ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಶಹರ ಪೋಲಿಸ್ ಠಾಣೆಯ ಪೋಲಿಸರು ಭರ್ಜರಿ ಬೇಟೆಯಾಡಿ ಅಂದಾಜು 10 ಲಕ್ಷ ಮೌಲ್ಯದ, ವಿವಿಧ ಕಂಪನಿಯ ಒಟ್ಟು 22 ಮೋಟಾರ ಸೈಕಲ್‍ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಇನಾಂ ಹಂಚಿನಾಳ (ಆರ್ ಸಿ) ಗ್ರಾಮದಲ್ಲಿ ವಾಸವಾಗಿದ್ದ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಆರೋಪಿಯನ್ನು ಸಂಶಯಾಸ್ಪದ ಮೇಲೆ ಬಂಧಿಸಲಾಗಿದ್ದು. ಸುಮಾರು ವಿವಿಧ ಕಂಪನಿಯ ಮೋಟರ್ ಬೈಕ್‍ಗಳನ್ನು ಕಳ್ಳತನ ಮಾಡಿದ್ದು. ಅಂದಾಜು 10 ಲಕ್ಷ ಮೌಲ್ಯದ ಅಧಿಕ ಬೆಲೆ ಬಾಳುವ ಮೋಟರ್ ಬೈಕ್‍ಗಳನ್ನು ಆರೋಪಿ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಕಡೆಯಿಂದ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದಿದೆ ಎಂದು ಹೆಚ್ಚುವರಿ ಎಸ್‍ಪಿ, ಮಹಾಂತೇಶ್ವರ ಜಿದ್ದಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಈ ಪ್ರಕರಣದಲ್ಲಿ ಕಳುವಾದ ಮೋಟಾರ್ ಸೈಕಲ್ ಹಾಗೂ ಆರೋಪಿಗಳನ್ನು ಪತ್ತೆ ಮಾಡಲು ಜಿಲ್ಲಾ ಎಸ್‍ಪಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಎಸ್‍ಪಿ ಮಹಾಂತೇಶ್ವರ ಜಿದ್ದಿ, ಡಿವೈಎಸ್ಪಿ ಎಸ್ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಡಿ ಮಡ್ಡಿ, ಪಿಎಸ್‍ಐ ಅನೀಲ ಕುಂಬಾರ ಅವರ ನೇತೃತ್ವದಲ್ಲಿ ಕ್ರೈಂ ಪಿಎಸ್‍ಐ ಎನ್ ಕೆ ಕಾಜಗಾರ, ಸಿಬ್ಬಂದಿಗಳಾದ ಸಂಗಪ್ಪ ಕೋಟಿ, ಪರಶುರಾಮ ಘಾಟಗೆ, ಪ್ರಕಾಶ ಹೊಸಮನಿ, ಮುತ್ತಪ್ಪ ಮಾಂಗ, ಮಲ್ಲಿಕಾರ್ಜುನ ತಂಬಾಕದ, ಸಿದ್ದು ಕಲಾಠೆ, ನಾಗರಾಜ ಬಿಸಲದಿನ್ನಿ, ಶಂಕರ ಆಸಂಗಿ, ಆಯ್ ಎಮ್ ಪೆಂಡಾರಿ, ರಾಜಶೇಖರ ಮನಗೂಳಿ ಒಳಗೊಂಡ ತಂಡವನ್ನು ರಚನೆ ಮಾಡಿ, ಕಾರ್ಯಾಚರಣೆ ಕೈಗೊಂಡು ಆರೋಪಿ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯ ವೈಖರಿಯನ್ನು ಶ್ಲಾಘಿಸಿ ಎಸ್ಪಿ ಸಿದ್ದಾರ್ಥ್ ಗೋಯಲ್ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ ಎಂದರು.