ಶಿವಶರಣೆ ಮಂಜುಳಾ ತಾಯಿಯವರ ಮೌನಾಷ್ಠಾನ ಮುಕ್ತಾಯ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನೂರಕ್ಕೆ ಪ್ರತಿಶತ ೯೯ರಷ್ಟು ಜನ ವಿಶ್ವದಲ್ಲಿ ಮಾತನಾಡತ್ತಾ ಇರುತ್ತಾರೆ. ಆದರೆ ಮೌನವಾಗಿರುವವರು ಅರ್ಧದಷ್ಟು ಮಾತ್ರ ಇರುತ್ತಾರೆ. ಮಾತನಾಡುವವರ ಮಧ್ಯದಲ್ಲಿ ಒಂದು ಪರ್ಯಂತ ಮೌನವಾಗಿರುವವರು ಎಂದರೆ ಮಂಜುಳಾ ತಾಯಿಯಂತವರು ಮಾತ್ರ ಎಂದು ಹುಬ್ಬಳ್ಳಿ ಮೂರುಸಾವಿರಮಠ ಮಹಾಸಂಸ್ಥಾನ ಜಗದ್ಗುರು ಡಾ.ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.
ಸಿಂದಗಿ ಪಟ್ಟಣದ ಸಾತವಿರೇಶ್ವರ ಸಭಾಭವನದಲ್ಲಿರುವ ಶ್ರೀರೊಟ್ಟಿ ಲಿಂಗೇಶ್ವರ ದೇವಸ್ಥಾನದಲ್ಲಿ ಬಳಗಾನೂರ ಗ್ರಾಮದ ಶಿವಶರಣೆ ಮಂಜುಳಾ ತಾಯಿಯವರು ಲೋಕ ಕಲ್ಯಾರ್ಥವಾಗಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡ ಮೌನಾಷ್ಠಾನದ ಮುಕ್ತಾಯ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದೆ. ಈ ದೇಶದಲ್ಲಿರುವ ಸಂಸ್ಕೃತಿ ಬೇರಾವ ದೇಶದಲ್ಲಿ ಸಿಗದು. ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಮಾಡಿದ ಸಹಕಾರಗಳು ನಮಗೆ ದಾರಿ ದೀಪವಾಗಿವೆ. ನಮ್ಮ ಧರ್ಮದ ನಡೆ ನುಡಿ ಮುಂದಿನ ಪೀಳಿಗೆಗೆ ವರ್ಗಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದಿನ ಯುವ ಜನಾಂಗ ಧಾರ್ಮಿಕ ಕಾರ್ಯಕ್ರಮಗಳು ಮರೆತ್ತಿದ್ದಾರೆ. ಅವರು ಬಿಟ್ಟು ಹೋದ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರ ಎಲ್ಲಿ ದೊರೆಯುತ್ತದೆ ಎಂದರೆ ನಮ್ಮ ಸನಾತನ ಧರ್ಮದಲ್ಲಿ ಸಿಗುತ್ತದೆ. ದಾರ್ಮಿಕ ಕಾರ್ಯಕ್ರಮದ ಮೂಲಕ ಸಂಸ್ಕಾರ ದೊರಕಿಸಿಕೊಟ್ಟು ಲೋಕ ಕಲ್ಯಾರ್ಥವಾಗಿ ಅನುಷ್ಠಾನಗೈದ ಮಹಾತಾಯಿಯವರಿಗೆ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿಒ ಒಂದು ತಿಂಗಳುಗಳ ಕಾಲ ಮೌನಾನುಷ್ಠಾನ ಗೈದ ಮಂಜುಳಾ ತಾಯಿ ಮಾತನಾಡಿ, ಅನಾದಿಕಾಲದಿಂದಲೂ ಮನಕುಲಕ್ಕೆ ರೊಟ್ಟಿಯ ಮಹತ್ವದ ಅರಿವು ಕೊಟ್ಟ ರೊಟ್ಟಿ ಲಿಂಗೇಶ್ವರರಲ್ಲಿ ಒಂದು ದೊಡ್ಡ ಶಕ್ತಿಯಿದೆ. ಇಂತಹ ಮಹಾತ್ಮರ ಆಧ್ಯಾತ್ಮಿಕ ಜ್ಞಾನ ದೊರೆಯುತ್ತದೆ. ಈ ಅನುಷ್ಠಾನ ಸಿಂದಗಿ ಜನತೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಈ ಭೂಮಿಯಲ್ಲಿ ಬಂಗಾರದ ಬೆಳೆಯಿದೆ. ಅದನ್ನು ಬಿತ್ತಿ ಬೆಳೆದುಕೊ ಎಂದು ಪೂಜ್ಯಶ್ರೀ ಚೆನ್ನವೀರ ಶ್ರೀಗಳು ಹೇಳುತ್ತಿದ್ದರು. ಅದನ್ನು ಸಿದ್ದ ಪಡಿಸಿದ್ದು ಶಿವಶರಣೆ ಮಂಜುಳಾ ತಾಯಿಯವರ ಈ ಮೌನಾನುಷ್ಠಾನದ ಆಧ್ಯಾತ್ಮಿಕ ಜ್ಞಾನದ ಅನುಭವದಿಂದ ಗೊತ್ತಾಗಿದೆ ಎಂದು ತಿಳಿಸಿದರು.
ಕೊಟ್ಟೂರು ಶ್ರೀಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು, ಶಹಾಪುರ ಶ್ರೀಮಠದ ಸುಗೂರೇಶ್ವರ ಶಿವಾಚಾರ್ಯರು, ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಶಿವಶರಣೆ ರೇಣುಕಾದೇವಿ, ಸಹಕಾರಿ ದುರೀಣ ಶಿವನಗೌಡ ಬಿರಾದಾರ, ಶಿವಪ್ಪಗೌಡ ಬಿರಾದಾರ, ಅಶೋಕ ವಾರದ, ಎಂ.ಎಂ.ಹಂಗರಗಿ, ಆರ್.ಡಿ.ದೇಸಾಯಿ, ಆನಂದ ಶಾಬಾದಿ ಸೇರಿದಂತೆ ಅನೇಕರು ಇದ್ದರು.