Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಚ್ಚುಕಟ್ಟಾಗಿ ಕ್ರೀಡಾಕೂಟ ಸಂಯೋಜನೆ | ಆಟೋಟಗಳ ರಸದೌತಣ ಸವಿದ ಕ್ರೀಡಾಪ್ರಿಯರು ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವವಿಜಯಪುರ: ಜಿಲ್ಲೆಯ ಆಲಮಟ್ಟಿಯ ರಾವಬಹದ್ದೂರ ಡಾ. ಫ.ಗು.ಹಳಕಟ್ಟಿ ಪ್ರೌಢಶಾಲಾ ಅಂಗಳದಲ್ಲಿ ಕ್ರೀಡಾ ಹಬ್ಬದ ಸಡಗರ, ಸಂಭ್ರಮ ಜೋರಾಗಿತ್ತು.ಪ್ರಸಕ್ತ 2025-26 ನೇ ಸಾಲಿನ ನಿಡಗುಂದಿ “ಎ” ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಎರಡು ದಿನಗಳ ಕಾಲ ಕ್ರೀಡಾ ಪ್ರಿಯ ಅಭಿಮಾನಿಗಳಿಗೆ ಸಖತ್ ರಸದೌತಣ ನೀಡಿತು. ಆಲಮಟ್ಟಿಯ ಹಳಕಟ್ಟಿ ಪ್ರೌಢಶಾಲೆ ಅತಿಥ್ಯದಲ್ಲಿ ಸಂಯೋಜನೆಗೊಂಡಿದ್ದ ಈ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಶನಿವಾರ ಮುಕ್ತಾಯವಾಯಿತು.ನೂರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ವಿವಿಧ ಆಟೋಟಗಳ ಸ್ಪಧೆ೯ಯಲ್ಲಿ ಭಾಗವಹಿಸಿ ತಮ್ಮ ಆಟಗಳ ಕೌಶಲ್ಯ, ವಿಶೇಷ ಕಸರತ್ತು ಪ್ರದರ್ಶಿಸುವ ಮೂಲಕ ಕ್ರೀಡಾ ಪ್ರೇಮಿಗಳ ಮನ ಗೆದ್ದರು. ಬಾಲಕ,ಬಾಲಕಿಯರ ವಿಭಾಗದ ಗುಂಪು ಆಟಗಳಾದ ವಾಲಿಬಾಲ್, ಕಬಡ್ಡಿ, ಖೋಖೋ, ಥ್ರೋಬಾಲ್ ಪಂದ್ಯಗಳು ಆರಂಭದಿಂದಲೂ ಅಂತ್ಯದವರೆಗೂ ತೀವ್ರತರ ಹಣಾಹಣಿಯಿಂದ ಜರುಗಿದವು. ಅದರಲ್ಲೂ ಸೆಮಿ ಫೈನಲ್, ಫೈನಲ್ ಪಂದ್ಯಗಳನ್ನು ಪ್ರೇಕ್ಷಕರು ತುದಿಗಾಲ ಮೇಲೆ ನಿಂತು ತಮ್ಮ ಊಸಿರು ಬಿಗಿಹಿಡಿದು ನೋಡುವಂತಾಗಿತ್ತು. ಒಂದೊಂದು ಅಂಕ…
ವಿಜಯಪುರ ಬಂಜಾರಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾ ಗಣೇಶನ ಪ್ರತಿಷ್ಠಾಪನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲೆಡೆ ವಿಘ್ನ ವಿನಾಶಕ ಗಣೇಶನ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಮನೆ ಮನೆಗಳಲ್ಲಿಯೂ ಗಣೇಶನ ಮೂರ್ತಿಗಳನ್ನು ಇಟ್ಟು ಜನರು ಭಕ್ತಿ ಭಾವದಿಂದ ಪೂಜೆ ಮಾಡುತ್ತಿದ್ದಾರೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಜಾನನ ಮೂರ್ತಿಗಳನ್ನು ಇಡಲು ಯುವ ಹೈಕಳು ಕುಣಿದು ಕುಪ್ಪಳಿಸಿ ಲಂಬೋಧರನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇಷ್ಟೆ ಅಲ್ಲ, ವಿವಿಧ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿಯೂ ಗಣೇಶನ ಮೂರ್ತಿ ಇಟ್ಟು ಪೂಜೆ ಮಾಡಲಾಗುತ್ತಿದೆ.