ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ

27 ನೆಯ ದಿನದ ಶರಣ ಮಾಲಿಕೆಯಲ್ಲಿ ಡಾ.ಗಜಾನಂದ ಸೊಗಲನ್ನವರ ಅವರು ಹರಳಯ್ಯ ಮತ್ತು ಕಲ್ಯಾಣಮ್ಮ ಅವರ ಬಗೆಗೆ ಅತ್ಯಂತ ಅದ್ಭುತ ವಾಗಿ ಮಾತನಾಡಿದರು.
ಸಮಾನತೆಯ ಹರಿಕಾರರು, ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಕೊಟ್ಟವರು, ಲಿಂಗಪೂಜೆಯನ್ನು ಅರುಹಿ ದವರು, ಅನುಭವ ಮಂಟಪ ಸ್ಥಾಪಿಸಿ, ಅವರಿವರೆನ್ನದೆ ಎಲ್ಲರಿಗೂ ಅನುಭಾವ ಹಂಚಿಕೊಳ್ಳಲು ಅನುವು ಮಾಡಿಕೊಟ್ಟವರು ಬಸವಣ್ಣ ನವರು ಎಂದು ಹೇಳುತ್ತಾ, “ಕಳಬೇಡ, ಕೊಲಬೇಡ” “ಎನ್ನ
ಕಾಲೇ ಕಂಬ ” ” ವೇದಕ್ಕೆ ಒರೆ ಹಚ್ಚುವೆ ” ಎನ್ನುವ ಹಲವಾರು ಸರಳ ವಚನಗಳ ಪ್ರಸ್ತಾವನೆ ಮಾಡಿದರು.
ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿದ್ದ ಇವರು ಗುರುಲಿಂಗ ಜಂಗಮ ಸೇವೆಗೆ ತಮ್ಮ ತನುಮನಗಳನ್ನು ಮುಡುಪಾಗಿಟ್ಟಿದ್ದವರು. ಒಮ್ಮೆ ಬಸವಣ್ಣನವರನ್ನು ಮಾರ್ಗ ಮಧ್ಯದಲ್ಲಿ ಭೇಟಿಯಾದ ಹರಳಯ್ಯನವರು ಶರಣ ಬಸವವರಸ ಎಂದು ತಲೆಬಾಗಿ ವಂದಿಸಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು ಶರಣು ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದರು. ತಮ್ಮ ಒಂದು ಶರಣಾರ್ಥಿಗೆ ಬಸವಣ್ಣನವರು ಎರಡು ಶರಣಾರ್ಥಿ ಹೇಳಿದರು ಬಸವಣ್ಣನವರ ಒಂದು ಶರಣಾರ್ಥಿ ತಮ್ಮ ಮೇಲೆ ಹೊರೆಯಾಗಿ ಕುಳಿತಂತೆ ಭಾಸವಾಯಿತು ಹಳ್ಳಯ್ಯನವರಿಗೆ ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದರು. ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆಗಳನ್ನು ತಯಾರಿಸಿಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟರು.
ಬಸವಣ್ಣನವರು ಅವುಗಳ ಶ್ರೇಷ್ಠತೆಯನ್ನು ಹೊಗಳಿ ಅವುಗಳನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದರು. ಇನ್ನೊಂದು ಸಲ ಬಸವಣ್ಣನವರು ಹರಳಯ್ಯನ ಮನೆಗೆ ಬಂದು ಭೋಜನ ಸವಿದು ಹೋದದ್ದನ್ನು ಹಂಚಿಕೊಂಡರು.
ನಂತರ ನಡೆದ ಕಲ್ಯಾಣದ ಕ್ರಾಂತಿಗೆ ಕಾರಣವಾದ ಘಟನೆಗಳಲ್ಲಿ ಹರಳಯ್ಯನವರ ಮಗನ ಮದುವೆ ಮಧುವಯ್ಯನವರ ಮಗಳ ಜೊತೆ ನಡೆದದ್ದು ಮುಖ್ಯವಾದದ್ದು, ಎಂದು ಹೇಳುತ್ತಾ, ಶರಣರ ಕ್ರಾಂತಿಯ ಎಳೆಗಳನ್ನು ಹಂಚಿಕೊಂಡರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಉಪನ್ಯಾಸಕರ
ನುಡಿಗಳನ್ನು ಶ್ಲಾಘಿಸುತ್ತಾ, ಇಂದಿನ ವಿಷಯದ ಬಗೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ದತ್ತಿ ದಾಸೋಹಿಗಳಾದ ಸುಧಾ ಪಾಟೀಲ ಅವರು ತಮ್ಮ ತಾಯಿಯು ತಮ್ಮ ಜೀವನ ಚರಿತ್ರೆಯನ್ನು ಬರೆದಿಟ್ಟಿದ್ದು, ಅವರ ದಾಸೋಹ ಸೇವೆ, ಸಾಹಿತ್ಯದ ಅದಮ್ಯ ಪ್ರೀತಿ, ಆಧ್ಯಾತ್ಮದ ನಿಲುವನ್ನು ಹೇಳುತ್ತಾ, ಡಾ. ಶಶಿಕಾಂತ ಪಟ್ಟಣ ಸರ್ ಅವರು ಪ್ರಕಟಣೆ ಮಾಡಿದ ” ತಾಯಿದ್ರೆ ತವರೆಚ್ಚು”
ಪುಸ್ತಕದಲ್ಲಿ ತಮ್ಮ ತಾಯಿಯ ಬಗೆಗೆ ” ಸಾಹಿತ್ಯದ ಲೇಖನ ಬರೆದು ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು.
ಡಾ. ವೀಣಾ ಎಲಿಗಾರ, ಪ್ರೊ. ಶಾರದಾ ಪಾಟೀಲ ಮತ್ತು ಶ್ರೀ ಗಂಗಾಧರ ಸಾಲಕ್ಕಿ ಅವರು ಇಂದಿನ ಉಪನ್ಯಾಸಕರನ್ನು, ದತ್ತಿ ದಾಸೋಹಿಗಳ ಮತ್ತು ಸಂಘಟಿಕರ ಕಾರ್ಯತತ್ಪರತೆ ಯನ್ನು, ಡಾ. ಶಶಿಕಾಂತ ಪಟ್ಟಣ ಅವರು ವಚನ ಸಾಹಿತ್ಯ ಪ್ರಚಾರ ಮಾಡುವಲ್ಲಿ, ಮತ್ತು ಅದನ್ನು ಜನರಿಗೆ ತಲುಪಿಸುವಲ್ಲಿರುವ ಅವರ ನಿರಂತರ, ಅವಿರತ ಶ್ರಮದ ಬಗೆಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣೆ ಪೂಜಾ ಹಿರೇಮಠ ಅವರ ವಚನ ಪ್ರಾರ್ಥನೆ, ಪ್ರೊ. ರಾಜನಂದಾ ಘಾರ್ಗಿ ಅವರ ಸ್ವಾಗತ, ಶರಣೆ ಗೌರಾ ಹಾಲ ಭಾವಿ ಅವರ ಶರಣು ಸಮರ್ಪಣೆ, ಶರಣೆ ಡಾ. ಕಸ್ತೂರಿ ದಳವಾಯಿ ಅವರ ವಚನ ಮಂಗಳ ಮತ್ತು ಶರಣೆ ಬಸಮ್ಮ ಗಂಗನಳ್ಳಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 324
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 324
