Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ) ಹೊರ ತರುವ ಪತ್ರಕರ್ತ ವಿಶೇಷ ಸಂಚಿಕೆಯನ್ನು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.ರಾಜ್ಯ ಸಂಘದ ಚಟುವಟಿಕೆ, ತುಮಕೂರಿನಲ್ಲಿ ನಡೆದ ರಾಜ್ಯ ಸಮ್ಮೇಳನದ ಮಾಹಿತಿ, ಕೊಪ್ಪಳದಲ್ಲಿ ನಡೆದ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ, ಮಲೆ ಮಹದೇಶ್ವರದಲ್ಲಿ ನಡೆದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಅಭಿನಂದನಾ ಸಮಾರಂಭ, ಕ್ರೀಡಾ ಚಟುವಟಿಕೆ, ಮನೆಯಂಗಳದಲ್ಲಿ ಹಿರಿಯ ಪತ್ರಕರ್ತರಿಗೆ ನಮನ, ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ಈ ಸಂಚಿಕೆ ಒಳಗೊಂಡಿದೆ ಎಂದು ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.ಜು.1ರಂದು ನಡೆದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ ನೀಡಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಕೆಯುಡಬ್ಲೂಜೆ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ…

Read More

ಮಕ್ಕಳ ಉಜ್ವಲ ಭವಿಷ್ಯ ಸಾಕಾರಕ್ಕೆ ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಡಿಸಿ ಡಾ.ಆನಂದ ಕೆ. ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯ ಜಿಲ್ಲೆಯಲ್ಲಿರುವ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಅವರ ಜೀವನ ಸುಂದರಗೊಳಿಸಿಕೊಳ್ಳಲು ಸರ್ಕಾರ ಒದಗಿಸಿರುವ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿರುವ ಕುರಿತು ಅಧಿಕಾರಿಗಳು ಸ್ವಯಂಪ್ರೇರಿತವಾಗಿ ವಾರಕ್ಕೊಂದು ಸಲ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇದು ಸ್ವಯಂ ಪ್ರೇರಿತ ಕಾರ್ಯವಾಗಿದೆ. ಸಾಮಾಜಿಕ ಜವಾಬ್ದಾರಿಯೊಂದಿಗೆ ಅಧಿಕಾರಿಗಳು ಮೇಲಿಂದ ಮೇಲೆ ಹಾಸ್ಟೇಲ್‌ಗಳಿಗೆ ಭೇಟಿ ನೀಡಬೇಕು. ಅಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯ, ಮಕ್ಕಳ ಜ್ಞಾನಾರ್ಜನೆ, ಕಲಿಕಾ ಸಂದರ್ಭದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳು ವಿಷಯಗಳ ಮನನ ಮುಂತಾದ ವಿಷಯಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಾರದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದ್ರಾಕ್ಷಿಯ ನಾಡೆಂದು ಪ್ರಸಿದ್ಧಿಗೊಂಡಂತ ವಿಜಯಪುರ ಜಿಲ್ಲೆ , ಸುಮಾರು 35,000 ಎಕರೆ ದ್ರಾಕ್ಷಿಯನ್ನು ಹೊಂದಿದ್ದು ಕಳೆದ ಹತ್ತು ವರ್ಷದ ನಂತರ ಮೊದಲ ಬರಿ ಒಳ್ಳೆಯ ಬೆಲೆ ನಿಗದಿತವಾಗಿದ್ದು ಸಂತಸ ತಂದಿದೆ. ಆದರೆ ಕೆಲವೊಂದು ಹೇಳಿಕೆಗಳ ಪ್ರಕಾರ ನೇಪಾಲ್ ಮೂಲವಾಗಿ ಚೈನಾದಿಂದ ವಣ ದ್ರಾಕ್ಷಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಅಂತ ಸಂದೇಹ ನಮ್ಮ ರೈತರು ನನ್ನ ಮುಂದೆ ಹೇಳಿದ್ದು ಇಂದು ಸಂಪೂರ್ಣ ಸುಳ್ಳು ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.ಬುಧವಾರ ಈ ಕುರಿತು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ ಅವರು, ನಾನು ನಿನ್ನೆ ದಿನ ಸದನದ ವಿರಾಮ ವೇಳೆಯಲ್ಲಿ ನಮ್ಮ External Affair Minister ಆದಂತಹ ಜಯಶಂಕರ್ ಅವರನ್ನ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದೆ. ಅವರು ಈ ಬಗ್ಗೆ Minister of Industry and Supply ಪಿಯುಶ್ ಗೊಯಲ್ ಹತ್ತಿರ ಮಾತನಾಡಿ ಅಂತ ಅವರು ನಿರ್ಧಾರ್ಶನದ ಪ್ರಕಾರ ಅದೇರೀತಿ ಈ ಬಗ್ಗೆ ಚರ್ಚಿಸಿದೆ.. ಇದರ ಬಗ್ಗೆ ತನಿಖೆ ನಡೆಸಿದಾಗ ಯಾವುದೇ ರೀತಿಯ…

