ಅಚ್ಚುಕಟ್ಟಾಗಿ ಕ್ರೀಡಾಕೂಟ ಸಂಯೋಜನೆ | ಆಟೋಟಗಳ ರಸದೌತಣ ಸವಿದ ಕ್ರೀಡಾಪ್ರಿಯರು
ಉದಯರಶ್ಮಿ ದಿನಪತ್ರಿಕೆ
ವರದಿ: ಗುಲಾಬಚಂದ ಜಾಧವ
ವಿಜಯಪುರ: ಜಿಲ್ಲೆಯ ಆಲಮಟ್ಟಿಯ ರಾವಬಹದ್ದೂರ ಡಾ. ಫ.ಗು.ಹಳಕಟ್ಟಿ ಪ್ರೌಢಶಾಲಾ ಅಂಗಳದಲ್ಲಿ ಕ್ರೀಡಾ ಹಬ್ಬದ ಸಡಗರ, ಸಂಭ್ರಮ ಜೋರಾಗಿತ್ತು.
ಪ್ರಸಕ್ತ 2025-26 ನೇ ಸಾಲಿನ ನಿಡಗುಂದಿ “ಎ” ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಎರಡು ದಿನಗಳ ಕಾಲ ಕ್ರೀಡಾ ಪ್ರಿಯ ಅಭಿಮಾನಿಗಳಿಗೆ ಸಖತ್ ರಸದೌತಣ ನೀಡಿತು. ಆಲಮಟ್ಟಿಯ ಹಳಕಟ್ಟಿ ಪ್ರೌಢಶಾಲೆ ಅತಿಥ್ಯದಲ್ಲಿ ಸಂಯೋಜನೆಗೊಂಡಿದ್ದ ಈ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಶನಿವಾರ ಮುಕ್ತಾಯವಾಯಿತು.
ನೂರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ವಿವಿಧ ಆಟೋಟಗಳ ಸ್ಪಧೆ೯ಯಲ್ಲಿ ಭಾಗವಹಿಸಿ ತಮ್ಮ ಆಟಗಳ ಕೌಶಲ್ಯ, ವಿಶೇಷ ಕಸರತ್ತು ಪ್ರದರ್ಶಿಸುವ ಮೂಲಕ ಕ್ರೀಡಾ ಪ್ರೇಮಿಗಳ ಮನ ಗೆದ್ದರು. ಬಾಲಕ,ಬಾಲಕಿಯರ ವಿಭಾಗದ ಗುಂಪು ಆಟಗಳಾದ ವಾಲಿಬಾಲ್, ಕಬಡ್ಡಿ, ಖೋಖೋ, ಥ್ರೋಬಾಲ್ ಪಂದ್ಯಗಳು ಆರಂಭದಿಂದಲೂ ಅಂತ್ಯದವರೆಗೂ ತೀವ್ರತರ ಹಣಾಹಣಿಯಿಂದ ಜರುಗಿದವು. ಅದರಲ್ಲೂ ಸೆಮಿ ಫೈನಲ್, ಫೈನಲ್ ಪಂದ್ಯಗಳನ್ನು ಪ್ರೇಕ್ಷಕರು ತುದಿಗಾಲ ಮೇಲೆ ನಿಂತು ತಮ್ಮ ಊಸಿರು ಬಿಗಿಹಿಡಿದು ನೋಡುವಂತಾಗಿತ್ತು. ಒಂದೊಂದು ಅಂಕ ತಂಡಗಳು ಗಳಿಸುವಾಗ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ತಟ್ಟಿ ಆಟಗಾರರಿಗೆ ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದ ದೃಶ್ಯಗಳು ವೈಭವೋಪೇತವಾಗಿ ಕಂಡು ಬಂದವು. ವಲಯ ಮಟ್ಟದ ಕ್ರೀಡಾಕೂಟವಾಗಿದ್ದರೂ ಜಿಲ್ಲಾ ಮಟ್ಟದ ಹಂತದಲ್ಲಿ ಜರುಗಿದಂತೆ ಭಾಸವಾಗುತ್ತಿತ್ತು. ಅಷ್ಟೊಂದು ಸುವ್ಯವಸ್ಥಿತ ರೀತಿಯಲ್ಲಿ ಅಚ್ಚುಕಟ್ಟಾಗಿ ಕ್ರೀಡಾಕೂಟ ಸಂಯೋಜನೆಗೊಂಡಿತ್ತು.
