ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅನಕ್ಷರಸ್ತರನ್ನು ಸಾಕ್ಷರರಾಗಿ ಮಾಡಿ ಬದಲಾವಣೆ ತರುವ ದೊಡ್ಡ ಕಾರ್ಯ ಶಿಕ್ಷಕರು ಮಾಡುತ್ತಾರೆ. ಮುಂದೆ ಗುರಿ, ಹಿಂದೆ ಗುರು ಇದ್ದಲ್ಲಿ ಬದುಕಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಪ್ರತಿಯೊಬ್ಬ ಶಿಕ್ಷಕರು ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು ದೇಶಪ್ರೇಮ ಬೆಳೆಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ಸಿಂದಗಿ ಪಟ್ಟಣದ ರಾಂಪೂರ ರಸ್ತೆಯ ಶ್ರೀಸಮರ್ಥ ವಿದ್ಯಾವಿಕಾಸ ವಿವಿದೋದ್ದೇಶಗಳ ಸಂಸ್ಥೆಯ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಪ್ರೇರಣಾ ಶಾಲಾ ಮಕ್ಕಳ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವುದು ಅತೀ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸುವುದರ ಜೊತೆಗೆ ಒಳ್ಳೆಯ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ ಎಂದರು.
ಈ ವೇಳೆ ಸೋಮಜಾಳ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ಎಸ್.ನೀರಲಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ನಿರ್ದೇಶಕ ಪಿ.ಡಿ.ಕುಲಕರ್ಣಿ, ಪಾಲಕ ಪ್ರತಿನಿಧಿ ಶಿವಾನಂದ ಮಠಪತಿ, ಮಲ್ಲಮ್ಮ ಕಂಠಿಗೊಂಡ ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ, ಎಂ.ಪಿ.ಬುಕ್ಕಾ, ಸತೀಶ ಕುಲಕರ್ಣಿ, ಸುರೇಶ ಹೂಗಾರ, ಎಸ್.ಬಿ.ಕುಂಟೋಜಿ, ಎಮ್.ಎಮ್.ಜುಮನಾಳ, ಬಿ.ಎಸ್.ಪಾಟೀಲ, ಎಸ್‌ವ್ಹಿ.ಕಡಣಿ, ವಿ.ಎ. ನಾಯಕ, ಎಮ್.ಜಿ.ದ್ಯಾಮಗೊಂಡ, ಎಸ್.ಡಿ.ನಾಯಕ, ವಿಜಯಲಕ್ಷ್ಮಿ ಅಲಾಳಮಠ, ಸಾವಿತ್ರಿ ವೀರಾಪೂರ, ವಿ.ಕೆ.ಚವ್ಹಾಣ, ಎನ್.ಜಿ.ಬಳಗಾನೂರ, ಆರ್.ಎಮ್.ಫಕೀರಪುರ, ಆರ್.ಎಸ್.ಶಿವಸಿಂಪಿಗೇರ, ಕಿರಣ ಕುಲಕರ್ಣಿ ಎಸ್.ಎಸ್.ಪಾಟೀಲ, ಯಲ್ಲಾಲಿಂಗ ಹೊಸೂರ ಸೇರಿದಂತೆ ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.