ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಹಡಲಸಂಗ ಗ್ರಾಮದ ಮನೆಗಳು ಬಿದ್ದು ಹಾನಿಯಾಗಿದೆ. ಗ್ರಾಮದ ಭಿಮಸೇನ ರಜಪೂತ, ಭೀಮಾಶಂಕರ ಮಂದೇವಾಲೆ, ಕಲ್ಲಪ್ಪ ನಾಟಿಕಾರ, ದೌಲತ ವಾಲಿಕಾರ, ಶಿವಪ್ಪ ಕಟ್ಟಿಮನಿ, ಹೇಮಸಿಂಗ ಷಮಶಾಪುರ, ಶಂಕರ ಲೋಧಿ ಸೇರಿದಂತೆ ಹತ್ತುಕ್ಕೂ ಹೆಚ್ಚು ಮನೆಗಳ ಬಿದ್ದಿವೆ. ಗ್ರಾಮಸ್ಥರಿಗೆ ಇರಲು ತೊಂದರೆ ಯಾಗುತ್ತಿದೆ ಶಾಲೆಯಲ್ಲಿ ಇರುವ ವ್ಯವಸ್ಥ ಮಾಡಲು ಗ್ರಾಮಸ್ಥರ ಆಗ್ರಹವಾಗಿದೆ.
ಯಾವದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಬಿಜೆಪಿ ದುರೀಣ ಕಾಸುಗೌಡ ಬಿರಾದಾರ ಭೇಟಿ ನೀಡಿದ್ದು, ಕೂಡಲೇ ಪರಿಹಾರಕ್ಕೆ ನೀಡಬೇಕು ಗ್ರಾಮಸ್ಥರಿಗೆ ಗಂಜಿ ಕೇಂದ್ರ ಸ್ಥಾಪಿಸಲು ಆಗ್ರಹಿಸಿದ್ದಾರೆ.
ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಶರಣಪ್ಪ ಉಡಚಾಣ ಇವರ ಮನೆ ಬಿದ್ದಿದೆ. ಯಾವದೇ ತರಹದ ಪ್ರಾಣ ಹಾನಿಯಾಗಿಲ್ಲ. ಮನೆಯಲ್ಲಿದ್ದ ಕಾಳು ನಷ್ಟವಾಗಿವೆ. ಮನೆಯವರು ಅಲ್ಲಿ ವಾಸಿಸದೇ ಶಾಲೆಯಲ್ಲಿ ವಾಸಿಸುತ್ತಿದ್ದಾರೆ.