Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆ | ೩೫ ಕೋಲ್ಡ್ ಸ್ಟೋರೇಜ್ ರಫ್ತು ಗುಣಮಟ್ಟದ ಒಣ ದ್ರಾಕ್ಷಿ ಸಂಶೋಧನೆಗೆ ೨೦ ಎಕರೆ ಜಮೀನು ನೀಡಲು ಸಿದ್ಧ | ಸಚಿವ ಶಿವಾನಂದ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಲಾ ಮಕ್ಕಳಿಗೆ ಆರೋವರ್ಧಕವಾಗಿರುವ ಒಣದ್ರಾಕ್ಷಿ ವಿತರಣೆ ಕುರಿತು ವಿಜಯಪುರದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಜವಳಿ, ಕೃಷಿ ಮಾರುಕಟ್ಟೆ ಸಕ್ಕರೆಹಾಗೂ ಕಬ್ಬು ಅಭಿಣಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.ಭಾನುವಾರ ನಗರದಲ್ಲಿ ಮಹಾರಾಷ್ಟ್ರದ ಪುಣೆಯ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳ, ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ವಿತರಣೆ ಜೊತೆಗೆ ಒಣದ್ರಾಕ್ಷಿ ವಿತರಣೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿ, ವಿಜಯಪುರದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣ ಸಮೀಪದ ಉಪ್ಪಲದಿನ್ನಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಫೌಜಿ ಡಾಭಾ ಸಮೀಪದ ಸೈನಿಕ ಸರ್ಕಲ್ ಹತ್ತಿರ ಮನೆಗಳ ಕಳ್ಳತನಕ್ಕೆ ಹೊಂಚು ಹಾಕಿ ಕುಳಿತಿದ್ದ 9 ಜನ ಧರೋಡೆಕೋರರನ್ನು ಖಚಿತ ಮಾಹಿತಿ ಮೇರೆಗೆ ಹೆಡೆಮುರಿಕಟ್ಟುವಲ್ಲಿ ಕೊಲ್ಹಾರ ಠಾಣೆ ಪೊಲೀಸರು ಯಶಸ್ವಿಯಗಿದ್ದಾರೆ.ಕಳೆದ ಬುಧವಾರ ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಉಪ್ಪಲದಿನ್ನಿ ರಸ್ತೆಯಲ್ಲಿರುವ ಫೌಜಿ ಡಾಬಾ ಹತ್ತಿರದ ಕ್ರಾಸ್ ಮಾರ್ಗವಾಗಿ ಹೋಗಿ ಬರುವ ವಾಹನಗಳನ್ನು ನಿಲ್ಲಿಸಿ ಹಣ ಸುಲಿಗೆ ಹಾಗೂ ಹಳ್ಳದಗೆಣ್ಣೂರ ಗ್ರಾಮದಲ್ಲಿ ಒಂದು ಮನೆ ದರೋಡೆ ಮಾಡುವ ಉದ್ದೇಶದಿಂದ ಸದರಿ 9 ಜನ ಆರೋಪಿತರು ಮುಖಕ್ಕೆ ಕಪ್ಪು ಬಟ್ಟೆ, ಟವೆಲ ಕಟ್ಟಿಕೊಂಡು ತಮ್ಮ ಕೈಯಲ್ಲಿ ಖಾರದ ಪುಡಿ, ಕಬ್ಬಿಣದ ಸಲಾಕೆ, ಬಡಿಗೆ ಮುಂತಾದ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಹೊಂಚು ಹಾಕುತ್ತಾ ನಿಂತಿದ್ದನ್ನು ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ಎಂ.