Read More

ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉಧ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಹಕಾರ ಸಂಘ, ಸಂಸ್ಥೆ ಹಾಗೂ ಕ್ಷೇತ್ರದಲ್ಲಿ ಯಾವುದೇ ರಾಜಕಾರಣ ಹಾಗೂ ರಾಜಕೀಯ ಬೆರೆಸುವುದು ಬೇಡ ಎಂದು ಸಕ್ಕರೆ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ಬುಧವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಜಿಲ್ಲೆಯ ಸಹಕಾರಿ ಸಂಘಗಳು ದಿನೇ ದಿನೇ ಸಾಕಷ್ಟು ಸಾಧನೆ ಮಾಡುತ್ತಿವೆ. ಇನ್ನೂ ಕೆಲವು ಹಿಂದುಳಿದಿವೆ. ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ದಿ: ಶಂಕರಗೌಡ ಪಾಟೀಲರು ಕಟ್ಟಿದ ಸಂಸ್ಥೆ ಇಂದು ಅಮೃತ ಮಹೋತ್ಸವ ಆಚರಣೆಯಲ್ಲಿರುವುದು ಸಂತೋಷದ ವಿಷಯ. ಸಂಘಕ್ಕೆ ತಮ್ಮ ಧರ್ಮಪತ್ನಿಯ ನೆನೆಪಿನಲ್ಲಿ ಜಾಗ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಿಸಿದ ಇಂದಿನ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲರ ಕಾರ್ಯ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಎಪಿಎಎಂಸಿ ಯಾರ್ಡ್ನ ಆವರಣದಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಬುಲೆರೊ ಪಿಕ್‌ಅಪ್ ವಾಹನದಲ್ಲಿದ್ದ ೫೦ಕೆಜಿ ತೂಕದ ೬೨ಅಕ್ಕಿ ಚೀಲಗಳನ್ನು ಮಂಗಳವಾರ ಸಾಯಂಕಾಲ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.ಅಕ್ರಮ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಾಲೂಕು ಆಹಾರ ನಿರೀಕ್ಷಕಿ ವಿದ್ಯಾ ಹಿಪ್ಪರಗಿ ಪೊಲೀಸರ ಸಹಕಾರದೊಂದಿಗೆ ದಾಳಿ ಮಾಡಿದ್ದಾರೆ. ಪೊಲೀಸರನ್ನು ನೋಡಿದ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ೩೧ಕಿಂಟಾಲ್ ೪೦ಕೆಜಿ ತೂಕದ ೯೧,೦೬೦ ರೂ.ಬೆಲೆ ಬಾಳುವ ಅಕ್ಕಿ ಹಾಗೂ ವಾಹನದ ಸಮೇತ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಆಹಾರ ನಿರೀಕ್ಷಕಿ ವಿದ್ಯಾ ಹಿಪ್ಪರಗಿ ಪ್ರಕರಣ ದಾಖಲಿಸಿದ್ದಾರೆ.

Read More

ವಿಜಯಪುರದಲ್ಲಿ ನಡೆದ “ಡಿಜಿ ಇಮೇಜ್” ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶದಲ್ಲಿ ಸಚಿವದ್ವಯರ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ, ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಐತಿಹಾಸಿಕ ವಿಜಯಪುರ ನಗರದಲ್ಲಿ ಎರಡು ದಿನಗಳ ಕಾಲ “ಡಿಜಿ ಇಮೇಜ್” ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶ ಮತ್ತು ರಾಜ್ಯ ಮಟ್ಟದ ಛಾಯಾಚಿತ್ರ ಪ್ರದರ್ಶನ ನಗರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.ಬೃಹತ್ ಡಿಜಿ ಇಮೇಜ್ ಪ್ರದರ್ಶನದ ಉದ್ಘಾಟನೆಯನ್ನು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲ್ ಉದ್ಘಾಟಿಸಿ ಮಾತನಾಡುತ್ತ, ಸರ್ಕಾರದ ಮಟ್ಟದಲ್ಲಿ ಈಗಾಗಲೇ ರಾಜ್ಯದ ಛಾಯಾಗ್ರಾಹಕರ ಬೇಡಿಕೆಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಸೇರಿಸಿ ಎಲ್ಲ ಸೌಲಭ್ಯಗಳನ್ನು ದೊರಕಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಸಂಘಟನೆ ಬಹುದಿನಗಳ…

