Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಇಂದು ಶ್ರೀಮಂತಿಕೆ, ಅಧಿಕಾರಕ್ಕಿಂತ ಹೆಚ್ಚಿನ ಶಕ್ತಿ ಜ್ಞಾನಕ್ಕೆ ಇದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ನಗರದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದಿಂದ ಇಂದು ನಡೆದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮುಸ್ಲಿಂ ಸಮಾಜದಲ್ಲಿ ಅತ್ಯಂತ ಹಿಂದುಳಿದ ನದಾಫ ಪಿಂಜಾರ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ ಪಾಲಕರು ತಮಗೆ ಎಷ್ಟೆ ಕಷ್ಟ ಬಂದರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸುವದರ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆಯಬೇಕು ಇದರಿಂದ ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.ಕೃಷ್ಣ ಪಾರಿಜಾತ ಹೆಸರಾಂತ ಕಲಾವಿಧ ದಿ.ಅಪ್ಪಾಲಾಲ ನದಾಫ್ ಅವರ ಹೆಸರಿನಲ್ಲಿ ರಂಗ ಮಂದಿರ ನಿರ್ಮಾಣ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚಿಸುತ್ತೆನೆ ಎಂದರು.ಡಿವೈಎಸ್‌ಪಿ ಎಸ್. ರೋಷನ್ ಜಮೀರ್ ಮಾತನಾಡಿ, ಕನ್ನಡ ಮಾತೃಭಾಷೆಯಲ್ಲಿ ಕಲಿತವರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ, ಆ ನಿಟ್ಟಿನಲ್ಲಿ ಮಾತೃಭಾಷೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಇಂಡಿ ತಾಲೂಕು ಅವರು ಚಡಚಣ ವಲಯದ ಆಶ್ರಯ ಕಾಲೋನಿ ಕಾರ್ಯಕ್ಷೇತ್ರದ ಶ್ರೀ ಕಲ್ಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಸಂಸ್ಥಾಪಕಿ ಕಾಶಿಬಾಯಿ ವಾಲಿಕಾರ ಮತ್ತು ಮುಖ್ಯ ಗುರುಗಳಾದ ಡಿ ಎಸ್ ಅಜಮಾನಿ ಜಂಟಿಯಾಗಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಜೆ ಸಿ ಬಿರಾದಾರ ಸರ್, ಎಸ್ ಪಿ ಕೊಪ್ಪದ ಮೇಡಂ ಅವರು ಪರಿಸರದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಾಹಿತಿ ನೀಡಿ ಜನರಿಗೆ ಉಪಕಾರಿಯಾದಂಥ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಚಡಚಣ ವಲಯದ ಮೇಲ್ವಿಚಾರಕರು ಶಿವಯ್ಯ ಹಿರೇಮಠ ಅವರು ಯೋಜನೆಯ ಕಾರ್ಯಕ್ರಮ ಗಳ ಬಗ್ಗೆ ಮತ್ತು ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಮೇಲ್ವಿಚಾರಕರಾದ ಸುದೀಪ್ ಮತ್ತು…
ಲೇಖನ- ಯಶು..”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಕೈ ತುಂಬಾ ಹಣ ಮೈ ತುಂಬಾ ಒಡವೆ ಮನೆಗೆಲಸಕ್ಕೆ ಆಳು ಸುಖಸುಪತ್ತಿಗೆಯಲ್ಲೇ ವಿಜೃಂಭಿಸುತ್ತಿದ್ದವರು ರಾಘವ ರಾಗಿಣಿ. ಇವರಿಬ್ಬರೂ ಮಧುಸೂದನ್ ಗಾಯಿತ್ರಿಯ ಮಕ್ಕಳು. ಮುತ್ತಾತನ ಕಾಲದಿಂದಲೂ ಶ್ರೀಮಂತರಾಗಿದ್ದರು.ರಾಘವ ರಾಗಿಣಿ ಕಾಲೇಜಿನಲ್ಲಿ ಓದುವಾಗ ಓದಿನ ಕಡೆಗೆ ಗಮನ ಕೊಡದೆ ಫ್ರೆಂಡ್ಸ್ ಪಾರ್ಟಿ ಅಂತ ಕಾಲಕಳೆಯುತ್ತಿದ್ದರು. ಇವರ ಈ ವರ್ತನೆ ಕಂಡು ಮಧುಸೂದನ್ ಗೆ ತುಂಬಾ ಬೇಸರವಾಯಿತು. ಎಷ್ಟು ಬುದ್ಧಿಮಾತು ಹೇಳಿದರು ಕೇಳುತ್ತಿರಲಿಲ್ಲ. ಇದೇ ಚಿಂತೆಯಲ್ಲೇ ಮಧುಸೂದನ್ ಗೆ ಒಂದೆರಡು ಬಾರಿ ಹೃದಯಾಘಾತವಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಆದರೂ ಮಕ್ಕಳಿಗೆ ಬುದ್ಧಿ ಬರಲೇ ಇಲ್ಲ.