ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಲಾಯನ್ಸ್ ಸಂಸ್ಥೆಯು ಯಾವುದೇ ಆಸೆ, ಆಮಿಷ, ಅಧಿಕಾರಕ್ಕೊಳಗಾಗದೇ ಸಮಾಜ ಸೇವೆಯನ್ನು ಮಾಡುತ್ತ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆ ೩೧೭ ಬಿ ೫೦ನೇ ಸುವರ್ಣ ಮಹೋತ್ಸವ ಆಚರಿಸುತ್ತಿರುವುದರಿಂದ ವನಮಹೋತ್ಸವ, ಡ್ರಗ್ಸ್, ಕ್ಯಾನ್ಸ್ರ್ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಗೋವಾ & ಕರ್ನಾಟಕ ಅಂತರಾಷ್ಟ್ರೀಯ ಲಾಯನ್ಸ್ ಸಂಸ್ಥೆ ಜಿಲ್ಲೆ ೩೧೭ ಬಿ ಗವರ್ನರ್ ಪಿ.ಎಂ.ಜೆ.ಎಫ್ ಲಾಯನ್ ಜೈಮೋಲ್ ಜೆ.ನಾಯಕ ಲಾಯನ್ಸ್ ಸದಸ್ಯರಿಗೆ ಸಲಹೆ ನೀಡಿದರು.
ಸಿಂದಗಿ ಪಟ್ಟಣದ ಪಿಇಎಸ್ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಸಿಂದಗಿ ಲಾಯನ್ಸ್ ಕ್ಲಬ್ ಹಾಗೂ ಪಿಇಎಸ್ ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಲಾಯನ್ಸ್ ಕ್ಲಬ್ ೩೧೭ ಬಿ ಜಿಲ್ಲಾ ಗವರ್ನರ ಸಂದರ್ಶನ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದ ಅವರು, ಘನ ಸರಕಾರಗಳು ನಾಡಿನ ಹಿತದೃಷ್ಠಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಆದರೂ ಕೂಡಾ ಅಂತರಾಷ್ಟ್ರೀಯ ಲಾಯನ್ಸ್ ಸಂಸ್ಥೆಯು ನೂರು ವರ್ಷಗಳಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರಿಗಾಗಿ ರಕ್ತದಾನ ಕೇಂದ್ರಗಳನ್ನು ಹಾಗೂ ಅಂಧತ್ವ ನಿವಾರಣೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಾಯನ್ಸ್ ಕ್ಲಬ್‌ಗೆ ಹೊಸದಾಗಿ ಸದಸ್ಯರಾದ ಡಾ.ಚಿಂಚೋಳ್ಳಿ ದಂಪತಿಗಳು, ಉದ್ಯಮದಾರರಾದ ಮುತ್ತು ಮುಂಡೇವಾಡಗಿ, ಉಮೇಶ ಜೋಗೂರ, ಪ್ರಾಚಾರ್ಯ ವ್ಹಿ.ಡಿ.ಪಾಟೀಲ ಅವರನ್ನು ಸದಸ್ಯರಾಗಲು ಒಪ್ಪಿಗೆ ಸೂಚಿಸಿ ಪ್ರತಿಜ್ಞಾವಿಧಿಸಿ ಭೋಧಿಸಿ ಸದಸ್ಯತ್ವ ನೀಡಿದರು.
ಅಲ್ಲದೇ ಆದರ್ಶ ಶಿಕ್ಷಕರಾದ ಡಾ. ಅರವಿಂದ ಮನಗೂಳಿ, ಡಾ.ಬಿ.ಜಿ.ಪಾಟೀಲ, ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ಶಿಕ್ಷಕರಾದ ಎಸ್.ಎಸ್.ಗುಮಶೆಟ್ಟಿ, ವಿಜಯಕುಮಾರ ಬೆಕಿನಾಳ, ಎಸ್.ಎಸ್.ಅವಟಿ, ಎನ್.ಎಸ್.ರಜಪೂತ, ಎಸ್.ಎಸ್.ರಾಠೋಡ, ಆರ್.ಎಸ್.ಗೋಟ್ಯಾಳ, ಎಂ.ಸಿ.ನಡಗೇರಿ, ಶ್ರೀಮತಿ ಗೀತಾ ಅಥಣಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ಲಾಯನ್ ಜೈಮೋಲ್ ಜೆ.ನಾಯಕ, ಪಿ.ಎಂ.ಜೆ.ಎಫ್ ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಲಾಯನ್ ಡಾ. ಕೀರ್ತಿ ಜೆ ನಾಯಕ ನೀಡಿ ಗೌರವಿಸಿದರು.
ಈ ವೇಳೆ ಲಾಯನ್ಸ್ ಕ್ಲಬ್ ನೂತನ ಅಧ್ಯಕ್ಷ ಎಸ್.ಎಸ್.ಪಾಟೀಲ, ಪಿಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಮಾತನಾಡಿದರು. ಎಂಜೆಎಫ್ ಲಾಯನ್ ಕೆ.ಎಚ್.ಸೋಮಾಪೂರ ಪ್ರಾಸ್ತಾವಿಕ ಮಾತನಾಡಿದರು. ಪ್ರಸಕ್ತ ವರ್ಷದ ಕಾರ್ಯಚಟುವಟಿಕೆಗಳ ವಿವರಗಳನ್ನು ಶಾಂತೇಶ ದುರ್ಗಿ ಪ್ರಸ್ತುತಪಡಿಸಿದರು. ಐ.ಬಿ.ಬಿರಾದಾರ ನಿರೂಪಿಸಿದರು. ಶಿವಶರಣ ಬೂದಿಹಾಳ, ಮಲ್ಲು ಹೊಸಮನಿ, ಗುರು ಕಡಣಿ ಧ್ವಜವಂದನೆ ಕಾರ್ಯಕ್ರಮ ನಡೆಸಿಕೊಟ್ಟರು.
ಲಾಯನ್ ಸದಸ್ಯರಾದ ಎಸ್.ಬಿ.ಜಾಗಶೆಟ್ಟಿ, ಅಶೋಕ ವಾರದ, ಮಹಾದೇವ ಲೋಣಿ, ಎಸ್.ಎಚ್.ಜಾಧವ, ಡಾ. ಅಂಬರೀಶ ಬಿರಾದಾರ, ಪಿ.ಎಂ.ಮಡಿವಾಳರ ಎಚ್.ಎಂ.ಉತ್ನಾಳ, ಬಿ.ಜಿ.ಕಲಶೆಟ್ಟಿ, ಪ್ರಾಚಾರ್ಯ ಆರ್.ಬಿ.ಗೋಡಕರ್ ಸೇರಿದಂತೆ ಇನ್ನಿತರರಿದ್ದರು.