ಈ ಭಾಗದ ಕ್ರೀಡಾ ಪ್ರೇಮಿಗಳು ಆಟಗಳ ಸವಿರಸ ಕಣ್ತುಂಬಿಸಿಕೊಂಡು ಸಂಭ್ರಮೋಲ್ವಾಸದಲ್ಲಿ ತೇಲಿದರು. ಅವರ ಖುಷಿ, ಸಂತಸ ಮೈದಾನದಲ್ಲಿ ಕೇಕೇ ಹಾಕುವ ಮೂಲಕ ಮಾರ್ದನಿಸುತ್ತಿತ್ತು. ಕೆಬಿಜೆಎನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ,-ಸಂಸ್ಥೆಗಳ ಮುಖ್ಯಸ್ಥರು, ಗಣ್ಯಮಾನ್ಯರು ಉದ್ಘಾಟನಾ ಸಮಾರಂಭದಲ್ಲಿ ಉತ್ಸಾಹದಿಂದ ಭಾಗಿಯಾಗಿ ತಮ್ಮ ಕ್ರೀಡಾಪ್ರೇಮ ಭಾವ ಮೆರೆದರು.
ಸಂಸ್ಥೆಯ ಪ್ರೇರಕ ಶಕ್ತಿಯಾಗಿರುವ ಪರಮಪೂಜ್ಯ ಗದುಗಿನ ತೋಂಟದ ಲಿಂ, ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ ದಿವ್ಯ ಪ್ರಕಾಶನದಲ್ಲಿ, ಸಂಸ್ಥೆಯ ಅಧ್ಯಕ್ಷರಾಗಿರುವ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳವರ ಕೃಪಾಶೀವಾ೯ದಿಂದ ಹಾಗೂ ಸಂಸ್ಥೆಯ ದಕ್ಷ ಆಡಳಿತಗಾರರಾಗಿರುವ ಕ್ರಿಯಾಶೀಲ ಕಾರ್ಯದರ್ಶಿಗಳು, ಶಿಕ್ಷಣ ತಜ್ಞರು ಅಗಿರುವ ಪ್ರೊ ಶಿವಾನಂದ ಪಟ್ಟಣಶೆಟ್ಟರ ರವರ ಸೂಕ್ತ ಮಾರ್ಗದರ್ಶನದಲ್ಲಿ ಹಾಗೂ ಬಸವನ ಬಾಗೇವಾಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ ರವರ ಹಾಗೂ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್.ಎಸ್.ಅವಟಿ ಅವರು ತೋರಿದ ಸಲಹೆ, ಸೂಚನೆಗಳ ಮಾರ್ಗಸೂಚಿಯನ್ವಯ ಕ್ರೀಡಾಕೂಟದ ಸಂಘಟನಾ ಅಧ್ಯಕ್ಷರಾದ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಸಂಘಟನಾ ಕಾರ್ಯದರ್ಶಿ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎತ್.ನಾಗಣಿ ಅವರ ನೇತೃತ್ವದಲ್ಲಿ ಜರುಗಿದ ಈ ಕ್ರೀಡಾಕೂಟಕ್ಕೆ ಎಸ್.ವಿ.ವಿ.ಅಂಗ ಶಿಕ್ಷಣ ಸಂಸ್ಥೆಗಳ ವೃತ್ತಿ ಬಾಂಧವರ ಸಹಕಾರ ಹಾಗೂ ನಿಡಗುಂದಿ ತಾಲೂಕಿನ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕ ಬಳಗದವರ ಅಮೂಲ್ಯ ನಿಣಾ೯ಯಕ ಕಾಯಕ ತತ್ವಗಳಿಂದ ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹದಿಂದ ಕ್ರೀಡಾಕೂಟ ಯಶಸ್ಸು ರೂಪದೊಂದಿಗೆ ಫಲಪ್ರದವಾಗಿ ಸ್ಮರಣೀಯ ನೋಟದದ ಸಮಾರೋಪ ಕಂಡಿದ್ದು ವಿಶೇಷ.
