Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ೫ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದಕ್ಕಾಗಿ ಮತ್ತು ನಾಗರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಪೂಜಿಸುವುದರಿಂದ ಕಾಳ ಸರ್ಪ ದೋಷ ನಿವಾರಣೆಯಾಗುವುದು ಮತ್ತು ಹಾವು ಕಡಿತದ ಭಯವು ಮಾಯವಾಗುವುದು. ಈ ವಿಶೇಷ ದಿನದಂದು ನಾಗ ದೇವರ ಭಕ್ತರು ನಾಗಗಳಿಗೆ ಹಾಲನ್ನು ಅರ್ಪಿಸುತ್ತಾರೆ. ಅವುಗಳನ್ನು ಪೂಜಿಸುತ್ತಾರೆ. ಸಮೃದ್ಧಿ, ಸುರಕ್ಷತೆಯನ್ನು ಬೇಡಿಕೊಳ್ಳುತ್ತಾರೆ.ವಿಜಯಪುರದ ಆದರ್ಶ ನಗರದ ಶಿವಾಲಯ ಮಂದಿರದ ಆವರಣದಲ್ಲಿರುವ ನಾಗದೇವನಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಹಿಳೆಯರು ನಾಗದೇವನಿಗೆ ಅರಿಶಿನ, ಕುಂಕುಮ, ಹಾಲು, ಹಣ್ಣು, ನೈವೇದ್ಯವನ್ನು ಅರ್ಪಿಸಿ, ಗೆಜ್ಜೆ ವಸ್ತçಗಳಿಂದ ನಾಗರ ಕಲ್ಲನ್ನು ಅಲಂಕರಿಸಿ, ದೀಪ, ಧೂಪ, ಅಗರಬತ್ತಿಯನ್ನು ಹಚ್ಚಿ ಪೂಜೆಯನ್ನು ಮಾಡಲಾಯಿತು. ಈ ಮೂಲಕ ನಾಗರ ಪಂಚಮಿ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು.ಈ ವೇಳೆಯಲ್ಲಿ ಶ್ರೀಮತಿ ಕವಿತಾ ಮಾಳಿ ಮಾತನಾಡುತ್ತ. ನಾಗರ ಪಂಚಮಿ ಹಬ್ಬದ ದಿನದಂದು ನಾವು ನಾಗ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಐತಿಹಾಸಿಕ ಕಿಚಡಿ ಜಾತ್ರೆಯನ್ನು ಯಾವುದೇ ಅಡಚನೆಯಾಗದಂತೆ ನಿರ್ವಹಿಸಲು ಇಲ್ಲಿನ ಯುವ ಸೇವಕರ ಹಲವು ಸಮೀತಿಗಳನ್ನು ರಚಿಸಲು ಇಲ್ಲಿನ ವಿರಕ್ತಮಠದಲ್ಲಿ ನಡೆದ ಸೇವಕರ ಸಭೆಯಲ್ಲಿ ತೀರ್ಮಾಣಿಸಲಾಯಿತು.ಶ್ರೀ ಪ್ರಭು ಮಹಾಸ್ವಾಮಿಗಳ ನೇತ್ರತ್ವದ ನಡೆದ ಸಭೆಯಲ್ಲಿ ಗ್ರಾಮದ ನೂರಾರು ಜನ ಯುವ ಸೇವಕರು ಪಾಲ್ಗೊಂಡು ಜಾತ್ರೆ ನಿರ್ವಹಣೆ ಕುರಿತು ಹಲವಾರು ಸಲಹೆ, ಸೂಚನೆ ನೀಡಿದರಲ್ಲದೇ ಹಲವು ಯುವಕರು ಭಕ್ತರನ್ನು ನಿಯಂತ್ರಿಸಲು ಹಾಗೂ ಸಮರ್ಪಕವಾಗಿ ಪ್ರಸಾದ ವಿತರಿಸಲು ಅನುಕೂಲವಾಗುವಂತೆ ಸಮೀತಿ ರಚಿಸಬೇಕೆಂದು ಮನವಿ ಮಾಡಿದರು.