ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇಲ್ಲಿನ ಅಂಜುಮನ ಎ ಇಸ್ಲಾಂ ಸಂಸ್ಥೆಯ ಚುನಾವಣೆಯನ್ನು ತ್ವರಿತವಾಗಿ ನಡೆಸಬೇಕು. ವಿಳಂಬಿಸಿದಲ್ಲಿ ಆ೨೯ ರಂದು ಸಮುದಾಯದೊಂದಿಗೆ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಸ್ಥೆಯ ಮಾಜಿ ಸದಸ್ಯ ಮಹೆಬೂಬ ಅತ್ತಾರ ತಮ್ಮ ಬೆಂಬಲಿಗರೊಂದಿಗೆ ಇಲ್ಲಿನ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಸಂಸ್ಥೆಗೆ ದಿನಾಂಕ: ೧೯-೦೬-೨೦೨೫ ರಂದು ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಹಾಗಾಗಿ ಚುನಾವಣೆ ಪ್ರಕ್ರೀಯೆಯನ್ನು ತಕ್ಷಣವೇ ಪ್ರಾರಂಭಿಸಿ ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ವಿನಂತಿಸುತ್ತೇನೆ. ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ತ್ವರಿತವಾಗಿ ನಡೆಸುವದು ಸಂಸ್ಥೆಯ ಹಿತಾಸಕ್ತಿ ಹಾಗೂ ಸದಸ್ಯರ ಹಕ್ಕಾಗಿದೆ. ಕೂಡಲೇ ಚುನಾವಣಾ ಪ್ರಕ್ರೀಯೆಯನ್ನು ಪ್ರಾರಂಭಿಸಬೇಕು ತಪ್ಪಿದ್ದಲ್ಲಿ ಸಮುದಾಯದವರೊಂದಿಗೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.
ಮನವಿ ಪತ್ರಕ್ಕೆ ಸಿರಾಜ ಮೋಮಿನ್, ಇರ್ಫಾನ್ ಕೂಡಗಿ, ಹುಸೇನಭಾಷಾ ಮುಲ್ಲಾ, ಕೆ.ಎ.ರಿಸಾಲದಾರ, ಆರ್.ಎಂ.ಮುದ್ನಾಳ, ಎಂ.ಬಿ.ಮಕಾಂದಾರ, ಇಸಾಕ ಮಕಾಂದಾರ, ಸುಲೇಮಾನ ಮಮದಾಪೂರ, ಎ.ಡಿ.ಗೋಲಂದಾಜ, ಯು.ಡಿ.ಚೌದರಿ, ಎಂ.ಎಚ್.ನದಾಫ್, ಎ.ಎ.ನಾಯ್ಕೋಡಿ, ಎ.ಎಸ್.ಮೋಮಿನ, ಎಸ್.ಎಚ್.ಜಾನ್ವೇಕರ, ಎಚ್.ಬಿ.ಸಾಲಿಮನಿ, ಎಂ.ಎ.ಮೋಮಿನ್ ಸಹಿ ಹಾಕಿದ್ದಾರೆ.