ಹೀಗೆ ನಗರದ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ವರ್ಧಕ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರದಂದು ಮಣ್ಣಿನ ‘ವಿದ್ಯಾಗಣಪತಿ’ಯನ್ನು ಪ್ರತಿಷ್ಠಾಪಿಸಲಾಯಿತು.ಬೆಳಗಿನ ಜಾವ ವಿದ್ಯಾರ್ಥಿಗಳು ಆದರ್ಶ ನಗರದ ‘ಗಣಪತಿ ದೇವಾಸ್ಥಾನದಿಂದ ಮೆರವಣಿಗೆಯ ಮೂಲಕ ವಿವಿಧ ವಾದ್ಯ ವೈಭಗಳೊಂದಿಗೆ ಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಪವಾರ ಮಾತನಾಡುತ್ತ, ವಿನಾಶ ಮತ್ತು ಪರಸ್ಪರ ಪ್ರೀತಿ, ವಿಶ್ವಾಸ, ವಾತ್ಸಲ್ಯದಿಂದ ಬೆರೆತು ಬಾಳಲು ಇಲ್ಲಿ ವಿವಿಧ ಚಟುವಟಿಕೆ ನಡೆಸಲಾಗಿದೆ.…
ವಿಜಯಪುರದ ಬಸವೇಶ್ವರ ಭವನದ 4 ನೇ ವಾಷಿ೯ಕೋತ್ಸವ ಸಮಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವಣ್ಣನವರ ತತ್ವ, ಸಿದ್ಧಾಂತಗಳು ಸಾರ್ವಕಾಲಿಕ ಪ್ರಸ್ತುತದಲ್ಲಿವೆ. ಜಗಕ್ಕೆ ನೀಡಿದ ಕಾಯಕ ತತ್ವದ ಮಹತ್ವ ಅತ್ಯಂತ ಶ್ರೇಷ್ಠತೆಯ ಶ್ರೇಣಿಯಲ್ಲಿ ಮಿನುಗಿವೆ ಎಂದು ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.ವಿಜಯಪುರ ನಗರದ ಶುಭಮಸ್ತು ಕಾಲೋನಿಯಲ್ಲಿ ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಭವನದ ನಾಲ್ಕನೇ ವಾಷಿ೯ಕೋತ್ಸವ ಸಮಾರಂಭ ಹಾಗೂ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಪವಿತ್ರತೆಯ ದಾರಿಮಾರ್ಗವನ್ನು ಸಮಾಜಕ್ಕೆ ಬಸವಣ್ಣನವರು ತೋರಿಸಿದ್ದಾರೆ ಎಂದರು.ಕಾಯಕ ಜೀವ ಬಸವಣ್ಣನವರು ಸಕಲರಿಗೂ ಮಾದರಿಯಾಗಿದ್ದಾರೆ. ಅವರು ಏನು ಹೇಳುತ್ತಿದ್ದರೋ ಅದನ್ನೇ ಮಾಡಿದ್ದಾರೆ. ನುಡಿದಂತೆ ನಡೆದಿರುವ ಬಸವಣ್ಣನ ಚಿಂತನೆಗಳು ಅನುಪಮವಾಗಿವೆ. ಸಮಾಜಕ್ಕೆ ಅತ್ಯಂತ ಸರಳ ರೀತಿಯಲ್ಲಿ ಕಾಯಕವೇ ಕೈಲಾಸ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಅದ್ಭುತ ಮಹಾನ ಚೇತನರಾಗಿದ್ದಾರೆ ಎಂದರು.ಬಸವಣ್ಣನವರ ಭಾವಾಧಾರದ ಮೇಲೆ ಇಲ್ಲಿ ಬಸವೇಶ್ವರ ಭವನ ನಿಮಿ೯ಸಿದ್ದು, ಭವನದ ನಾಲ್ಕನೇ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ಸೋಮಜಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಲಘಾಣ ವಲಯದ ಸೋಮಜಾಳ ಕಾರ್ಯಕ್ಷೇತ್ರದ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಆರ್.