ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ನಮ್ಮ ದೇಶದಲ್ಲಿರುವ ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಬಹಳ ಶ್ರೇಷ್ಠವಾದುದ್ದು ಎಂದು ಮಹಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೋಶಾಧಿಕಾರಿ ಸದಾಶಿವ ಮೇತ್ರಿ ಹೇಳಿದರು.
ಅವರು ಪಟ್ಟಣದ ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಹತ್ತನೇ ತರಗತಿ ಅಗ್ರ ಶ್ರೇಣಿಯಲ್ಲಿ ತೇರ್ಗೆಡೆಯಾಗಿರುವ ವಿದ್ಯಾರ್ಥಿಗಳ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತ ದೇಶ ಇಂದು ಏನೆಲ್ಲಾ ಸಾಧನೆ ಮಾಡಿದೆ ಅದಕ್ಕೆಲ್ಲಾ ಶಿಕ್ಷಕರು ಕಾರಣವಾಗಿದ್ದಾರೆ. ಮಾದರಿ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಬಹಳ ದೊಡ್ಡದಾಗಿದೆ. ಬಿಇಡಿ ವ್ಯಾಸಂಗ ಮಾಡುತ್ತಿರುವ ಭಾವಿ ಶಿಕ್ಷಕರು ನಿಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಬಹಳ ಶೃದ್ದೆಯಿಂದ ಓದಿ, ಶಿಕ್ಷಕ ವೃತ್ತಿಯ ಘನತೆ ಕಾಪಾಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯಧರ್ಶಿ ಮಂಜೂರ ಅಹ್ಮದ್ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಜಿ ಹಿರೇಮಠ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ೨೦೨೪-೨೫ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರೀಷ್ಠ ಅಂಕ ಪಡೆದು ತೇರ್ಗೆಡೆಯಾಗಿರುವ ವಿದ್ಯಾರ್ಥಿಗಳಿಗೆ ೧೯೯೮-೯೯ ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಪ್ರಥಮ ಸ್ಥಾನ ಪಡೆದು ತೇರ್ಗೆಡೆಯಾದ ವಿದ್ಯಾರ್ಥಿ ಅಮೋಗಿ ತಂದೆ ರಮೇಶ ತೆಗ್ಗೆಳ್ಳಿ ಅವರಿಗೆ ೧೫ ಸಾವಿರ ರೂ ಹಾಗೂ ದ್ವಿತೀಯ ಸ್ಥಾನ ಪಡೆದು ತೇರ್ಗೆಡೆಯಾಗಿರುವ ಲಕ್ಷ್ಮಿ ತಂದೆ ಧರೇಪ್ಪ ಡಾಂಗೆ ಅವರಿಗೆ ೧೧ ಸಾವಿರ ರೂಪಾಯಿ ಬಹುಮಾನವನ್ನು ಸಂಸ್ಥೆಯ ಸಂಸ್ಥೆಯ ಕೋಶಾಧಿಕಾರಿ ಸದಾಶಿವ ಮೇತ್ರಿ ಅವರ ಮೂಲಕ ವಿತರಣೆ ಮಾಡಲಾಯಿತು.
ನಿವೃತ್ತ ಶಿಕ್ಷಕರಾದ ಡಿ.ಎಂ.ನದಾಫ್, ಸುರೇಶ ಎನ್.ಗಣಿಯಾರ, ಚಂದ್ರಕಾಂತ ಬುರಕಲ್, ಅನಿಲಕುಮಾರ ಘನಾತೆ, ಶಿವಶರಣಪ್ಪ ಸಾಲೋಟಗಿ ಅವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಮಲ್ಲಯ್ಯ ಕರಬಂಟಳನಾಳ, ಚಂದ್ರಕಾಂತ ಗುಂಡದ್, ವೀರಣಗೌಡ ಪಾಟೀಲ, ಗಂಗಾಧರ ಕಾಂಬಳೆ, ಶಶಿಕಲಾ ಖಜೂರಿ, ಕೆ.ನಾರಾಯಣ, ಸಿದ್ದು ಯಲ್ಜಿ, ಜಾಫರ್ ಪಟೇಲ್ ಸೇರಿದಂತೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು. ಸದಾನಂದ ಟಿಳ್ಳೆ ನಿರೂಪಿಸಿದರು.