Read More

ವಿಜಯಪುರದಲ್ಲಿ ಮಜದೂರ್ ಕಾರ್ಡ್ ಕುರಿತು ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ಮಜ್ದೂರ್ ಕಾರ್ಡ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಉಚಿತ ಕಾರ್ಯಾಗಾರ ನಡೆಯಿತು.ಈ ಕಾರ್ಡ್ ಪಡೆದುಕೊಳ್ಳುವ ವಿಧಾನ, ಸೌಲಭ್ಯಗಳ ಕುರಿತು ಸಮಗ್ರವಾಗಿ ತಿಳಿವಳಿಕೆ ನೀಡಲಾಯಿತು. ಶಿಬಿರದಲ್ಲಿ ಕಾರ್ಮಿಕರಿಗೆ ತಕ್ಷಣದ ನೋಂದಣಿ, ದಾಖಲೆ ಪರಿಶೀಲನೆ ಮತ್ತು ಲೇಬರ್ ಕಾರ್ಡ್ ಪಡೆಯಲು ಮಾರ್ಗದರ್ಶನ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮಾತನಾಡಿ, ಕಾರ್ಮಿಕರು ಈ ದೇಶದ ಉಸಿರು, ಕಾರ್ಮಿಕರೇ ಈ ದೇಶದ ಶಕ್ತಿ, ಕಾರ್ಮಿಕರ ಕಲ್ಯಾಣವನ್ನೇ ಡಾ.ಬಿ.ಆರ್. ಅಂಬೇಡ್ಕರ್ ಬಹುಮುಖ್ಯ ಧ್ಯೇಯವಾಗಿಸಿಕೊಂಡಿದ್ದರು. ಕಾರ್ಮಿಕರಿಗಾಗಿ ಅನೇಕ ಸೌಲಭ್ಯಗಳಿವೆ, ಆದರೆ ಸೌಲಭ್ಯಗಳ ಬಗ್ಗೆ ಅರಿವಿನ ಕೊರತೆಯಿಂದ ಕಾರ್ಮಿಕರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದರು.ದಿನನಿತ್ಯ ತೊಂದರೆ ಅನುಭವಿಸುವ ಕಾರ್ಮಿಕರಿಗೆ ಸರಕಾರಿ ಸೌಲಭ್ಯಗಳನ್ನು ನೇರವಾಗಿ ಒದಗಿಸುವ ಉದ್ದೇಶದಿಂದ ಈ ಕಾರ್ಯಾಗಾರ…