ಬಿ. ಬಿರಾದಾರ ಹಾಗೂ ಅಪರಾಧ ವಿಭಾಗದ ಪಿಎಸ್ಐ ಆರ್.ಹೆಚ್. ಹಳ್ಳಿ, ಎ.ಎಸ್.ಐ ಬಂದಗಿಸಾಬ ನಿಡೋಣಿ ಹಾಗೂ ಸಿಬ್ಬಂದಿಗಳಾದ ಜೈಭೀಮ ಶಾಂತಗಿರಿ, ರಾಜಕುಮಾರ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶ್ರಾವಣ ಮಾಸದ ಪ್ರಯುಕ್ತವಾಗಿ ಆರಂಭಗೊಂಡ ‘ಶ್ರೀಶಿವಯೋಗಿ ಸಿದ್ರಾಮೇಶ್ವರ ಪುರಾಣ’ಕ್ಕೆ ಗ್ರಾಮಸ್ಥರು ಆಗಮಿಸಿ ಆಲಿಸುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥಾನ ಹಿರೇಮಠದ ಬಸವಲಿಂಗಶ್ರೀಗಳು ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಶ್ರೀಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಆರಂಭಗೊಂಡ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪುರಾಣ ಇಂದು ಆರಂಭಗೊಂಡು ಸೆಪ್ಟೆಂಬರ್ ೩ ರವರೆಗೆ ಸಾಯಂಕಾಲ ೭.೦೦ ಗಂಟೆಯಿಂದ ೯.೦೦ ಗಂಟೆಯವರೆಗೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಪುನೀತರಾಗುವಂತೆ ಕರೆ ನೀಡಿದರು.ಆಲಮೇಲ ಗುರುಸಂಸ್ಥಾನಮಠದ ಚಂದ್ರಶೇಖರಶ್ರೀ, ಸ್ಥಳೀಯ ಚೌಕಿಮಠದ ಅಭಿನವ ಮುರುಗೇಂದ್ರಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ವಚನೋತ್ಸವ ಪುಸ್ತಕ ಬಿಡುಗಡೆ ಮಾಡಲಾಯಿತು,ಗುಳೆೆದಗುಡ್ಡದ ರೇವಣಸಿದ್ಧ ಸ್ವಾಮೀಜಿ, ನಿವೃತ್ತ ಶಿಕ್ಷಕ ಸಂಗನಗೌಡ ಪಾಟೀಲ, ವಿರೂಪಾಕ್ಷಯ್ಯ ಹಿರೇಮಠ(ಆಲಮೇಲ), ಹಿರೇಆಸಂಗಿಯ ಪುರಾಣಕಾರ ವೀರಬಸವ ಗದ್ದುಗೆಶ್ವರಮಠ, ಸಂಗೀತಗಾರ ಭಾಗೇಶ ರಾಣಾಪೂರ, ತಬಲಾವಾದಕ ಮಹಾಂತೇಶ ನರಿಬೋಳಿ ಹಾಗೂ ಗ್ರಾಮದ ಭಕ್ತರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಬಂಥನಾಳದ ಲಿಂಗೈಕೈ ಸಂಗನಬವಸ ಮಹಾಶೀವಯೋಗಿ “ವಿಜಾಪುರ ಜೆಲ್ಲೆಯಾದ್ಯಂತ ಶಿಕ್ಷಣ ಕ್ರಾಂತಿಮಾಡಿ ಜಿಲ್ಲೆಯ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತೆಮಾಡಿದ್ದಾರೆ ಎಂದು ಎಸ್. ವ್ಹಿ. ವ್ಹಿ. ಸಂಘದ ನಿರ್ದೇಶಕ ಅಪ್ಪಣ್ಣ ಕಲ್ಲೂರ ಹೇಳಿದರು.