ಎಸ್ ನೀರಲಗಿ ವಹಿಸಿದ್ದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತೋಷ ಅಮರಗೊಂಡ ಮಾತನಾಡಿ, ಮಕ್ಕಳಿಗೆ ದುಶ್ಚಟಗಳಿಂದ ಆರೋಗ್ಯದ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿಹೇಳುವ ಮೂಲಕ ಮಾದಕ ವಸ್ತುಗಳ ಬಳಕೆ ಮಾಡಬಾರದು ಹಾಗೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ, ಯೋಗ, ಧ್ಯಾನ ಪ್ರಾಣಾಯಾಮ ಮಾಡುವ ಹವ್ಯಾಸ ರೂಢಿಸಿಕೊಳ್ಳಿ ಎಂದರು.ಶಿಕ್ಷಕ ಬಿ. ಎಸ್. ಅರಳಗುಂಡಗಿ ಮಾತನಾಡಿ ಯೋಜನೆಯ ಧ್ಯೇಯೋದ್ದೇಶಗಳ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.ಎಸ್. ಪಿ. ಕಲ್ಲೂರು, ಬಿ ಎಂ. ಕಡಲಗೊಂಡ, ಎನ್. ಎಸ್. ಬಿರಾದಾರ, ಬಿ. ಎಸ್. ಬಿರಾದಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯ ಮೇಲ್ವಿಚಾರಕಿ ಸವಿತಾ ಪೂಜೇರಿ, ಯೋಜನೆಯ ಕಾರ್ಯ ಕ್ರಮಗಳ ಕುರಿತು ಮಾಹಿತಿ ನೀಡಿದರು.ಎಲ್ಲ ಶಿಕ್ಷಕ ವೃಂದದವರು ಮತ್ತು ಸಿ ಎಸ್ ಸಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಶ್ರಾವಣ ಮಾಸದಲ್ಲಿ ಗದ್ದುಗೆಯಲ್ಲಿ ಇಟ್ಟು ಪೂಜಿಸುವ ಟೆಂಗಿನಕಾಯಿ 5,71,001 ರೂ. ಗೆ ಹರಾಜಾಗಿದೆ.ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಮಾಳಿಂಗರಾಯ ಗದ್ದುಗೆಯಲ್ಲಿ ಪೂಜೆ ಮಾಡಿದ ತೆಂಗಿನಕಾಯಿಯನ್ನು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಮಹಾವೀರ ಹರಕೆ ಅತಿ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟು ತಮ್ಮದಾಗಿಸಿಕೊಂಡಿದ್ದಾರೆ. ಹಿಂದೊಮ್ಮೆ ಮಾಳಿಂಗರಾಯನ ಜಾತ್ರೆಯಲ್ಲಿ ಗದ್ದುಗೆ ಕಾಯಿಯನ್ನು ಮಹಾವೀರ ಅವರು 6,50,001 ರೂ. ಪಡೆದುಕೊಂಡಿದ್ದರು.ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳು ಗದ್ದುಗೆ ಮೇಲೆ ತೆಂಗಿನಕಾಯಿ ಇಟ್ಟು ಪೂಜೆ ಮಾಡಲಾಗುತ್ತದೆ. ಶ್ರಾವಣ ಮಾಸ ಮುಕ್ತಾಯದ ಬಳಿಕ ಮಾಳಿಂಗರಾಯರ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಪ್ರಸಕ್ತ ವರ್ಷ ಜಾತ್ರೆ ವೇಳೆ ಭಾನುವಾರ ನಡೆದ ಹರಾಜಿನಲ್ಲಿ ಆಶೀರ್ವಾದ ಕಾಯಿ ಪಡೆಯುವಲ್ಲಿ ಮಹಾವೀರ ಯಶಸ್ವಿಯಾದರು.