ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ೨೦೨೫-೨೬ನೇ ಸಾಲಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ರೂ.೫೦೦೦ ಆರ್ಥಿಕ ನೆರವು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
೨೦೨೪-೨೫ನೇ ಸಾಲಿನಲ್ಲಿ ನೇಕಾರ ಸಮ್ಮಾನ ಯೋಜನೆಯಡಿ ಹೊರಗುಳಿದ ಕೈಮಗ್ಗ-ವಿದ್ಯುತ್ ಮಗ್ಗ ನೇಕಾರರು ಮಾತ್ರ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಯೋಜನೆಯಡಿ ಕೈಮಗ್ಗ-ವಿದ್ಯುತ್ ಮಗ್ಗ ವೈಯಕ್ತಿಕ ನೇಕಾರರು,ಕೆ.ಎಚ್.ಡಿಸಿ ನೇಕಾರರು, ಕೈಮಗ್ಗ-ವಿದ್ಯುತ್ ಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಪ್ರಸ್ತುತ ನೇಕಾರಿಕೆ ಮಾಡುತ್ತಿರುವ ನೇಕಾರರು ದಿನಾಂಕ:೧೮-೦೯-೨೦೨೫ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹರು,ಕೈಮಗ್ಗ ಮತ್ತು ಜವಳಿ ವ ಜಿಲ್ಲಾ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು, ಆಧಾರ ಕಾರ್ಡ್,ನೇಕಾರ ಸಮ್ಮಾನ ಐಡಿ,ಪೆಹಚಾನ ಕಾರ್ಡ್,ಆಧಾರ ಲಿಂಕ್ ಮಾಡಿದ ಬ್ಯಾಂಕ್ ಪಾಸ್ ಬುಕ್ ಪ್ರತಿ,ಕೈಮಗ್ಗ-ವಿದ್ಯುತ್ ಮಗ್ಗದಲ್ಲಿ ನೇಕಾರಿಕೆಯಲ್ಲಿ ತೊಡಗಿರುವ ಫೋಟೋ ಮತ್ತು ಪಾವತಿ ರಸೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ,ಸಲ್ಲಿಸುವಂತೆಯೂ, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು,ಕೈಮಗ್ಗ ಮತ್ತು ಜವಳಿ ಇಲಾಖೆ,ಜಿಲ್ಲಾ ಪಂಚಾಯತ,ಶಿಖಾರಖಾಎನೆ,ಸ್ಟೇಶನ್‌ಬ್ಯಾಕ್ ರೋಡ್,ಡಿಐಸಿ ಆವರಣ,ವಿಜಯಪುರ ಇವರನ್ನು ಹಾಗೂ ಮೊಬೈಲ್ ಸಂಖ್ಯೆ ೯೯೦೨೫೬೧೪೪೧,೯೫೩೮೧೧೪೪೩೪ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.