ಚಡಚಣ ತಾಲೂಕಿನ ಗ್ರಾಮಗಳ ಜಮೀನುಗಳಿಗೆ ಇಂಡಿ ಉಪವಿಭಾಗಾಧಿಕಾರಿ ಭೇಟಿ; ಬೆಳೆ ಹಾನಿ ಪರಿಶೀಲನೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನಲ್ಲಿ ಸುಮಾರು ದಿನಗಳಿಂದ ಸುರಿದ ವಿಪರೀತ ಮಳೆಯಿಂದ ರೈತರ ಜಮೀನುಗಳಲ್ಲಿ ಬೆಳೆದ ಮುಂಗಾರು ಬೆಳೆ ಸಂಪೂರ್ಣ ನೀರಿನಲ್ಲಿ ನಿಂತ ಪರಿಣಾಮವಾಗಿ ಸುಮಾರು ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ಬೆಳೆ ಹಾನಿಯ ಪರಿಹಾರ ಸರಕಾರದಿಂದ ಕೊಡಿಸಬೇಕು ಎಂಬ ಕೂಗೂ ರೈತರು ಹಾಗೂ ರೈತಪರ ಸಂಘಟನೆಗಳು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಮಾಡಿಕೊಂಡಿದ್ದರು.
ಚಡಚಣ ತಾಲೂಕಿನ ನಂದರಗಿ, ಚಣೇಗಾಂವ, ದೂಳಖೇಡ, ಶಿರಗೂರ ಖಾಲ್ಸಾ ಗ್ರಾಮ ಸೇರಿದಂತೆ ಜಿಗಜೇವಣಗಿ ಗ್ರಾಮಗಳಿಗೆ ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧ ವಸ್ತ್ರದ, ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಕೃಷಿ ಹಾಗೂ ತೊಟಗಾರಿಕೆ ಬೆಳೆ ಹಾನಿ ಕುರಿತು ಸಮಗ್ರವಾಗಿ ಪರಿಶೀಲಿಸಿ ಫಸಲು(ಬೆಳೆ) ಹಾನಿಗೊಳಗಾದ ರೈತರ ಜಮೀನಿನ ಜಿಪಿಎಸ್ ಪೋಟೊ ದೊಂದಿಗೆ ಯಾವ ಬೆಳೆ ಹಾನಿಯಾಗಿದೆ, ಎಷ್ಟು ಹೆಕ್ಟೇರ್ ಹಾನಿಯಾಗಿದೆ, ರೈತನ ಹೆಸರು ಹೀಗೆ ಹತ್ತು ಹಲವಾರು ವಿಷಯವನ್ನು ಲ್ಯಾಪ್ ಟಾಪ್ ಗಳಲ್ಲಿ ದಾಖಲಿಸಿಕೊಂಡಿರುವ ಅಧಿಕಾರಿಗಳು ಚಡಚಣ ತಾಲೂಕಿನ ಉಳಿದ ಗ್ರಾಮಗಳ ಜಮೀನುಗಳ ಬೇಳೆ ಹಾನಿ ಸಮೀಕ್ಷೆ ಕೆಲವು ದಿನಗಳಲ್ಲಿ ಮುಗಿಸಿದ ನಂತರ ಸರಕಾರಕ್ಕೆ ಸಂಪೂರ್ಣವಾದ ಮಾಹಿತಿ ಒದಗಿಸುವುದಾಗಿ ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ ವಿಜಯಪುರ ಸಿ. ಬಿ. ಕುಂಬಾರ, ಕೃಷಿ ಅಧಿಕಾರಿಗಳು ಹಾಗೂ ಚಡಚಣ ಕಂದಾಯ ನೀರಿಕ್ಷಕ ಜಿ.ಎಂ.ಬಿರಾದಾರ ಜಂಟಿಯಾಗಿ ಬೇಟಿ ನೀಡಿ ಮಳೆಯಿಂದ ಆದಂತಹ ಬೆಳೆ ಹಾನಿ ಪರಿಶೀಲಿಸಿದರು.