ಗದ್ದುಗೆಯ ತೆಂಗಿನಕಾಯಿ ಪಡೆಯಲು ಹರಾಜಿನಲ್ಲಿ ಮೂವರ ನಡುವೆ ಪೈಪೋಟಿ ಶುರುವಾಗಿತ್ತು. ಮಹಾವೀರ ಅವರ ಜೊತೆಗೆ ಚಿಕ್ಕಲಕಿ ಗ್ರಾಮದ ಮುದುಕಪ್ಪ ಪಟೇದಾರ, ಗೋಠೆ ಗ್ರಾಮದ ಸದಾಶಿವ ಮೈಗೂರ ಸ್ಪರ್ಧೆಗೆ ಇಳಿದಿದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಒಬ್ಬರ ಬಳಿಕ ಮತ್ತೊಬ್ಬರು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಲ್ಲಿನ ಅಂಜುಮನ ಎ ಇಸ್ಲಾಂ ಸಂಸ್ಥೆಯ ಚುನಾವಣೆಯನ್ನು ತ್ವರಿತವಾಗಿ ನಡೆಸಬೇಕು. ವಿಳಂಬಿಸಿದಲ್ಲಿ ಆ೨೯ ರಂದು ಸಮುದಾಯದೊಂದಿಗೆ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಸ್ಥೆಯ ಮಾಜಿ ಸದಸ್ಯ ಮಹೆಬೂಬ ಅತ್ತಾರ ತಮ್ಮ ಬೆಂಬಲಿಗರೊಂದಿಗೆ ಇಲ್ಲಿನ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಸಂಸ್ಥೆಗೆ ದಿನಾಂಕ: ೧೯-೦೬-೨೦೨೫ ರಂದು ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಹಾಗಾಗಿ ಚುನಾವಣೆ ಪ್ರಕ್ರೀಯೆಯನ್ನು ತಕ್ಷಣವೇ ಪ್ರಾರಂಭಿಸಿ ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ವಿನಂತಿಸುತ್ತೇನೆ. ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ತ್ವರಿತವಾಗಿ ನಡೆಸುವದು ಸಂಸ್ಥೆಯ ಹಿತಾಸಕ್ತಿ ಹಾಗೂ ಸದಸ್ಯರ ಹಕ್ಕಾಗಿದೆ. ಕೂಡಲೇ ಚುನಾವಣಾ ಪ್ರಕ್ರೀಯೆಯನ್ನು ಪ್ರಾರಂಭಿಸಬೇಕು ತಪ್ಪಿದ್ದಲ್ಲಿ ಸಮುದಾಯದವರೊಂದಿಗೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.ಮನವಿ ಪತ್ರಕ್ಕೆ ಸಿರಾಜ ಮೋಮಿನ್, ಇರ್ಫಾನ್ ಕೂಡಗಿ, ಹುಸೇನಭಾಷಾ ಮುಲ್ಲಾ, ಕೆ.ಎ.ರಿಸಾಲದಾರ, ಆರ್.ಎಂ.ಮುದ್ನಾಳ, ಎಂ.ಬಿ.ಮಕಾಂದಾರ, ಇಸಾಕ ಮಕಾಂದಾರ, ಸುಲೇಮಾನ ಮಮದಾಪೂರ, ಎ.ಡಿ.ಗೋಲಂದಾಜ, ಯು.ಡಿ.ಚೌದರಿ, ಎಂ.ಎಚ್.ನದಾಫ್, ಎ.ಎ.ನಾಯ್ಕೋಡಿ, ಎ.ಎಸ್.ಮೋಮಿನ, ಎಸ್.ಎಚ್.ಜಾನ್ವೇಕರ, ಎಚ್.ಬಿ.ಸಾಲಿಮನಿ, ಎಂ.ಎ.ಮೋಮಿನ್ ಸಹಿ ಹಾಕಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಭವನದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಮೂರು ತಾಲೂಕಿನ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.