ರವಿವಾರ ಗ್ರಾಮದಲ್ಲಿ ಎಸ್. ವ್ಹಿ. ವ್ಹಿ. ಸಂಘದ ವತೆಯಿಂದ ಬಂಥನಾಳದ ಲಿಂಗೈಕ್ಯ ಸಂಗನಬಸವ ವiಹಾಶಿವಯೋಗಿಗಳ ೧೨೫ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಜಿಲ್ಲೆಯ ಶೈಕ್ಷಣ ಕ ಕ್ರಾಂತಿಯ ಹರಿಕಾರ, ಅಕ್ಷರ ದಾಸೋಹಿ ಬಂಥನಾಳದ ಲಿಂಗೈಕ್ಯ ಸಂಗನಬಸವ ವiಹಾಶಿವಯೋಗಿಗಳು ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಶಿಕ್ಷಣವೇ ಅತಿ ಮುಖ್ಯ ಸಾಧನ. ನಾಡಿನೆಲ್ಲೆಡೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವದರ ಮೂಲಕ ಪೂಜ್ಯರು ಶೈಕ್ಷಣ ಕ ಕ್ರಾಂತಿಯನ್ನೆ ಗೈದರು. ಅವರು ಜನರು ಕಣ ್ಣನಿಂದ ಮರೆಯಾದರೂ, ಅವರು ಮಾಡಿರುವ ಕಾರ್ಯಗಳು ಜನರ ಮನಿಸ್ಸಿನಲ್ಲಿ ಅಚ್ಚಳಿಯದೇ ಉಳದಿವೆ ಎಂದು ಸ್ಮರಿಸಿದರು.ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂಥನಾಳದ ಲಿಂಗೈಕ್ಯ ಸಂಗನಬಸವ ವiಹಾಶಿವಯೋಗಿಗಳ ಭಾವಚಿತ್ರಿ ಭವ್ಯ ಮೆರವಣ ಗೆ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ವ್ಹಿ.ವ್ಹಿ.ಸಂಘದ ಮಾಜಿ ಚೇರಮನ್ ಜಿ.ಎಸ್.ಹತ್ತಳ್ಳಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಜಯಪುರ ಜಿಲ್ಲೆಯನ್ನು ಶಿಕ್ಷಣವಂತರನ್ನಾಗಿ ಮಾಡಿ ಬೆಳಕು ಚೆಲ್ಲಿದ ಬಂಥನಾಳದ ಸಂಗನಬಸವ ಮಹಾ ಶಿವಯೋಗಿಗಳು ಎಂದು ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸದಸ್ಯ ಸಿದ್ದು ಹತ್ತಳ್ಳಿ ಹೇಳಿದರು.ತಾಲೂಕಿನ ತಾಂಬಾ ಗ್ರಾಮದಲ್ಲಿ ರವಿವಾರ ಸಂಗನಬಸವ ಸೌಹಾದ ಪತ್ತಿನ ಸಹಕಾರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಬಂಥನಾಳದ ಸಂಗನಬಸವ ಮಾಹಾ ಶಿವಯೋಗಿಗಳ ೧೨೫ನೇ ಜನ್ಮದಿನೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಅವರು ಜಂಗಮರ ಉದರದಲ್ಲಿ ಜನಿಸಿ ಸರಸ್ವತಿ ರೂಪ ತಾಳಿದ ಸಂಗನಬಸವ ಶಿವಯೋಗಿಗಳು ವಿಜಾಪೂರದಲ್ಲಿ ಬಂಗಾರೆಮ್ಮ ಸಜ್ಜನ ಅವರಿಂದ ಭೂಮಿ ದಾನ ಪಡೆದು ವಿಜಯ ಕಾಲೇಜು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯನ್ನು ಮತ್ತು ತಾಂಬಾ ಗ್ರಮದಲ್ಲಿ ವೃಷಭಲಿಂಗೇಶ್ವರ ವಿಧ್ಯಾ ಸಂಸ್ಥೆಯನ್ನು ತಮ್ಮ ಜೋಳಿಗೆಯಿಂದ ಪ್ರಾರಂಭಿಸಿದ ಕೀರ್ತಿ ಬಂಥನಾಳದ ಸಂಗನಬಸವ ಮಾಹಾ ಶಿವಯೋಗಿಗಳಿಗೆ ಸಲ್ಲುತ್ತದೆ.