ಇಂಡಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸಿ ಅನುರಾಧಾ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ್ಯಾದಂತ ಭೀಮಾ ನದಿ ಪ್ರವಾಹದಿಂದ ಉಂಟಾದ ಬೆಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ಸಮೀಕ್ಷೆ ಪಡೆದು ಭೀಮಾ ನದಿ ಭಾದಿತ ಪ್ರದೇಶಗಳ ಬೆಳೆ ಹಾನಿ ವರದಿ ಒಂದೆರಡು ದಿನದಲ್ಲಿ ಸಿಗಲಿದ್ದು ಶೀಘ್ರವೇ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವದೆಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಹೇಳಿದರು.
ತಾಲೂಕಿನ ಭೀಮಾ ನದಿ ದಂಡೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭೀಮಾ ನದಿ ಪ್ರವಾಹದಿಂದ ಹಾನಿಯಾದ ಕೃಷಿ ಬೆಳೆಗಳನ್ನು ಜಂಟಿ ಸಮೀಕ್ಷೆ ಕೈಕೊಂಡ ಪಟ್ಟಿಯನ್ನು ಆಯಾ ಗ್ರಾ.ಪಂ ಗಳಲ್ಲಿ ಲಗ್ತಿಸಲಾಗಿದೆ. ಒಂದು ವಾರ ಕಾಲಾವಕಾಶ ಅಕ್ಷೇಪಣೆಗೆ ಸಲ್ಲಿಸಲು ನೀಡಿದೆ. ಅಂತಿಮ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವದು ಎಂದರು.
ಕಳೆದ ಹದಿನೈದು ದಿನಗಳಿಂದ ಮೇಲಿಂದ ಮೇಲೆ ಮಳೆ ಬರುತ್ತಿರುವದರಿಂದ ಸಮೀಕ್ಷೆಗೆ ಸೂಕ್ತ ಅವಕಾಶ ಸಿಗಲಿಲ್ಲ. ಈಗ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿರುವದರಿಂದ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಬೆಳೆ ಹಾನಿ ಪರಿಶೀಲಿಸಿದ ಎಸಿ – ತಾಲೂಕಿನ ಬಬಲಾದ ಸೇರಿದಂತೆ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಮಳೆಯಿಂದ ಆದ ಬೆಳೆ ಹಾನಿ ಪರಿಶೀಲನೆ ನಡೆಸಿದರು.
ಮಳೆಯಿಂದ ಹಾನಿಯಾದ ಹೆಸರು, ಹತ್ತಿ, ತೊಗರಿ, ಉಳ್ಳಾಗಡ್ಡೆ ಮತ್ತಿತರ ಬೆಳೆ ಪರಿಶೀಲಿಸಿದರು.
ಸಹಾಯಕ ನಿರ್ದೇಶಕರು ಕೃಷಿ ಮಹಾದೇವಪ್ಪ ಏವೂರ, ಪಿಡಿಒ ಬಬಲಾದ ಸಿದರಾಯ ಬಿರಾದಾರ ಮತ್ತಿತರಿದ್ದರು.