ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಡೋಣಿ ತೀರದ ಗ್ರಾಮಗಳ ಜಮೀನುಗಳಲ್ಲಿ ಡೋಣಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಜಂಟಿ ಸಮೀಕ್ಷೆ ಕೈಗೊಂಡು ಒಟ್ಟು ಹಾನಿಗೊಳಗಾದ ಬೆಳೆಗಳ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ, ತಾಲ್ಲೂಕಿನ ಡೋಣಿ ತೀರದ ಗ್ರಾಮಗಳಾದ ಮಾರ್ಕಬ್ಬಿನಹಳ್ಳಿಯಲ್ಲಿ ೬೯.೦೮ ಹೆಕ್ಟೆರನಲ್ಲಿ ಹತ್ತಿ ಹಾಗೂ ತೊಗರಿ ಬೆಳೆಗಳು ಹಾಗೂ ೩.೬೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ, ಸಾತಿಹಾಳ ಗ್ರಾಮದ ೯೫.೯ ಹೆಕ್ಟೆರ್‌ನಲ್ಲಿ ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆಗಳು, ಹಾಗೂ ೧.೬೦ ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ, ಭೈರವಾಡಗಿ ಗ್ರಾಮದ ೮೭.೯೩ ಹೆಕ್ಟೆರ್‌ನಲ್ಲಿ ಹತ್ತಿ, ತೊಗರಿ, ಮೆಕ್ಕೆಜೋಳ ಬೆಳೆಗಳು. ೨೧.೩೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ಯಾಳವಾರ ಗ್ರಾಮದ ೯೯.೩೨ಹೆಕ್ಟೆರ್‌ನಲ್ಲಿ ಸೂರ್ಯಕಾಂತಿ, ತೊಗರಿ, ಹತ್ತಿ ಬೆಳೆಗಳು. ೨.೭೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ಕೊಂಡಗೂಳಿ ಗ್ರಾಮದ ೮೮.೩೪ ಹೆಕ್ಟೆರ್‌ನಲ್ಲಿ ತೊಗರಿ, ಹತ್ತಿ ಬೆಳೆಗಳು. ಕಡಕೋಳ ಗ್ರಾಮದ ೫೫.೨೩ ಹೆಕ್ಟೆರ್‌ನಲ್ಲಿ ಸೂರ್ಯಕಾಂತಿ, ತೊಗರಿ, ಹತ್ತಿ ಬೆಳೆಗಳು. ೦.೫೦ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ಹಂಚಲಿ ಗ್ರಾಮದ ೧೬.೬೧ಹೆಕ್ಟೆರ್‌ನಲ್ಲಿ ಹತ್ತಿ, ತೊಗರಿ ಬೆಳೆಗಳು. ನಾಗರಾಳ ಡೋಣ ಗ್ರಾಮದ ೨೭.೧೩ ಹೆಕ್ಟೆರ್‌ನಲ್ಲಿ ತೊಗರಿ,ಹತ್ತಿ ಬೆಳೆಗಳು. ಬಿ.ಬಿ. ಇಂಗಳಗಿ ಗ್ರಾಮದ ೧೫.೩೧ಹೆಕ್ಟೆರ್‌ನಲ್ಲಿ ತೊಗರಿ ಬೆಳೆ. ಜಾಲವಾದ ಗ್ರಾಮದ ೩೭.೦೨ ಹೆಕ್ಟೆರ್‌ನಲ್ಲಿ ಹತ್ತಿ, ಮೆಕ್ಕೆಜೋಳ, ತೊಗರಿ ಬೆಳೆಗಳು, ೩.೯೫ ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ಮಣ್ಣೂರ ಗ್ರಾಮದ ೩೮.೯೧ ಹೆಕ್ಟೆರ್‌ನಲ್ಲಿ ತೊಗರಿ ಬೆಳೆ. ದೇವೂರ ಗ್ರಾಮದ ೪೫.೧೩ಹೆಕ್ಟೆರ್‌ನಲ್ಲಿ ಸೂರ್ಯಕಾಂತಿ, ತೊಗರಿ, ಹತ್ತಿ ಬೆಳೆಗಳು. ೦.೮೦ ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ಬೂದಿಹಾಳ ಡೋಣ ಗ್ರಾಮದ ೫೬.೫೨ ಹೆಕ್ಟೆರ್‌ನಲ್ಲಿ ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಹತ್ತಿ ಬೆಳೆಗಳು. ೪.೧೫ಹೆಕ್ಟೆರ್‌ನಲ್ಲಿ ಉಳ್ಳಾಗಡ್ಡಿ ಬೆಳೆ. ದೇವರ ಹಿಪ್ಪರಗಿ ಪಟ್ಟಣದ ೧೨.೦೫ ಹೆಕ್ಟೆರ್‌ನಲ್ಲಿ ಕಬ್ಬು, ತೊಗರಿ, ಹೆಸರು, ಹತ್ತಿ ಬೆಳೆಗಳು ಹೀಗೆ ಒಟ್ಟು ೧೪ ಗ್ರಾಮಗಳ ೭೪೪.೪೮ ಹೆಕ್ಟೆರ್ ಪ್ರದೇಶದ ಕೃಷಿ ಬೆಳೆಗಳು ಹಾಗೂ ೮ ಗ್ರಾಮಗಳ ೩೮.೬೦ಹೆಕ್ಟೆರ್ ತೋಟಗಾರಿಕಾ ಬೆಳೆ ಉಳ್ಳಾಗಡ್ಡಿ ಹಾನಿಗೊಳಗಾಗಿವೆ.
ಡೋಣಿ ತೀರದ ಜಮೀನುಗಳಲ್ಲಿ ಹಾನಿಗೊಳಗಾದ ಜಂಟಿ ಬೆಳೆಗಳ ಮಾಹಿತಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಯಲ್ಲಿ ಲಗತ್ತಿಸಲಾಗಿದೆ. ಈ ಮಾಹಿತಿ ಕುರಿತು ಏನಾದರೂ ಆಕ್ಷೇಪಗಳಿದ್ದಲ್ಲಿ ಇದೇ ತಿಂಗಳ ದಿ:೧೦ ಬುಧವಾರ ಒಳಗಾಗಿ ತಹಶೀಲ್ದಾರ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕಾ ಕಚೇರಿಗಳಲ್ಲಿ ದೂರು ದಾಖಲಿಸಬಹುದಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಕೃಷಿ ಅಧಿಕಾರಿ ಶರಣಗೌಡ ಬಿರಾದಾರ ತಿಳಿಸಿದ್ದಾರೆ.