ಸಂಗನಬಸವ ಶಿವಯೊಗಿಗಳ ಬದುಕಿನಲ್ಲಿ ಹಲವಾರು ಪವಾಡ ಸದೃಷ್ಯ ಘಟೆನಗಳು ನಡೆದಿದ್ದವು. ಶಿಕ್ಷಣದ ಬಗ್ಗೆ ಅಫಾರ ಕಾಳಜಿ ಹೋಂದಿದ ಶ್ರೀಗಳು ೫೦ ವರ್ಷದ ಹಿಂದೆಯೆ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾದ್ಯ ಎಂದು ಬಲವಾಗಿ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಳೆದ ಐದಾರು ದಿನಗಳಿಂದ ಆಲಮೇಲ ಪಟ್ಟಣದಲ್ಲಿ ರಸ್ತೆ ತೆರವು ಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮಾಜಿ ಶಾಸಕ ರಮೇಶ್ ಭೂಸನೂರ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದಿನ ಹಲವಾರು ಹೋರಾಟಗಳಲ್ಲಿ ನಾನು ಭಾಗವಹಿಸಿ ನನ್ನ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ ಆಲಮೇಲ ಪಟ್ಟಣವನ್ನು ತಾಲೂಕು ಮಾಡಲು ಮತ್ತು ತಾಲೂಕು ಕಚೇರಿಗಳನ್ನು ತೆರೆಯಲು ನನ್ನ ಅಧಿಕಾರ ಅವಧಿಯಲ್ಲಿ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡಿದ್ದೇನೆ ಈಗಲೂ ಕೂಡ ಆಲಮೇಲದ ಜನತೆಯ ಜೊತೆಗೆ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನನ್ನ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ ಇಲ್ಲಿನ ಜನರ ಬೇಡಿಕೆಯಾಗಿರುವ ರಸ್ತೆ ಅಗಲೀಕರಣ ಮತ್ತು ರಸ್ತೆ ನಿರ್ಮಾಣ ಮಾಡುವುದಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.ಈ ಸಂದರ್ಭದಲ್ಲಿ ಹರೀಶ ಎಂಟಮಾನ, ಸಂಜು ಎಂಟಮಾನ, ಸೋಮನಾಥ ಮೇಲಿನಮನಿ, ಅಪ್ಪು ಶೆಟ್ಟಿ, ಪಿ.ಟಿ.ಪಾಟೀಲ, ಗುಂಡು ಮೇಲಿನಮನಿ, ಮದನ ರಜಪೂತ, ಶ್ರೀಶೈಲ ಭೋವಿ ಇದ್ದರು.
ಆಲಮೇಲ ಆರನೇ ದಿನಕ್ಕೆ ಕಾಲಿಟ್ಟ ಹೋರಾಟ | ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ರಮೇಶ ಬಂಟನೂರ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸಾಹಿತ್ಯದ ನೆಲೆಬೀಡು, ದೇಸಗತಿ ಮನೆತನದಲ್ಲಿ ಬರುವ ಆಲಮೇಲ, ಹಲವಾರು ವರ್ಷಗಳ ಹಿಂದೆ ಕಲಾದಗಿ ಎಂಬ ಜಿಲ್ಲೆ ಇತ್ತು ಆವಾಗ ಆಲಮೇಲ ಪರಗಣವಾಗಿತ್ತು ಅಂದಿನ ಕಾಲದಲ್ಲಿ ಆಲಮೇಲ ನಗರಕ್ಕೆ ಅನೇಕ ದಾರಿಗಳು ಇದ್ದವು ಅವುಗಳಲ್ಲಿ ಕೆಲವು ದಾರಿಗಳು ರಾಜಕೀಯ ಇಚ್ಚಾಶಕ್ತಿಯ ಕೊರತೆ ಯಿಂದ ಮುಚ್ಚಿಹೋದವು ಎಂದು ಆಲಮೇಲ ಪಟ್ಟಣದ ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ ಹೇಳಿದರು.