ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇದೇ ಅಗಸ್ಟ್ 20 ಬುಧವಾರದಿಂದ ಆರಂಭವಾಗಬೇಕಿದ್ದ 2025-26 ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂದೂಡಲ್ಪಟ್ಟಿದೆ.
ಜಿಲ್ಲೆಯ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲಾ ಆಶ್ರಯದಲ್ಲಿ ಸಂಯೋಜಿಸಿರುವ ಈ ಕ್ರೀಡಾಕೂಟ ಮಳೆ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಅಗಸ್ಟ್ 20 ಹಾಗೂ 21 ದಿನಾಂಕದಂದು ಜರುಗಿಸಲು ಕಷ್ಟಕರವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇಲ್ಲಿ ಬಿಟ್ಟು ಬಿಡದೇ ಅಗಾಗ ಮಳೆ ಜರಿಯುತ್ತಿದೆ. ಆಟದ ಅಂಕಣಗಳು ಮಳೆಯಿಂದ ಒದ್ದೆಯಾಗಿದ್ದು ಭಾಗಶಃ ಸ್ಪಧೆ೯ಗಳು ಈ ಸಮಯದಲ್ಲಿ ನಡೆಸವುದು ಕಷ್ಟಸಾಧ್ಯವಾಗಿದೆ. ಈಗಾಗಲೇ ಕ್ರೀಡಾಕೂಟದ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳನ್ನು ಪೂರ್ಣಪ್ರಮಾಣದಲ್ಲಿ ಮಾಡಿಕೊಳ್ಳಲಾಗಿತ್ತು.ಇದೀಗ ಕ್ರೀಡಾಕೂಟ ನಡೆಸಲು ನಿರಂತರವಾಗಿ ಸುರಿಯುತ್ತಿರುವ ಮಳೆ ಅಡ್ಡಿಪಡಿಸಿದೆ. ಈ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ಕ್ಷೇತ ಶಿಕ್ಷಣಾಧಿಕಾರಿ ವಸಂತ ರಾಠೋಡ ಹಾಗೂ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ಅವರ ಮಾರ್ಗದರ್ಶನ, ಸೂಚನೆ ಅನ್ವಯ ಕ್ರೀಡಾಕೂಟವನ್ನು ಮಳೆ ಕ್ಷೀಣಿಸುವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕ್ರೀಡಾಕೂಟ ಆಯೋಜನೆಯ ಮುಂದಿನ ನಿಗದಿಪಡಿಸಿದ ದಿನಾಂಕವನ್ನು ನಂತರ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಮೂಲಕ ಕ್ರೀಡಾ ಸ್ಪಧಾಳುಗಳಿಗೆ ತಿಳಿಸಲಾಗುವುದು ಎಂದು ಕ್ರೀಡಾಕೂಟದ ಸಂಘಟನಾ ಅಧ್ಯಕ್ಷ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹಾಗೂ ಸಂಘಟನಾ ಕಾರ್ಯದರ್ಶಿ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.