ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗೃಹ ಬಳಕೆಯ ಸಿಲಿಂಡರ್‌ಗಳಿಂದ ಅನಧಿಕೃತವಾಗಿ ರಿಫಿಲಿಂಗ್ ಮಾಡುತ್ತಿರುವ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ೩೧೯೨೦ ರೂ. ಮೌಲ್ಯದ ಒಟ್ಟು ೧೦ ಹೆಚ್‌ಪಿ ಕಂಪನಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ನಗರದ ಇಬ್ರಾಹಿರಂ ರೋಜಾ ಹತ್ತಿರದಲ್ಲಿ ಪತ್ರಾಸ ಶೆಡ್‌ನಲ್ಲಿ ಹಾಗೂ ನಗರದ ಬಾಗಲಕೋಟ ಕ್ರಾಸ್ ಹತ್ತಿದ ಒಂದು ಪತ್ರಾಸ್ ಶೆಡ್‌ನಲ್ಲಿ ಅನಧಿಕೃತವಾಗಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ ಸಂಗ್ರಹಣೆ ಮಾಡಿ ರಿಫಿಲಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಸಿಲಿಂಡರ್‌ಗಳು ಸೇರಿದಂತೆ ಒಂದು ತೂಕದ ಯಂತ್ರ ಹಾಗೂ ರಿಫಿಲಿಂಗ್ ಯಂತ್ರವನ್ನು ವಶಪಡಿಸಿಕೊಂಡು ಬಿಎನ್‌ಎಸ್ ಹಾಗೂ ಕಲಂ (೧)(ಎ)(ಬಿ)(ಸಿ) ಮತ್ತು ೪(೧)(ಎ) ಎಲ್‌ಪಿಜಿ ರೆಗ್ಯೂಲೇಷನ್ ಆರ್ಡರ್ ೨೦೦೦ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಕಲಂ ೩ ಸಹ ಕಲಂ ೦೭ರ ಮೆರೆಗೆ ಕ್ರಿಮಿನಲ್ ಮೊಕದ್ದಮೆಯನ್ನು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ದಾಳಿಯಲ್ಲಿ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ಗಾಂಧಿಚೌಕ್ ಪಿಎಸ್‌ಐ ರಾಜು ಮಮದಾಪುರ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.