ಎಲ್ಲರ ಸಲಹೆಗಳನ್ನು ಆಲಿಸಿದ ಶ್ರೀಗಳು ಹಾಗೂ ಜಾತ್ರಾ ಸಮೀತಿಯ ಪ್ರಮುಖರು ಸಂಚಾರ ನಿಯಂತ್ರಣಾಪ್ರಸಾದ ವಿತರಣಾ ಸಮೀತಿ, ಪ್ರಸಾದ ತಯಾರಿ ಸಮೀತಿ, ಅಥಿತಿ ನಿರ್ವಹಣಾ ಸಮೀತಿ, ಕಾರ್ಯಕ್ರಮ ನಿರ್ವಹಣಾ ಸಮೀತಿ, ಅಥಿತಿ ಪೂಜ್ಯರ ಉಪಚಾರಣಾ ಸಮೀತಿ, ದರ್ಶನ ನಿರ್ವಹಣಾ ಸಮೀತಿ ಸೇರಿದಂತೆ ಹಲವು ಸಮೀತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವ ಕುರಿತು ಹಾಗೂ ಜಿಎಲ್‌ಬಿಲುಪ ಕಾಲೂವೆಯ ವರೆಗೆ ಸಿಸಿಟಿವಿ ಕ್ಯಾಮರಾ ಹಾಗೂ ಧ್ವನಿವರ್ಧಕ ಅಳವಡಿಸಲು ತೀಮಾರ್ಣಿಸಲಾಯಿತು.ಬರುವ ಸೆ.೦೪ ನಡೆಯಲಿರುವ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಗಾಲಿಸಾಬ ಗುಡಿಗೆ ಹೊಗಲು ಇರುವ ರಸ್ತೆಯನ್ನು ಒತ್ತುವರಿ ಮತ್ತು ರುಕುಂಪೂರ ರಸ್ತೆ ತೆರವು ಹಾಗೂ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಬುಧವಾರ ಪಟ್ಟಣದ ಎಲ್ಲಾ ವೈದ್ಯರು ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡರು.ಈ ವೇಳೆ ವೈದ್ಯ ಡಾ.ರಾಜೇಶ ಪಾಟೀಲ ಮಾತನಾಡಿ, ಆಲಮೇಲದ ಎಲ್ಲಾ ನಾಗರಿಕರು ಸೇರಿ ಆರಾದ್ಯ ದೈವವಾದ ಗಾಲಿಬಸಾಬ ಗುಡಿಗೆ ಹೊಗಲು ರಸ್ತೆಗಾಗಿ ಹೋರಾಟ ಮಾಡುತ್ತಿರುವುದು ದುರಾದೃಷ್ಟಕರ. ಈ ಹೋರಾಟಕ್ಕೆ ಜಯ ಸಿಗುವವರೆಗು ನಾವು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.ಈ ಹೋರಾಟದಲ್ಲಿ ವೈದ್ಯರಾದ ಡಾ||ಸಂದಿಪ ಪಾಟೀಲ ಡಾ|| ಸಂಜೆಯ ಪಾಟೀಲ ಡಾ|| ಚನ್ನಬಸು ನಿಂಬಾಳ ಡಾ|| ಕರಬಸು ಲೋಣಿ ಡಾ|| ಸೆಬ್ಬಿರ ಹಾದಿಮನಿ ಪಾಲಗೊಂಡರುಹೋರಾಟ ಮಾಡುತ್ತಿರುವ ಸ್ಥಳಕ್ಕೆ ಇಂಡಿಯ ಉಪವಿಭಾಗ ಆಯುಕ್ತರಾದ ಅನುರಾಧ ವಸ್ತ್ರದ ಬೇಟಿ ನೀಡಿ, ಸ್ಥಳ ಪರಿಶೀಲನೆ ಮಾಡ ಮಾನ್ಯ ಜಿಲ್ಲಾಧೀಕಾರಿಗಳೊಂದಿಗೆ ಚರ್ಚೆಮಾಡಿ ಆದಷ್ಟು ಬೇಗನೆ ಬಗೆಹರಿಸುವುದಾಗಿ ಭರವಸೆ ನೀಡಿದರು.ನಾಳೆಯಿಂದ ಉಗ್ರ ಹೋರಾಟ: ೮ದಿನಗಳ ವರೆಗೆ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ತಾರಾಪೂರ ಗ್ರಾಮವು ಭೀಮಾ ನದಿಯ ದಂಡದಲ್ಲಿರುವ ಈ ತಾರಾಪೂರ ಗ್ರಾಮವು ಕಾಶಿಯ ಕಡಿಯ ಬಾಗಿಲ ಎಂದು ಹೆಸರುವಾಸಿಯಾಗಿರುವ ಈ ತಾರಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ತಾರಕೇಶ್ವರ ದೇವಸ್ಥಾನ ಅವರಣದಲ್ಲಿ ಸಮಸ್ತ ತಾರಾಪುರ ಗ್ರಾಮದ ಮಹಿಳೆಯರು ಮಕ್ಕಳು ಯಾವುದೇ ಜಾತಿ ಭೇದವಿಲ್ಲದೆ ಕರೆ ಕಟ್ಟುವ ಪದ್ಧತಿ ಹಿಂದಿನಿಂದ ಬಂದ ಸಂಪ್ರದಾಯವನ್ನು ಇನ್ನು ನಮ್ಮ ಹಳ್ಳಿಗಳಲ್ಲಿ ಉಳಿಸಿಕೊಂಡು ಬಂದಿದ್ದಾರೆ.