ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಬರುವ ಸೆಪ್ಟಂಬರ್ ೧೩ ಮತ್ತು ೧೪ ರಂದು ಜರುಗಲಿರುವ ಕ್ಷೇತ್ರದ ಅಧಿಪತಿ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ೯೮ನೇ ಪುಣ್ಯಾರಾಧನೆಯ ನಿಮಿತ್ಯ “ಬಂಥನಾಳದ ಜ್ಞಾನ ದಾಸೋಹಿ ಶ್ರೀ ಸಂಗನಬಸವ ಮಹಾಶಿವಯೋಗಿಗಳ” ಜೀವನ ಚರಿತ್ರೆ ಕುರಿತ ಮಹಾಪುರಾಣ ಕಾರ್ಯಕ್ರಮದ ಪ್ರಾರಂಭೋತ್ಸವವನ್ನು ಇದೇ ಆಗಷ್ಟ ೨೪ ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬರುವ ಸೆಪ್ಟಂಬರ್ ೧೩ರ ವರೆಗೆ ಒಟ್ಟು ೨೧ ದಿನಗಳ ವರೆಗೆ ನಿತ್ಯ ಸಂಜೆ ೬ ಗಂಟೆಗೆ ಜರುಗಲಿರುವ ಈ ಮಹಾಪುರಾಣ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ತಿಮ್ಮಾಪೂರ – ಮುದಗಲ್‌ನ ಕಲ್ಯಾಣ ಆಶ್ರಮದ ಹೆಸರಾಂತ ಪ್ರವಚನಕಾರ ಶ್ರೀ ಮಹಾಂತ ಸ್ವಾಮೀಜಿ ಭಾಗವಹಿಸಿ ನಿತ್ಯ ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಬಂಥನಾಳ ಹಾಗೂ ಲಚ್ಯಾಣ ಮಠದ ಪೂಜ್ಯ ಪೀಠದ ಪೀಠಾಧೀಶ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಮುಗಳಖೋಡದ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಹಾಗೂ ಯರನಾಳದ ಗುರು ಸಂಗನಬಸವ ಮಹಾಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ.
ಗವಾಯಿಗಳಾಗಿ ಕಲ್ಲೂರಿನ ಶಂಕರಯ್ಯ ಆರ್. ಗುರುಮಠ, ತಬಲಾ ವಾದಕರಾಗಿ ಗದಗನ ಬಸವರಾಜ ಹೊನ್ನಿಗನೂರ, ವಯೋಲಿನ ಕಲಾವಿದರಾಗಿ ಗೂಗವಾಡದ ಕೃಷ್ಣಾ ಅಂದಾನಿ ಭಾಗವಹಿಸಿ ನಿತ್ಯ ಕಲಾ ಸೇವೆ ಸಲ್ಲಿಸಲಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.