ತನ್ನ ದುಃಖವನ್ನು ತನ್ನ ಬಾಲ್ಯದ ಗೆಳೆಯ ನಿರಂಜನ್ ಹತ್ತಿರ ಹೇಳಿಕೊಳ್ಳುತ್ತಿದ್ದರು.ನಿರಂಜನ್ ಅವರಿಗೆ ಒಬ್ಬಳು ಮಗಳಿದ್ದಳು.ಅವಳೇ ಮೃದುಲಾ.ಆಕೆ ಅಷ್ಟೊಂದು ನೋಡಲು ಸುಂದರವಾಗಿರಲಿಲ್ಲ, ಆದರೆ ಬುದ್ಧಿವಂತಿಕೆಯಲ್ಲಿ ಚುರುಕಾಗಿದ್ದಳು,ಗುಣವಂತೆಯಾಗಿದ್ದಳು. ಯಾವುದೆ ಕೆಲಸವಾದರೂ ಸರಿ ಕಷ್ಟಪಟ್ಟು ಮಾಡಿಯಾದರೂ ಅದರಲ್ಲಿ ಯಶಸ್ವಿಯಾಗುತ್ತಿದ್ದಳು. ಮೃದುಲಾಳನ್ನು ಕಂಡರೆ ಮಧುಸೂದನ್ ಗೆ ಅಚ್ಚುಮೆಚ್ಚು. ರಾಗಿಣಿಗೆ ಪ್ರೀತಿ ತೋರಿಸುವಾಗೆಯೇ ಮೃದುಲಳಿಗೂ ಪ್ರೀತಿ ತೋರಿಸುತ್ತಿದ್ದನು.ಮೃದುಲಾ ತನ್ನ ಬುದ್ಧಿವಂತಿಕೆಯಿಂದ ಯಾರ…
ರಚನೆ- ರಾಜು ಗಾರೆಮನೆ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ದುಂಬಿಯ ಸಮೂಹ ಪದವೇಳಿವೆ ರಾಗಗಳೊಂದಿಗೆ,ಚಿಗುರೆಲೆ ಮೆದ್ದ ಹಕ್ಕಿ ಉಲಿದಿವೆ ಚಿಲಿ ಪಿಲಿಯೊಟ್ಟಿಗೆ,ಹಸಿರು ಸೊಕಿ ತಂಪಾದ ತಂಗಾಳಿ ಬೀಸಿದ ಚಾಮರಕೆ,ಮತ್ತೆ ವಸಂತ ಬಂದನು ಧರಣಿಗೆ ಚೈತ್ರದ ಆಹ್ವಾನಕೆ. ಪವನ ಪಸರುತಿದೆ ಸುಮ ಸೌರಭದ ಸುಸ್ವರ ರವಳಿ,ಹಾಸಿ ಹೊದ್ದಿದೆ ನವ ಪ್ರಕೃತಿಯು ಗಿಳಿಹಸಿರ ಕಂಬಳಿ,ಸುತ್ತ ಮುತ್ತ ಸಸ್ಯ ಶ್ಯಾಮಲೆಯ ಸಹಸ್ರ ನಾಮವಳಿ,ಕಡು ಶಿಶಿರದ ಶೀತಲಕೆ ಉಗುರು ಬೆಚ್ಚಗಿನ ಬಳುವಳಿ. ಆಯಾ ಋತು ಧರ್ಮಕೆ ಅದರದ್ದೆ ಆದ ಪರಿಪಾಲನೆ,ಮಧುವೀರಲು ಪತಂಗಕೆ ಮಾವು ಬೇವಿನ ವಿಜ್ಞಾಪನೆ,ಕೂಗಳತೆಯ ದೂರದಲ್ಲಿ ಕೋಗಿಲೆಯ ಆಲಾಪನೆ,ಇಂತ ಚೆಲುವನು ಹೊತ್ತು ತಂದ ವಸಂತನಿಗೆ ವಂದನೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಗತ್ತಿನಲ್ಲಿ ಮೇರು ವ್ಯಕ್ತಿತ್ವ ಹೊಂದಿದ ಡಾ.ಅಂಬೇಡ್ಕರ್ ಅವರು ಜನಹಿತಕ್ಕಾಗಿ ಶಾಂತಿದೂತನಾಗಿಬದುಕು ಸಾಗಿಸುತ್ತಾ, ಸರ್ವರಲ್ಲಿ ಸಮಾನತಾ ಭಾವ ಬಿತ್ತಿದ್ದಾರೆ. ಸಂವಿಧಾನ ಪೀಠಿಕೆಯ ಮೂಲಾಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಹೇಳಿದರು.ರವಿವಾರದಂದು ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ 134 ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡಾ.ಅಂಬೇಡ್ಕರ್ ಅವರು ಎತ್ತಿಹಿಡಿದ ವಿಶ್ವ ಕುಟುಂಬದ ತತ್ವವನ್ನು ಅನುಪಾಲಿಸಿಕೊಂಡು, ಇಂದಿನ ಯುವಪೀಳಿಗೆ ಓದಿನಿಂದ ತಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ನಮ್ಮ ದೇಶದ ಆಸ್ತಿ ಎಂದು ಹೇಳಿದರು.ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ, ಡಾ ಬಿ ಆರ್ ಅಂಬೇಡ್ಕರ್ ಅವರು ಇಡೀ ಮಾನವಕುಲದ ವಿಕಾಸದತ್ತ ಚಿತ್ತಹರಿಸಿ, ಸಂವಿಧಾನ ರಚಿಸಿ ದೇಶದ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಇಂದಿನ ಮಕ್ಕಳು ಪುಸ್ತಕ ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು.ನೇತೃತ್ವ ವಹಿಸಿದ್ದ ನಾಗಠಾಣ ಗ್ರಾ ಪಂ…