ಈ ಸಭೆಯಲ್ಲಿ ಸಚಿವರು ಸಮರ್ಪಕವಾಗಿ ಕಾರ್ಯನಿರ್ವಹಿಸದ ವಿವಿಧ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಟ್ಟುನಿಟ್ಟಾಗಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕೆಂದು ಸೂಚಿಸಿದರು.ತಾಲೂಕಿನ ಮನಗೂಳಿ, ಮಸೂತಿ ಗ್ರಾಮದಲ್ಲಿರುವ ಸರ್ಕಾರಿ ಜಮೀನು ಸರ್ವೆ ಮಾಡುವಂತೆ ಸೂಚಿಸಿದರೂ ಎಡಿಎಲ್ಆರ್ ಬಿ.ಬಿ.ವಗ್ಗನವರ ಸರಿಯಾಗಿ ಸ್ಪಂದಿಸದೇ ಇರುವದನ್ನು ಗಮನಿಸಿದ ಸಚಿವರು ಅವರನ್ನು ತರಾಟೆಗೆ ತೆಗೆದುಕೊಂಡು ನಾನು ನಿಮಗೆ ಸರ್ಕಾರಿ ಜಮೀನು ಸರ್ವೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದರೂ ಮೂರು ತಿಂಗಳು ಆಗುತ್ತಾ ಬಂದರೂ ನೀವು ವರದಿ ನೀಡಿಲ್ಲ. ಸರ್ಕಾರಿ ಜಮೀನು ಒತ್ತುವರಿ ಮಾಡುವಂತೆ ಮಾಡಿರುವದು ಗಮನಕ್ಕೆ ಬಂದಿದೆ. ಇದನ್ನು ಬಗೆಹರಿಸುವವರೆಗೂ ನಿನ್ನ ಬಿಡುವುದಿಲ್ಲ. ನೀನು ಪಾತಾಳಕ್ಕೆ ಹೋದರೂ ಬಿಡುವುದಿಲ್ಲ ಎಂದು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹೆಂಡತಿಯನ್ನು ಬರ್ಬರವಾಗಿ ಗತ್ಯಗೈದು ನಂತರ ಪಕ್ಕದ ಜಮೀನಿನ ಭಾವಿಯಲ್ಲಿ ಶವವನ್ನು ಎರಡು ಭಾಗ ಮಾಡಿ ಹಾಕಿದ ಘಟನೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ತೋಟದಲ್ಲಿ ನಡೆದಿದೆ. ಶವವನ್ನು ಹೊರ ತೆಗೆಯಲು ಪೊಲೀಸರು ಸಿದ್ಧತೆ ನಡೆಸಿದಾಗ ಭಾವಿಯಿಂದ ಅರ್ಧ ಶವ ಹೊರ ಬಂದಿದೆ ಇನ್ನೂ ಅರ್ಧ ಭಾಗದ ಹುಡುಕಾಟ ನಡೆದಿದೆ.ಗಣಿಹಾರ ಗ್ರಾಮದ ಪರಮಣ್ಣ ಷಣ್ಮುಖಪ್ಪ ಆನಗೊಂಡ ಎಂಬುವವರು ಪತ್ನಿ ನೀಲಮ್ಮಳನ್ನು(೪೬) ತಡರಾತ್ರಿ ಕೊಲೆ ಮಾಡಿ ಶವವನ್ನು ಪಕ್ಕದ ಮಹಿಬೂಬಪಟೇಲ ಎಂಬುವವರ ತೋಟದ ಜಮೀನಿನ ಭಾವಿಯಲ್ಲಿ ದೇಹವನ್ನು ಎರಡು ತುಂಡು ಮಾಡಿ ಕಲ್ಲು ಕಟ್ಟಿ ಎಸೆದಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ವಿಜಯಪುರ ಜಿಲ್ಲಾ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಂಡಿ ಡಿಎಸ್‌ಪಿ ಜಗದೀಶ ಎಚ್.ಎಸ್. ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ ಹಾಗೂ ಪಿಎಸ್‌ಐ ಆರೀಫ್ ಮುಷಾಪುರಿ, ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ದೇಹದ ಅರ್ಧ ಭಾಗವನ್ನು ಭಾವಿಯಿಂದ ತೆಗೆದು ಇನ್ನು ಅರ್ಧ ಭಾಗಕ್ಕೆ ಶೋಧನೆ ನಡೆಸಿದ್ದಾರೆ.