ನಮ್ಮ ಉತ್ತರ ಕರ್ನಾಟಕದ ಸಿವಿ ಸಿವಿ ಊಟವಾದ ಚಜ್ಜೆ ರೊಟ್ಟಿ ಪುಂಡಿ ಪಲ್ಲೆ ಬದನೆಕಾಯಿ ಪಲ್ಲೆ ಶೃಂಗಾದ ಚಟ್ನಿ ಶೇಂಗಾ ಹೋಳಿಗಿ ಹಾಗೂ ನಾನು ತರದ ಸಿಹಿ ತಿನಿಸುಗಳನ್ನು ಸಿವಿದ ನಂತರ ಮಹಿಳರಿಂದ ಸರಬಿ ಆಟ ಆಡಿದರು.ಐದು ಜನ ಮುತ್ತೈದೆಯರು ಐದು ಕಳಸವನ್ನು ಭೀಮಾ ನದಿಯಲ್ಲಿ ತುಂಬಿಕೊಂಡು ಬಂದು ನಂತರ ಸಂಪ್ರದಾಯ ಪ್ರಕಾರ ಪೂಜ ಪುನಸ್ಕಾರವನ್ನು ಮಾಡಿ ಎಲ್ಲಾ ಮಹಿಳೆಯರು ಕೂಡಿಕೊಂಡು ಕರೆ ಕಟ್ಟಿ ಹೊಡೆದು ಸಾಮೂಹಿಕವಾಗಿ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ದೇವರಲ್ಲಿ…
ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಕಟ್ಟುನಿಟ್ಟಿನ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅತಿವೃಷ್ಟಿ-ಪ್ರವಾಹದಿಂದ ಉಂಟಾಗುವ ಮನೆ ಹಾನಿ, ಜನ-ಜಾನುವಾರುಗಳ ಹಾನಿಗೆ ನಿಗದಿತ ಅವಧಿಯಲ್ಲಿ ತುರ್ತಾಗಿ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಮಂಗವಾರ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅತಿವೃಷ್ಟಿ ಪ್ರವಾಹದಿಂದ ಹಾನಿಗೀಡಾದ ಮನೆಗಳಿಗೆ ೭೨ ಗಂಟೆಯೊಳಗೆ ಹಾಗೂ ಜಾನುವಾರು ಹಾನಿಗೆ ೪೨ ಗಂಟೆಯೊಳಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ತುರ್ತಾಗಿ ನೀಡುವ ಪರಿಹಾರವಾಗುವುದರಿಂದ ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದೇ, ಪ್ರಕರಣಗಳನ್ನು ಇತ್ಯರ್ಥಪಡಿಸಿ, ತುರ್ತಾಗಿ ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಜಿಲ್ಲೆಯಲ್ಲಿ ಅತಿವೃಷ್ಟಿ-ಪ್ರವಾಹಕ್ಕೊಳಪಡುವ ಪ್ರದೇಶಗಳ ಮಾಹಿತಿಯನ್ನು ಅಧಿಕಾರಿಗಳು ಮುಂಚಿತವಾಗಿ ಹೊಂದಿರಬೇಕು. ಯಾವ ನದಿಯಿಂದ ಎಷ್ಟು ಪ್ರಮಾಣದ ನೀರು ಬಂದಲ್ಲಿ ಹಳ್ಳಿಗಳು ಬಾಧಿತವಾಗಲಿವೆ ಎಂಬುದನ್ನು ತಿಳಿದುಕೊಂಡಿರಬೇಕು. ಸಂಪೂರ್ಣ ಮಾಹಿತಿ ಅರಿತುಕೊಂಡಲ್ಲಿ…