ಅರು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಅನಿಧಿಷ್ಟಾವಧಿ ಧರಣಿಯ 5ನೇ ದಿನದ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಸಗತಿ ಮನೆತನದಲ್ಲಿ ಇದ್ದ ಈ ಪಟ್ಟಣವು ಊರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಅಗಸಿಗಳಿದ್ದವು ದೇವರ ಅಗಸಿ ಮೂಲಕ ಹೋಗುವ ರಸ್ತೆಗೆ ಊರಿನ ದಿಬ್ಬದ ಮೇಲೆ ಬಿಳಿಗುಡಿಯ ಆರಾದ್ಯದೈವ ಪೀರ ಗಾಲಿಸಾಬ ನೆಲೆಸಿದ್ದು ಈ ದರ್ಗಾಕ್ಕೆ ಹೋಗಲು ಆಗ ವಿಶಾಲವಾದ ರಸ್ತೆ ಇತ್ತು ಈಗ ಅದು ಒತ್ತುವರಿ…
ಚಂದ್ರಶೇಖರ ನುಗ್ಗಲಿ ಅವರಿಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪಟ್ಟ- ಅಭಿನಂದನಾ ಸಮಾರಂಭದಲ್ಲಿ ಸನ್ಮಾನದ ಝೇಂಕಾರ | ಬೈಕ್ ರ್ಯಾಲಿ ಹೋಂಕಾರ | ಮುಗಿಲು ಮುಟ್ಟಿದ ಶಿಕ್ಷಕ-ಅಭಿಮಾನಿಗಳ ಸಂಭ್ರಮ ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ಅವಳಿ ಜಿಲ್ಲೆಯ ಶಿಕ್ಷಕರ ಸಹಕಾರ, ರಾಜ್ಯದ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆಯ ಕಾರಣ ರಾಜ್ಯದ ೧.೮೦ ಲಕ್ಷ ಸದಸ್ಯರುಳ್ಳ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು ಎಂದು ಸಂಘದ ನೂತನ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ನಿಡಗುಂದಿ ತಾಲ್ಲೂಕು ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ೨೦೦ ಕ್ಕೂ ಹೆಚ್ಚು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶಿಕ್ಷಕರ ಬಹು ಬೇಡಿಕೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿಯ ಸಮಸ್ಯೆಯನ್ನು ಇದೇ ಸೆ.೫ ಶಿಕ್ಷಕರ ದಿನಾಚರಣೆಯೊಳಗೆ ಬಗೆಹರಿಸಲಾಗುವುದು, ೫೮ ಸಾವಿರ ಪದವಿಧರ ಪಿ.ಎಸ್.ಟಿ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡುವಿಕೆ, ಎಲ್.ಬಿ.ಎ (ಪಠ್ಯ ಆಧಾರಿತ ಚಟುವಟಿಕೆ) ಯಲ್ಲಿನ ಘಟಕ ಪರೀಕ್ಷಾ…
