ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿ, ಯುವ ಸಮೂಹ ನಮ್ಮ ದೇಶ, ಸಂಸ್ಕೃತಿ, ನಮ್ಮ ಪರಂಪರೆಯ ನಿರ್ಮಾಪಕ ಕ್ರಮಗಳನ್ನು ಅಧ್ಯಯನ ಮಾಡಬೇಕು ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.
ಸಿಂದಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶರಣರ, ದಾರ್ಶನಿಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವುದರ ಮೂಲಕ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಈಡಿಗ ಸಮಾಜದ ಅಧ್ಯಕ್ಷ ತಮಣ್ಣ ವಿ.ಈಳಗೇರ, ಕಂದಾಯ ನಿರೀಕ್ಷಕ ಎ.ಆಯ್.ಮಕಾಂದರ, ಸಮಾಜ ಕಲ್ಯಾಣ ಇಲಾಖೆಯ ರಾಯಪ್ಪ ಎಸ್.ಬನ್ನೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಸಮಾಜದ ಮುಖಂಡರಾದ ಸಚಿನ್ ಈಳಗೇರ, ಅರವಿಂದ ಈಳಗೇರ, ಮಹೇಶ ಗುತ್ತೇದಾರ, ರುಕ್ಮಯ್ಯ ಈಳಗೇರ, ಬಸವರಾಜ ಈಳಗೇರ, ನರಸಯ್ಯ ಈಳಗೇರ, ಸದಾನಂದ ಈಳಗೇರ, ಕಪಿಲ ಈಳಗೇರ, ರಾಮಯ್ಯ ಗುತ್ತೇದಾರ, ಗುರುರಾಜ ಗುತ್ತೇದಾರ ಸೇರಿದಂತೆ ಅನೇಕರು ಇದ್ದರು.