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಧೀಶರಾದ ಸಚಿನ್ ಕೌಶಿಕ್ ಸಲಹೆ ಉದಯರಶ್ಮಿ ದಿನಪತ್ರಿಕೆ ಮುದ್ದೆಬಿಹಾಳ: ಮಾನವ ಕಳ್ಳ ಸಾಗಣೆ ತಡೆಯುವದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲು ಪ್ರತಿಯೊಬ್ಬ ಸಾರ್ವಜನಿಕರು ಮುಂದಾಗಬೇಕು ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಧೀಶರಾದ ಸಚಿನ್ ಕೌಶಿಕ್ ಅವರು ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾನವ ಜೀವನವು ಖರೀದಿ ಅಥವಾ ಮಾರಾಟ ಮಾಡುವ ವಸ್ತುವಲ್ಲ. ಹಣದ ಭಿಕ್ಷೆಗೆ, ಲಾಭದ ಮೋಹಕ್ಕೆ ಅನೇಕರು ಮಕ್ಕಳನ್ನು, ಮಹಿಳೆಯರನ್ನು, ಪುರುಷರನ್ನು ಮೋಸದಿಂದ ಕಳ್ಳಸಾಗಣೆ ಮಾಡುತ್ತಿದ್ದಾರೆ. ಈ ದುಷ್ಕೃತ್ಯಕ್ಕೆ ಯಾರೂ ಬಲಿಯಾಗಬಾರದು. ಇಂತಹ ಅಪರಾಧಗಳನ್ನು ಮಟ್ಟಹಾಕಲು ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಜನಸಹಕಾರ ಅತ್ಯವಶ್ಯ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-೧ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ- ಊಟ ಮತ್ತು ವಸತಿ ಸಹಾಯ ಯೋಜನೆಗಾಗಿ ಶನಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹ ವಿದ್ಯಾರ್ಥಿಗಳು https://ssp.postmatric.karnataka.gov.in ವೆಬ್‌ಸೈಟ್ ನಲ್ಲಿ ಸೆಪ್ಟೆಂಬರ್ ೩೦ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ https://bcwd.karnataka.gov.in ಹಾಗೂ ೮೦೫೦೭೭೦೦೦೫ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದ್ರಾಕ್ಷಿ ಬೆಳೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದ್ದು, ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೆ ಇರುವ ರೈತರು ತಮ್ಮ ಆಧಾರ ಕಾರ್ಡ ಪ್ರತಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕಗಳಲ್ಲಿ, ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್ ಸಿ ಸೆಂಟರ್ ಗಳಲ್ಲಿ ವಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದು.ಮುಂಗಾರು ಹಂಗಾಮಿನಲ್ಲಿ ದ್ರಾಕ್ಷಿ ಬೆಳೆಯ ವಿಮಾ ನೋಂದಣಿಗೆ ಆಗಸ್ಟ್ ೧೬ ಕೊನೆಯ ದಿನವಾಗಿದೆ.ರೈತರು ಪಾವತಿಸಬೇಕಾದ ವಿಮಾ ಮೊತ್ತ ಪ್ರತಿ ಹೆಕ್ಟರ್ ಗೆ ೧೪,೦೦೦ರೂ. ಗಳಾಗಿದೆ.