Read More

ವಿಜಯಪುರದ ಎಸ್.ಬಿ. ಕಲಾ-ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗಿಡಮೂಲಿಕೆಗಳ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ | ಹಿರಿಯ ವಿಜ್ಞಾನಿ ಡಾ.ಬಿ.ಸುಂದರೇಶನ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗಿಡಮೂಲಿಕೆಗಳಲ್ಲಿ ಅಡಕವಾಗಿರುವ ಔಷಧೀಯ ಅಂಶ, ರೋಗ ನಿವಾರಣಾ ಶಕ್ತಿ ಮೊದಲಾದ ಮಹತ್ತರವಾದ ಅಂಶಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮ ವಿಜಯಪುರದ ಎಸ್.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಿತು.ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ, ಕರ್ನಾಟಕ ರಾಜ್ಯ ವಿಜ್ಞಾನ-ತಂತ್ರಜ್ಞಾನ ಮಂಡಳಿ ಹಾಗೂ ಬಿಎಲ್‌ಡಿಇ ಸಂಸ್ಥೆಯ ಎಸ್‌ಎಸ್‌ಎಂ ಔಷಧವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ `ಔಷಧಿಯ ಸಸ್ಯಗಳು, ಗಿಡಮೂಲಿಕೆ ಔಷಧಗಳು ಹಾಗೂ ಅಂಗಾಂಶ ಕೃಷಿ ತಂತ್ರಗಳು’ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿತೆಗಳ ಮೂಲಕ ನಿರೂಪಿಸಿದರು.ಸೆಂಟ್ರಲ್ ಇನ್ಸಿಟ್ಯೂಟ್ ಮೆಡಿಕಲ್ ಆಂಡ್ ಆರೋಮೆಟಿಕ್ ಹಿರಿಯ ವಿಜ್ಞಾನಿ ಡಾ.ಬಿ.ಸುಂದರೇಶನ್ ತರಬೇತಿ ನೀಡಿ, ಔಷಧಿಯ ಸಸ್ಯಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಸೌಂದರ್ಯವರ್ಧಕ ಉತ್ಪಾದನೆ, ನಾವು ಪ್ರತಿನಿತ್ಯ ಸೋಪ್, ಅಗರಬತ್ತಿ, ಶೌಚಾಲಯದ ಸ್ವಚ್ಚತೆಯಲ್ಲಿ ಬಳಸುವ ವಸ್ತುಗಳು, ಸೌಂದರ್ಯ ವರ್ಧಕಗಳು ಸುಗಂಧಭರಿತವಾಗಿರುತ್ತವೆ. ಇವುಗಳಲ್ಲಿ ಬಳಕೆಯಾಗುವ ಕಚ್ಚಾವಸ್ತು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಅಭಿನಂದನೆ, ಸನ್ಮಾನ, ಸತ್ಕಾರಗಳು ವ್ಯಕ್ತಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧನೆ ಮಾಡಲು ಸಮಾಜಮುಖಿಯಾಗಲು ಪ್ರೇರಣೆ ನೀಡುತ್ತದೆ ಎಂದು ಪಟ್ಟಣದ ಹಿರಿಯ ಪತ್ರಕರ್ತ ಅಲ್ಲಮಪ್ರಭು ಕರಜಗಿ ಹೇಳಿದರು.ಚಡಚಣ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಹಲವಾರು ಅಡೆತಡೆಗಳನ್ನು ದಾಟಿಕೊಂಡು ಬಂದು ಸಾಧನೆ ಮಾಡಿದವರಿಗೆ ಯಾರೋ ಈ ರೀತಿ ಸನ್ಮಾನ ಮಾಡಿದಾಗ ಇನ್ನೂ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಮತ್ತು ಪ್ರಶಸ್ತಿ ಪಡೆದವರನ್ನು ನೋಡಿ ಯುವಜನರಿಗೂ ಸ್ಫೂರ್ತಿ ಬರುತ್ತದೆ. ಇದು ಶ್ಲಾಘನೀಯ ಕೆಲಸ ಎಂದು ಬಣ್ಣಿಸಿದರು.ಹಿರಿಯ ವರದಿಗಾರ ಮನೋಜಕುಮಾರ ಕಟಗೇರಿ ಮಾತನಾಡಿ, ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ ಆ ನಿರಂತರ ಪ್ರಯತ್ನದ ಫಲವೇ ಇವತ್ತಿನ ಸಾಧಕರು. ಚಡಚಣ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪತ್ತೆ ಹಚ್ಚಿ ಸನ್ಮಾನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕು.ವಿವಿಧಾ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಇವಳಿಗೆ ಜಾರ್ಜೀಯಾ ದೇಶದ ರಾಜದಾನಿ ಟೀಬ್ಲೀಸಿ ಯ ಜಾರ್ಜೀಯನ್ ನ್ಯಾಶನಲ್ ವೈದ್ಯಕೀಯ ವಿಶ್ವವಿದ್ಯಾಲಯ ದಿಂದ ಎಂಬಿಬಿಎಸ್ ಪದವಿ ಯನ್ನು ವಿಶ್ವ ವಿದ್ಯಾಲಯದ ಘಟಕೋತ್ಸವದಲ್ಲಿ ಸರ್ಟಿಫಿಕೇಟ್ ಪ್ರದಾನ ಮಾಡಲಾಯಿತು.ಯೂನಿರ್ವಸಿಟಿ ಫೌಂಡರ್ GIA KAVTELISHVILLI ಲೇಡಿ ಡೀನ್ SMT MAIA ADVADGE ಹಾಗೂ ರೆಕ್ಟರ್ MARTVILI CANYON ಉಪಸ್ಥಿತರಿದ್ದರು.ಕಳೆದೆರಡು ವರ್ಷಗಳ ಹಿಂದೆ ಉಕ್ರೇನ್ ಯುದ್ದದಲ್ಲಿ ಸಿಲುಕಿ ತೊಂದರೆ ಅನುಭವಿಸಿದ ವಿವಿಧಾ ನಂತರ ಜಾರ್ಜೀಯಾ ದೇಶದಲ್ಲಿ ಶಿಕ್ಷಣ ಮುಂದು ವರೆಸಿದ್ದಳು. ಕನ್ನಡ ನಾಡಿನ ಜನರ ಹಾರೈಕೆಯಿಂದ ಮರು ಜನುಮ ಪಡೆದು ಇಂದು ಸಾರ್ಥಕ ಯಶಸ್ಸು ಪಡೆದದ್ದು ಸಾರ್ಥಕವೆನಿಸಿತು. ಅವಳೊಂದಿಗೆ ತಂದೆ ಅಲ್ಲಮಪ್ರಭು ತಾಯಿ ಭುವನೇಶ್ವರಿ ಪಾಲ್ಗೊಂಡಿದ್ದರು.

Read More