ಲೇಖನ- ಡಾ.ಮಲ್ಲಿಕಾರ್ಜುನ ಎಸ್ ಆಲಮೇಲಯಡ್ರಾಮಿಕಲಬುರಗಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಶ್ರಾವಣ ಮಾಸವು, ಅನಾದಿ ಕಾಲದಿಂದಲೂ ಹಿಂದುಗಳಿಗೆ ಪರಮ ಪವಿತ್ರವಾದ ಮಾಸ, ಒಂದೂ ಪೂಜೆ ಸಹ ನಡೆಯದ ದೇವಾಲಯಗಳಲ್ಲಿ ಭಕ್ತಿಯ ಜೇಂಕಾರ ಮೊಳಗುವದು, ಭಜನೆಗಳ ಗಾನಲಹರಿ ಹರಿಯುವದು, ಹಿಂದೂ ಪಂಚಾಂಗದ ಪ್ರಕಾರ ಎಲ್ಲಾ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಅದು ನಾಗರ ಪಂಚಮಿ ಅಂದರೆ ತಪ್ಪಾಗಲಾರದು.ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ, ವರಮಹಾಲಕ್ಷ್ಮಿ ಶ್ರೀ ಕೃಷ್ಣಾಷ್ಟಮಿ, ತಾಯಿಗೌರಿ ಸಮೇತ ಬರುವ ವಿಘ್ನನಿವಾರಕ ಶ್ರೀ ಗಣೇಶ ಚತುರ್ಥಿ,ಗ್ರಾಮೀಣ ಭಾಗದಿ ಆಚರಿಸಲ್ಪಡುವ ಜೊಖ್ಯಾನ (ಜೋಕುಮಾರ) ಅನಂತನ ಹುಣ್ಣಿಮೆ, ತದನಂತರದಿ ಬರುವ ಆದಿಪರಾಶಕ್ತಿಯ ಆರಾಧಿಸಲ್ಪಡುವ ನವರಾತ್ರಿ ಉತ್ಸವ, ಬೆನ್ನಹಿಂದೆಯೇ ಧರೆಯೆಲ್ಲ ಜ್ಯೋತಿರ್ಮಯವಾಗಿಸಲು ಬರುವಳು ಶ್ರೀ ಮಹಾಲಕ್ಷ್ಮಿದೀಪಾವಳಿಗೆ ಹೀಗೆ ಊರಿನ ಜಾತ್ರೆಗಳಿಗೂ ಎಲ್ಲ ಶುಭ ಆಚರಣೆಗಳಿಗೂ ಮೊದಲ ಮೆಟ್ಟಿಲು ನಾಗರ ಪಂಚಮಿ.ನಾಗರ ಪಂಚಮಿಈ ಹಬ್ಬಕ್ಕೆ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶರಣ ಮಾಸದ ನಾಲ್ಕನೆಯ ದಿವಸದ ಅನುಭಾವ ಮಾಲಿಕೆಯಲ್ಲಿ ಡಾ. ಪ್ರಿಯದರ್ಶನಿ ಉಗಲವಾಟ, ಸ್ತ್ರೀರೋಗ ತಜ್ಞರು, ಶ್ರೀ ವೆಂಕಟೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಾದಾಮಿ ಇವರು ಜುಲೈ 1 ನೆಯ ತಾರೀಕು ವೈದ್ಯರ ದಿನಾಚರಣೆ ಮತ್ತು ಬಿ.ಸಿ ರಾಯ್ ಅವರ ಜನ್ಮದಿನ ಮತ್ತು ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರನ್ನೂ ಸಹ ನೆನಪು ಮಾಡಿಕೊಳ್ಳುತ್ತಾ, ವೈದ್ಯರ ಪ್ರಾಮುಖ್ಯತೆಯೊಂದಿಗೆ ವೈದ್ಯ ಸಂಗಣ್ಣನವರ ಅನುಭಾವ ಮಾಲಿಕೆಯನ್ನು ಪ್ರಾರಂಭ ಮಾಡಿದರು.12 ನೆಯ ಶತಮಾನದ ವೈದ್ಯ ಸಂಗಣ್ಣನವರದು ವೈದ್ಯವೃತ್ತಿ. ಇವರ ಅಂಕಿತನಾಮ ಮರುಳ ಶಂಕರ ಪ್ರಿಯ ಸಿದ್ದರಾಮೇಶ್ವರ. ಇವರ 20 ವಚನಗಳು ಲಭ್ಯವಾಗಿವೆ. ಇವರ ವಚನಗಳಲ್ಲಿ ವೈದ್ಯ ವೃತ್ತಿಯ ಪರಿಭಾಷೆಯ ತತ್ವ, ನಾಡಿಗಳ ವಿವರ, ವ್ಯಾಧಿಗಳ ಬಗೆ, ಔಷಧಿಗಳ ಪ್ರಕಾರ ಎಲ್ಲವೂ ಲಭ್ಯವಾಗುತ್ತವೆ. ಇವೆಲ್ಲವೂ ಇವರ ವೈದ್ಯಶಾಸ್ತ್ರ ಪರಿಣಿತಿಯನ್ನು , ಅವುಗಳಿಗೆ ಇವರು ಜೋಡಿಸುವ ತಾತ್ವಿಕ ಪರಿವೇಶವನ್ನು ಏಕಕಾಲಕ್ಕೆ ಪ್ರಕಟಿಸುತ್ತವೆ. ವೈದ್ಯವೃತ್ತಿಯನ್ನು ತಮ್ಮ…