ಹೆಚ್ಚಿನ ಮಾಹಿತಿಗಾಗಿ ತಮ್ಮವ್ಯಾಪ್ತಿಯ ತಾಲೂಕಿನ ತೋಟಗಾರಿಕೆ ಇಲಾಖೆ, ಅಗ್ರಿಕಲ್ಚರ ಇನ್ಸುರೆನಸ್ ಕಂಪನಿ (ಎಐಸಿ) ವಿಮಾ ಸಂಸ್ಥೆಯ ಪ್ರತಿನಿಧಿ ರಾಮನಗೌಡ ಬಿರಾದಾರ ಮೊ. ೮೩೧೦೯೩೯೭೫೩, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ: ೯೫೩೫೧೮೫೯೯೯, ಇಂಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ: ೯೦೦೮೪೦೪೦೪೧, ಸಿಂದಗಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ. ಕೆ ಅವರು ಬುಧವಾರ ಭೇಟಿ ನೀಡಿ, ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಾಕಿ ಕಡತಗಳ ಪರಿಶೀಲನೆ, ನ್ಯಾಯಾಲಯ ಪ್ರಕರಣಗಳ ಕಡತ, ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ ಪ್ರಗತಿ ಮಾಹಿತಿ, ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂಸುರಕ್ಷಾ ಯೋಜನೆಯ ಪ್ರಗತಿ ಸಾಧಿಸಬೇಕು. ದಾಖಲೆಗಳನ್ನು ಸಮರ್ಪಕವಾಗಿ ದಾಖಲೀಕರಣಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.ಮುದ್ದೇಬಿಹಾಳ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ, ಸಾರ್ವಜನಿಕ ಸಂಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮುದ್ದೇಬಿಹಾಳ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು.ಅಗತ್ಯ ಮೂಲಭೂತ ಸೌಲಭ್ಯ ಖಚಿತಪಡಿಸಿಕೊಳ್ಳಬೇಕು. ತಾಲೂಕಾಸ್ಪತ್ರೆಗೆ…
ಎರಡನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ರಮೇಶ ಅಪ್ಪಾಸಾಹೇಬ ಮಹಾಜನ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾನವ ಕಳ್ಳ ಸಾಗಾಣಿಕೆ ಸಮಾಜಕ್ಕೆ ಅಂಟಿದ ಕಳಂಕವಾಗಿದ್ದು, ಇದನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಎರಡನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ರಮೇಶ ಅಪ್ಪಾಸಾಹೇಬ ಮಹಾಜನ ಹೇಳಿದರು.ನಗರದ ರುಡ್‌ಸೆಟ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಯಪುರ ನಗರ-ಗ್ರಾಮೀಣದ ಶಿಶು ಅಭಿವೃದ್ಧಿ ಯೋಜನೆ ಇವರ ಸಹಯೋಗದಲ್ಲಿ ಬುಧವಾರ ನಡೆದ ಮಾನವ ಕಳ್ಳ ಸಾಗಾಣಿಕೆ…
