ಉದಯರಶ್ಮಿ ದಿನಪತ್ರಿಕೆ
ಇಂಡಿ: ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಗೂ ಶಿಕ್ಷಕರಿಗೆ ಸಿಗುವ ಸೌಲಭ್ಯಗಳು ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕರಿಗೂ ಸಿಗಬೇಕು, ಅದೇ ರೀತಿಯಲ್ಲಿ ನಿವೃತ್ತಿ ಹೊಂದಿ ಬರಿಗೈಯಲ್ಲಿ ಮನೆಗೆ ಬರುತ್ತಿರುವ ಶಿಕ್ಷಕರನ್ನ ಜೀವನ ತುಂಬಾ ಕಷ್ಟದಾಯಕವಾಗಿದ್ದು, ಸರಕಾರ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ಆಗ್ರಹಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್ ರಾಜಗೋಪಾಲ್ ಹೇಳಿದರು.
ಭಾನುವಾರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಖಾಸಗಿ ಪಂಕ್ಚನ್ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಸಂಘದ ಸಂಯುಕ್ತಾಶ್ರಯದಲ್ಲಿ 2025 ನೇ ಸಾಲಿನ ಶಿಕ್ಷಕರ ದಿನೋತ್ಸವ ನಿಮಿತ್ತವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅಖಿಲ ಕರ್ನಾಟಕ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ಮಾತನಾಡಿ, ಈಗಿರುವ ಸರಕಾರ ಗ್ಯಾರೆಂಟಿ ಯೋಜನೆಗಳಲ್ಲಿ ಎನ್ ಪಿ ಎಸ್ ಬದಲಾಗಿ ಒಪಿಎಸ್ ಮಾಡುವ ಯೋಜನೆ ಹಾಕಿಕೊಂಡಿದ್ದು, ತಮ್ಮ ಸರಕಾರ ನಮಗೂ ಸಹ ಒಪಿಎಸ್ ಜಾರಿಗೆ ತರಲು ಸಾಧ್ಯ. ಅದಕ್ಕೆ ಶಾಸಕರು ಒಪಿಎಸ್ ಜಾರಿಗೆ ತರಲು ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಅನುದಾನಿತ ಶಾಲೆಯ ಶಿಕ್ಷಕರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಸ್ವರೂಪಾನಂದ ಸ್ವಾಮಿಜಿ, ಅಧ್ಯಕ್ಷತೆ ಶಿವಾನಂದ ಹಿರೇಕುರಬರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಿದಾ ಅನಿಸ್ ಎಸ್ ಮುಜಾವರ, ಎಸ್ ಆರ್ ನಡಗಡ್ಡಿ, ಗೀರಿಶ್ ಬಿರಾದಾರ, ವಾಯ್ ಟಿ ಪಾಟೀಲ, ಶಾಂತಪ್ಪ ದಶವಂತ, ಪ್ರಕಾಶ ಐರೋಡಗಿ, ಮಂಜುನಾಥ ನಾಯ್ಕೊಡಿ,ಸಂಗನಗೌಡ ಹಚಡದ, ಎಸ್ ವಿ ಹರಳಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸ್ವಾಗತ ಆರ್ ಎಸ್ ಬಾಬರ್, ನಿರೂಪಣೆ ಎಸ್ ಎಸ್ ಕಂಬಾರ, ದ್ಯಾವಪ್ಪ ಹಿರೇಕುರಬರ ವಂದಿಸಿದರು.