ಮಹಾನಗರ ಪಾಲಿಕೆ ನೌಕರರ ಹೋರಾಟ ಬೆಂಬಲಿಸಿ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭೇಟಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ನೌಕರರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ನೌಕರರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ತಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಯ ನೀಡಿದರು.ವಿಜಯಪುರ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಕಳೆದ 5 ದಿನಗಳಿಂದ ನಡೆಯುತ್ತಿರುವ ಧರಣೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಅವರ ಮಾತನಾಡಿದರು.ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನೌಕರರು ಕೆಲಸ ಸ್ತಗೀತಗೊಳಿಸಿ ನಿರಂತರವಾಗಿ 5 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದ್ದರೂ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿ ಆಗಲಿ, ಸಂಬಂಧಿಸಿದ ಸಚಿವರಾಗಲಿ ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಇದರಿಂದ ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದೆಯೋ ಇಲ್ವೋ ತಿಳಿಯದಾಗಿದೆ ಎಂದು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ವಿಗೆ ಕೇವಲ ಶ್ರೀಮಂತಿಕೆಯ ನೆಲೆಗಟ್ಟು ಮುಖ್ಯವಾದುದಲ್ಲ. ಸ್ಪರ್ಧಾ ಮನೋಬಾವ, ಇಚ್ಚಾಶಕ್ತಿ ಮತ್ತು ಸತತ ಪ್ರಯತ್ನಗಳೇ ಮುಖ್ಯ ಎಂದು ಸಹಾಯಕ ಕಮಾಂಡರ ಅನೀಲ ಚವ್ಹಾಣ ಹೇಳಿದರು.ತಾಲ್ಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ೨೦೨೫-೨೬ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಬಡತನ ಮತು ಗ್ರಾಮೀಣ ಹಿನ್ನೆಲೆ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಎಂದಿಗೂ ಅಡ್ಡಿಯಾಗದು. ಅಧ್ಯಯನದ ಸೂಕ್ತರೀತಿ, ಬೌದ್ಧಿಕ ಸಾಮಗ್ರಿ ಮತ್ತು ಸರಿಯಾದ ಮಾರ್ಗದರ್ಶನದಿಂದ ಕೇಂದ್ರ ಹಾಗೂ ರಾಜ್ಯಗಳ ಲೋಕಸೇವಾ ಆಯೋಗ, ಉಳಿದ ನೇಮಕಾತಿ ಪ್ರಾಧಿಕಾರಗಳ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ವ್ವಿಯಾಗಬಹುದು. ವಿದ್ಯಾರ್ಥಿಗಳು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಯ ಕನಸು ಮತ್ತು ಸಿದ್ಧತೆಯನ್ನು ವಿದ್ಯಾರ್ಥಿ ದೆಸೆೆಯಲ್ಲಿಯೇ ಬೆಳೆಸಿಕೊಳ್ಳಬೆಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಪ್ರಾಚಾರ್ಯ ಪ್ರಭುಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಶೈಕ್ಷಣಿಕ ಪರೀಕ್ಷೆಗಳ ಜೊತೆಗೆ ಸ್ಪರ್ದಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚು…
ರೂ.೫೦ ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಈ ಪ್ರದೇಶ ಬಹಳ ದಿನಗಳಿಂದ ಕುಂಠಿತಗೊಳ್ಳುತ್ತಾ ಬಂದಿತ್ತು. ಈ ಕಾಲೋನಿಯನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ವಾರ್ಡ ನಂ.೦೭ರಲ್ಲಿ ೨೦೨೪-೨೫ನೆಯ ಸಾಲಿನ ಕಾಲೋನಿ ಅಭಿವೃದ್ಧಿ ಯೋಜನೆ/ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಆಶ್ರಯ ಕಾಲೋನಿಯಲ್ಲಿ ರೂ.೫೦ಲಕ್ಷ ವೆಚ್ಚದ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೂ.