ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹೆಂಡತಿಯನ್ನು ಬರ್ಬರವಾಗಿ ಗತ್ಯಗೈದು ನಂತರ ಪಕ್ಕದ ಜಮೀನಿನ ಭಾವಿಯಲ್ಲಿ ಶವವನ್ನು ಎರಡು ಭಾಗ ಮಾಡಿ ಹಾಕಿದ ಘಟನೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ತೋಟದಲ್ಲಿ ನಡೆದಿದೆ. ಶವವನ್ನು ಹೊರ ತೆಗೆಯಲು ಪೊಲೀಸರು ಸಿದ್ಧತೆ ನಡೆಸಿದಾಗ ಭಾವಿಯಿಂದ ಅರ್ಧ ಶವ ಹೊರ ಬಂದಿದೆ ಇನ್ನೂ ಅರ್ಧ ಭಾಗದ ಹುಡುಕಾಟ ನಡೆದಿದೆ.
ಗಣಿಹಾರ ಗ್ರಾಮದ ಪರಮಣ್ಣ ಷಣ್ಮುಖಪ್ಪ ಆನಗೊಂಡ ಎಂಬುವವರು ಪತ್ನಿ ನೀಲಮ್ಮಳನ್ನು(೪೬) ತಡರಾತ್ರಿ ಕೊಲೆ ಮಾಡಿ ಶವವನ್ನು ಪಕ್ಕದ ಮಹಿಬೂಬಪಟೇಲ ಎಂಬುವವರ ತೋಟದ ಜಮೀನಿನ ಭಾವಿಯಲ್ಲಿ ದೇಹವನ್ನು ಎರಡು ತುಂಡು ಮಾಡಿ ಕಲ್ಲು ಕಟ್ಟಿ ಎಸೆದಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ವಿಜಯಪುರ ಜಿಲ್ಲಾ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಂಡಿ ಡಿಎಸ್‌ಪಿ ಜಗದೀಶ ಎಚ್.ಎಸ್. ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ ಹಾಗೂ ಪಿಎಸ್‌ಐ ಆರೀಫ್ ಮುಷಾಪುರಿ, ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ದೇಹದ ಅರ್ಧ ಭಾಗವನ್ನು ಭಾವಿಯಿಂದ ತೆಗೆದು ಇನ್ನು ಅರ್ಧ ಭಾಗಕ್ಕೆ ಶೋಧನೆ ನಡೆಸಿದ್ದಾರೆ. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.