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ:ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕಾ ಮಟ್ಟದ ಗುಂಪು ಆಟಗಳಲ್ಲಿ ಬಾಲಕರ ಕಬಡ್ಡಿ ಪ್ರಥಮ, ಬಾಲಕರ ವ್ಹಾಲಿಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ಖೋಖೋ ಪ್ರಥಮ, ಬಾಲಕರ ಟೆನಿಕ್ವಾಯಿಟ್ ಪ್ರಥಮ ಹಾಗೂ ಬಾಲಕಿಯರ ಟೆನಿಕ್ವಾಯಿಟ್ ದ್ವಿತೀಯ, ಬಾಲಕರ ಖೋಖೋ ದ್ವಿತೀಯ ಸ್ಥಾನಗಳನ್ನು ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ೪೫ಜನ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣೆ ಪ್ರಶಸ್ತಿಯನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇವರ ಸಾಧನೆಗೆ ಮಾರ್ಗದರ್ಶನ ನೀಡಿದ ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಚೇರಮನ್ನರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.
ಶಿವಶರಣೆ ಮಂಜುಳಾ ತಾಯಿಯವರ ಮೌನಾಷ್ಠಾನ ಮುಕ್ತಾಯ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನೂರಕ್ಕೆ ಪ್ರತಿಶತ ೯೯ರಷ್ಟು ಜನ ವಿಶ್ವದಲ್ಲಿ ಮಾತನಾಡತ್ತಾ ಇರುತ್ತಾರೆ. ಆದರೆ ಮೌನವಾಗಿರುವವರು ಅರ್ಧದಷ್ಟು ಮಾತ್ರ ಇರುತ್ತಾರೆ. ಮಾತನಾಡುವವರ ಮಧ್ಯದಲ್ಲಿ ಒಂದು ಪರ್ಯಂತ ಮೌನವಾಗಿರುವವರು ಎಂದರೆ ಮಂಜುಳಾ ತಾಯಿಯಂತವರು ಮಾತ್ರ ಎಂದು ಹುಬ್ಬಳ್ಳಿ ಮೂರುಸಾವಿರಮಠ ಮಹಾಸಂಸ್ಥಾನ ಜಗದ್ಗುರು ಡಾ.ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.ಸಿಂದಗಿ ಪಟ್ಟಣದ ಸಾತವಿರೇಶ್ವರ ಸಭಾಭವನದಲ್ಲಿರುವ ಶ್ರೀರೊಟ್ಟಿ ಲಿಂಗೇಶ್ವರ ದೇವಸ್ಥಾನದಲ್ಲಿ ಬಳಗಾನೂರ ಗ್ರಾಮದ ಶಿವಶರಣೆ ಮಂಜುಳಾ ತಾಯಿಯವರು ಲೋಕ ಕಲ್ಯಾರ್ಥವಾಗಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡ ಮೌನಾಷ್ಠಾನದ ಮುಕ್ತಾಯ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದರು.ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದೆ. ಈ ದೇಶದಲ್ಲಿರುವ ಸಂಸ್ಕೃತಿ ಬೇರಾವ ದೇಶದಲ್ಲಿ ಸಿಗದು. ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಮಾಡಿದ ಸಹಕಾರಗಳು ನಮಗೆ ದಾರಿ ದೀಪವಾಗಿವೆ. ನಮ್ಮ ಧರ್ಮದ ನಡೆ ನುಡಿ ಮುಂದಿನ ಪೀಳಿಗೆಗೆ ವರ್ಗಾಹಿಸುವುದು ನಮ್ಮೆಲ್ಲರ…