೫೦ಲಕ್ಷ ವೆಚ್ಚದ ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರೂ.೧ ಕೋಟಿ ವೆಚ್ಚದ ಸಿಸಿ ರಸ್ತೆ ಮಾಡಿಸುವ ದಿಸೆಯಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ. ಒಟ್ಟಿನಲ್ಲಿ ಈ ಪ್ರದೇಶವನ್ನು ಸಾರ್ವಜನಿಕರ ಮತ್ತು ನಿವಾಸಿಗಳ ಉತ್ತಮ ಆರೋಗ್ಯ ಹಾಗೂ ನೈರ್ಮಲ್ಯದ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುತ್ತೇನೆ. ನನ್ನ ಮೂರು ವರ್ಷದ ಕಾಲಾವಧಿಯಲ್ಲಿ ಈ ಪ್ರದೇಶವನ್ನು ಅತ್ಯಂತ ಶ್ರೇಷ್ಠವಾದ ಕಾಲೋನಿಯನ್ನಾಗಿ ಮಾಡುತ್ತೇನೆ ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಜೂ.೧೪ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಂದು ಮಧ್ಯಾಹ್ನ ೧೨-೦೫ಕ್ಕೆ ಸೋಲಾಪುರ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಹೊರಟು ಮಧ್ಯಾಹ್ನ ೧೨-೫೦ಕ್ಕೆ ವಿಜಯಪುರ ಜಿಲ್ಲೆಯ ಇಂಡಿಗೆ ಆಗಮಿಸಿ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಬೃಹತ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ೫೦೦ ಕೋಟಿ ಗಡಿಯನ್ನು ದಾಟಿರುವ ಹಿನ್ನಲೆಯಲ್ಲಿ ಕೆ.ಕೆ.ಆರ್.ಟಿ.ಸಿ. ಬಸ್‌ಗೆ ಪೂಜೆ ಸಲ್ಲಿಸಲಿದ್ದಾರೆ.ಮಧ್ಯಾಹ್ನ ೧-೧೫ಕ್ಕೆ ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಇಂಡಿ ವಿಧಾನಸಭಾ ಮತಕ್ಷೇತ್ರದ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಹಾಗೂ ಲಿಂಬೆ ಅಭಿವೃದ್ದಿ ಮಂಡಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸಂಜೆ ೪-೩೦ಕ್ಕೆ ಇಂಡಿಯಿಂದ ಹೊರಟು ಸೋಲಾಪುರ ಮಾರ್ಗವಾಗಿ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಜಿಲ್ಲಾ ಪ್ರವಾಸ ವಿವರವಿಜಯಪುರ: ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ…
ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಆತ್ಮೀಯ ಬೀಳ್ಗೊಡುಗೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶುಕ್ರವಾರ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.ಜಿಲ್ಲಾಡಳಿತದಿಂದ ವತಿಯಿಂದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರನ್ನು ಕುಟುಂಬ ಸದಸ್ಯರೊಂದಿಗೆ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದೊಂದಿಗೆ ಬೆರೆತು ಜನರ ಮನಸ್ಸನ್ನು ಗೆದ್ದಂತಹ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಇತರರಿರೂ ಮಾದರಿಯಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ವಿಜಯಪುರದಿಂದ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ನನ್ನ ಎರಡು ವರ್ಷಗಳವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ನನ್ನ ಮನಸ್ಸಿನಲ್ಲಿಯೇ ಅಚ್ಚಳಿಯದೇ ಉಳಿಯುವಂತೆ ಮಾಡಿದೆ. ಜಿಲ್ಲೆಯ ನೆನಪುಗಳು ಜೀವನದುದ್ದಕ್ಕೂ ನನ್ನ ಜೊತೆಗಿರಲಿವೆ. ಇಲ್ಲಿನ ಜನರು ವಿಶಾಲ…
