ವಧರ್ಮದ ಸಮಾನತೆಯನ್ನು ಕಾಪಾಡಿದ್ದು ಹೀಗೆ ಇನ್ನೂ ಹಲವಾರು ಮಹತ್ವಪೂರ್ಣ ವಿಷಯ ಗಳನ್ನು ಮಧ್ಯ ಮಧ್ಯ ಶರಣರ ವಚನಗಳ ಮೂಲಕ ನಮ್ಮ ಜೊತೆಗೆ ಹಂಚಿಕೊಂಡರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಸರ್ ಅವರು ಇಂಗ್ಲೆಂಡ್ ನಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಯಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಸವಣ್ಣನವರ ಬಗೆಗೆ ಇರುವ ಗೌರವ, ಆರ್ಥರ್ ಮೈಲ್ಸ್ ಹೇಳಿಕೆ, ಬಸವಣ್ಣನವರ ತತ್ವಗಳು ಮತ್ತು ಆಚರಣೆಗಳು ಪ್ರತಿಯೊಬ್ಬರ ಮನದಲ್ಲಿ ಹೇಗೆ ಗಟ್ಟಿಯಾಗಿ ಮೂಡಬೇಕೆನ್ನುವುದು, ಶರಣರ ಕಾರ್ಯಕ್ಷೇತ್ರದ ಸಂಶೋಧನೆ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಬೇಕೆನ್ನುವ ಕಳಕಳಿ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ ಹೀಗೆ ಹಲವಾರು ಶರಣರನ್ನು ಉಲ್ಲೇಖಿಸುತ್ತ ಲಿಂಗಾoಗ ಸಾಮರಸ್ಯದ ಮಹತ್ವವನ್ನು ತಿಳಿಸುತ್ತಾ, 3800 ಊರುಗಳಿಗೆ ಬಸವಣ್ಣನವರ ಹೆಸರು ಇದೆ ಎನ್ನುವುದನ್ನು ಅಭಿಮಾನದಿಂದ ಹೇಳಿದರು.
ದತ್ತಿ ದಾಸೋಹಿಗಳಾದ ಸುಧಾ ಪಾಟೀಲ ಅವರು ತಮ್ಮ ತಂದೆ- ತಾಯಿಯ ಆಧ್ಯಾತ್ಮಿಕ ಮತ್ತು ಸಾಹಿತ್ಯದ ಚಿಂತನೆ, ಅವರ ನಿರಂತರ ದಾಸೋಹ ಸೇವೆಯೊಂದಿಗೆ, ತಮ್ಮ ದೀಕ್ಷಾ ಗುರುಗಳಾದ ಡಾ. ಜ. ಚ. ನಿ ಶ್ರೀಗಳನ್ನು ನೆನೆಯುತ್ತ, ಡಾ. ಶಶಿಕಾಂತ ಪಟ್ಟಣ ಅವರ ಪ್ರೋತ್ಸಾಹ ಮತ್ತು ಸಹಕಾರದ ಮನೋಭಾವವನ್ನು ಶ್ಲಾಘಿಸಿದರು.
ಸಂವಾದದಲ್ಲಿ ಹಲವಾರು ಬಸವಭಕ್ತರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಶರಣೆ ಏಂಜಲಿನಾ ಗ್ರೆಗರಿ ಅವರ ವಚನ ಪ್ರಾರ್ಥನೆ, ಡಾ. ನಾಗರಾಜ ಬಳಿಗಾರ ಅವರ ಸ್ವಾಗತ, ಶರಣೆ ಭಾಗ್ಯ ಕೋಟಿ ಅವರ ಶರಣು ಸಮರ್ಪಣೆ, ಶರಣೆ ಸುಮಂಗಲಾ ಅಣ್ಣಿಗೇರಿ ಅವರ ವಚನ ಮಂಗಳ ಮತ್ತು ಶರಣೆ ಜಯಶ್ರೀ ಆಲೂರ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸುಗಮವಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 322
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 322