ನಿಡಗುಂದಿ ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಎಲ್.ಗಲಗಲಿ ಹಾಗೂ ದೈಹಿಕ ಶಿಕ್ಷಕ ವೃತ್ತಿ ಬಾಂಧವರಾದ ಶ್ರೀಮತಿ ಬಿ.ಎಸ್.ಶೀಲವಂತರ (ಸಾಂಸ್ಕೃತಿಕ ಕಾರ್ಯದಶಿ೯ಗಳು ಕನಾ೯ಟಕ ರಾಜ್ಯ ದೈಹಿಕ ಶಿಕ್ಷಣ ಸಂಘ ಬೆಂಗಳೂರು), ಜಿ.ಸಿ.ದ್ಯಾವಣ್ಣವರ, ಆರ್.ಎಸ್.ವಡ್ಡರ, ಎಂ.ಜಿ.ದಾನಮ್ಮನವರ, ಎನ್.ಬಿ.ದಾಸರ,ಯಲ್ಲಪ್ಪ ಬಿದ್ನಾಳ, ಎ.ಎಚ್.ಗುಂಡಿನವರ, ನಿಂಗಪ್ಪ ಟಿ, ಎಸ್.ರೆ.ಗುಳೇದಗುಡ್ಡ, ಪಾವಡೆಪ್ಪ ಗುಂಡಿನಪಲ್ವಿ, ಆರ್.ಕೆ.ಪವಾರ, ಬಿ.ಎಮ್.ಬಳಬಟ್ಟಿ, ಅಶೋಕ ಚಲವಾದಿ, ಪಿ.ಎಸ್.ನಾಯಕ, ಆರ್.ಆರ್.ಭಜಂತ್ರಿ, ಎಲ್.ಜಿ.ಚಲವಾದಿ, ವಿ.ಎಸ್.ಕುಲಕರ್ಣಿ, ಎಸ್.ಟಿ.ಬೀಳಗಿ, ಶ್ರೀಮತಿ ಎಸ್.ವಾಯ್.ಗೊಳಸಂಗಿ, ಮಂಜುನಾಥ ನಿಗರಿ, ಎಸ್.ಎಸ್.ಲೋಕಾಪುರ, ಎಚ್.ಎಚ್.ಬೀಳಗಿ, ಎಂ.ಜಿ. ದಾನಪ್ಪನವರ ಮೊದಲಾದ ಶಿಕ್ಷಕರು ವಿವಿಧ ಕ್ರೀಡೆಗಳ ನಿಣಾ೯ಯಕರಾಗಿ ಕಾರ್ಯ ನಿರ್ವಹಿಸಿ ಕಾಯಕ ಪ್ರಜ್ಞೆ ಮೆರೆದರು. ಎಂಎಚ್ಎಂ ಪಪೂ ಕಾಲೇಜು ಪ್ರಾಚಾರ್ಯರಾದ ಪ್ರಭುಸ್ವಾಮಿ ಹೇಮಗಿರಿಮಠ ಅವರು ತಮ್ಮ ಕಾಲೇಜು ಸಿಬ್ಬಂದಿಗಳೊಂದಿಗೆ ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದರು. ಉಪನ್ಯಾಸಕರಾದ ಎಚ್.ಎನ್.ಕೆಲೂರ, ಎಂ.ಎಸ್.ಸಜ್ಜನ, ಪ್ರಕಾಶ ಧನಶೆಟ್ಟಿ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ ಹಾಗೂ ಹೈಸ್ಕೂಲಿನ ಹಿರಿಯ ಶಿಕ್ಷಕರಾದ ಎನ್.ಎಸ್.ಬಿರಾದಾರ, ಎಸ್.ಆಯ್.ಗಿಡ್ಡಪ್ಪಗೋಳ, ಮಹೇಶ ಗಾಳಪ್ಪಗೋಳ, ಎಂ.ಎಚ್.ಬಳಬಟ್ಟಿ, ಎಂ.ಬಿ.ದಶವಂತ, ಆರ್.ಎಂ.ರಾಠೋಡ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಶಾಂತೂ ತಡಸಿ, ಸಚೀನ ಹೆಬ್ಬಾಳ, ಗಂಗಾಧರ ಹಿರೇಮಠ, ಡಿ.ಟಿ.ಸಿಂಗಾರಿ, ಟಿ.ಎಫ್.ದಾಸರ,ಗೋಪಾಲ ಬಸಪ್ಪ ಬಂಡಿವಡ್ಡರ, ಕವಿತಾ ಮರಡಿ, ಮಂಜುಳಾ ಸಂಗಾಪೂರ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ ಮೊದಲಾದವರು ಹಲವಾರು ಕಾಯಕಗಳನ್ನು ಸೇವಾ ಬದ್ದತೆಯಿಂದ ರಚನಾತ್ಮಕ ಗೈದು ಕ್ರೀಡಾಕೂಟದ ಅಚ್ಚುತನಕ್ಕೆ ಕಾರಣರಾದರು.