Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೇಡಿ, ನಿಮ್ಮನ್ನ ನಾವು ಬಿಟ್ಟಿರಲ್ಲ, ಅಪ್ಪಿಕೊಂಡು ಕಂಬನಿಯಿಟ್ಟು ನಮ್ಮನ್ನು ಬಿಟ್ಟು ಹೋಗ್ಬೇಡಿ, ಕಾಲು ಹಿಡಿದು ಹೀಗೆ ಮಕ್ಕಳು ಕಣ್ಣೀರಿಡುತ್ತಿದ್ದರೆ, ನೆರೆದವರ ಕಣ್ಣಾಲೆಗಳು ಒದ್ದೆಯಾಗುತ್ತಿತ್ತು. ಇಷ್ಟಕ್ಕೂ ಮಕ್ಕಳ ಈ ರೋಧನೆಗೆ ಕಾರಣ ಶಿಕ್ಷಕಿಯ ವರ್ಗಾವಣೆ.ತಾಲೂಕಿನ ಕೂಡಗಿ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಬಹುಮುಖ ಪ್ರತಿಭೆಯ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ ಪ್ರತಿಭಾ ತೊರವಿ ಹಠಾತ್ ಬೇರೆ ಶಾಲೆಗೆ ವರ್ಗಾವಣೆ ಸುದ್ದಿ ತಿಳಿದು, ಬೆಳಗಿನ ಪ್ರಾರ್ಥನೆ ಸಮಯ ವರ್ಗಾವಣೆ ವಿಷಯ ಮಕ್ಕಳು ಕಣ್ಣೀರಿಡಲು ಶುರುಮಾಡಿದರು. ತಮ್ಮ ಪಾಠ ಹೇಳಿಕೊಡುವದಷ್ಟೇ ಅಲ್ಲದೆ ಬದುಕು ಹೇಗೆ ಸಾಗಿಸಬೇಕು ಎಂದು ಹೃದಯಸ್ಪರ್ಶಿ ಪಾಠಗಳನ್ನು ಕಲಿಸಿದ್ದ ಶಿಕ್ಷಕಿ ನಮ್ಮನ್ನು ಬಿಟ್ಟು ಬೇರೆ ಶಾಲೆಗೆ ಹೋಗುತ್ತಿದ್ದಾರೆಂಬ ಕಲ್ಪನೆಯೇ ಮಕ್ಕಳಿಗೆ ಸಹಿಸಲಾಗಲಿಲ್ಲ. ಸಣ್ಣಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ತರಗತಿಯ ವಿದ್ಯಾರ್ಥಿಗಳವರೆಗೂ ಕಣ್ಣೀರಿನಲ್ಲಿ ತೇಲಿದರು. ತರಗತಿಗೆ ಬಂದು ತಾಯಿ ತರಹ ಮುದ್ದಾಡುತ್ತಿದ್ದ, ತಪ್ಪು ಮಾಡಿದಾಗ ಅಳುವ ಬದಲು ತಿದ್ದಿ ಪಾಠ ಕಲಿಸುತ್ತಿದ್ದ…
ಸಂತ್ರಸ್ತರ ಬೇಡಿಕೆಯಂತೆ 1 ಎಕರೆ ನೀರಾವರಿ ಭೂಮಿಗೆ 55 ಲಕ್ಷ ಒಣ ಬೇಸಾಯಿ 1 ಎಕರೆ ಜಮೀನಿಗೆ 45 ಲಕ್ಷ ರೂ. ಬೆಲೆ ನಿಗದಿಗೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಒತ್ತಾಯ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಜಿಲ್ಲೆಯ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಮುಳುಗಡೆ ಹಾಗೂ ಕಾಮಗಾರಿಗೆ ವಿಜಯಪುರ-ಬಾಗಲಕೋಟ ಜಿಲ್ಲೆಗಳ ಸುಮಾರು 1 ಲಕ್ಷ 30 ಸಾವಿರ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ 1 ಎಕರೆ ನೀರಾವರಿ ಭೂಮಿಗೆ 55 ಲಕ್ಷ ಒಣ ಬೇಸಾಯಿ 1 ಎಕರೆ ಜಮೀನಿಗೆ 45 ಲಕ್ಷ ರೂ. ಗಳಂತೆ ಬೆಲೆ ನಿಗದಿ ಮಾಡಿ ಫರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಒತ್ತಾಯಿಸಿದರು.ಪಟ್ಟಣದ ಎಸ್.ಕೆ. ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜ ಆವರಣದ ಕನ್ವೆನ್ಷನ್ ಹಾಲನಲ್ಲಿ ಶನಿವಾರ ಬಿಜೆಪಿ ಬಸವನ ಬಾಗೇವಾಡಿ ಮಂಡಲ ಸಭೆಯ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು.ಈಗ ದಿ.16 ರಂದು ವಿಶೇಷ ಸಂಪುಟ ಸಭೆ ಕರೆದಿದ್ದು ಆ ಸಭೆಯಲ್ಲಿ ಹಿನ್ನೀರಿನಲ್ಲಿ ಮುಳಗಡೆಯಾಗಲಿರುವ ಮತ್ತು…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಭೀಮಾ ನದಿ ಜಲಾನಯನ ಪ್ರದೇಶ ಹಾಗೂ ಭೋರಿ ಹಳ್ಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳದ ನೀರು ಪುನಃ ಭೀಮಾ ನದಿಗೆ ಸೇರುತ್ತಿರುವ ಕಾರಣದಿಂದಾಗಿ ಭೀಮಾ ನದಿಯಲ್ಲಿ ಮತ್ತೆ ನೀರಿನ ಹರಿವು ಹೆಚ್ಚಾಗಿದೆ.ಈ ಕುರಿತು ಕೆಎನ್‌ಎನ್‌ಎಲ್ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಸಜ್ಜನ್ ಅವರು ಮಾಹಿತಿ ನೀಡಿದ್ದು ಭೀಮಾ ನದಿಯಲ್ಲಿಗ ೩೪ ಸಾವಿರ ಕ್ಯೂಸೇಕ್ ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಬ್ಯಾರೇಜ್‌ನಿಂದ ಹೊರಗಡೆ ಬಿಡಲಾಗುತ್ತಿದೆ, ಹೀಗಾಗಿ ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣದಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಮನವಿ ಮಾಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಈ ವರ್ಷದ ಮಳೆಗಾಲ ಭರ್ಜರಿಯಾಗಿದ್ದು ಹಳ್ಳ ಕೊಳ್ಳಗಳು ತುಂಬಿಕೊಂಡು ಜನ ಸಾಮಾನ್ಯರಿಗೆ ಹಳ್ಳ ದಾಟಲು ಕೂಡ ಸಮಸ್ಯೆ ತಂದೊಡ್ಡಿದೆ. ತಾಲೂಕಿನ ಬಿದನೂರ ಗ್ರಾಮದಲ್ಲಿನ ಹಳ್ಳ ತುಂಬಿ ಹರಿದು ಹಳ್ಳದ ಸೇತುವೆ ತುಂಬಿಕೊಂಡಿದ್ದರಿಂದ ಹಳ್ಳ ದಾಟಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಶಿಕ್ಷಕರು ಹರಸಾಹಸ ಪಡುವಂತಾಗಿದೆ.ಬಿದನೂರ ಹಳ್ಳದ ಸೇತುವೆಯ ಎತ್ತರ ಬಹಳ ಕಡಿಮೆ ಇದ್ದು ಪ್ರತಿ ವರ್ಷ ಮಳೆ ಹೆಚ್ಚಾದರೆ ಸೇತುವೆ ಮುಳುಗಡೆಯಾಗುತ್ತಿದೆ ಎಂದು ಎಸ್‌ಡಿಎಂಸಿಯವರು ಕಳೆದ ಬಾರಿಯ ಸಭೆಯಲ್ಲಿ ಚರ್ಚೆ ನಡೆಸಿ ಸಂಬಂಧ ಪಟ್ಟವರ ಗಮನಕ್ಕೆ ತಂದು ಸೇತುವೆ ಎತ್ತರ ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರು. ಆದರೂ ಕೂಡ ಸಂಬಂಧ ಪಟ್ಟವರು ಸೇತುವೆ ಎತ್ತರಕ್ಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿಲ್ಲ, ಅಲ್ಲದೆ ಅವಗಢ ಸಂಭವಿಸುವ ಮುನ್ನ ಶಾಲೆ ಮಕ್ಕಳು, ಶಿಕ್ಷಕರು, ಸಾರ್ವಜನಿಕರು, ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಬಿದನೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರವಾಹ ಪೀಡಿತ ಊರುಗಳಿಗೆ ಜಿ.ಪಂ ಸಿಇಒ ಭೇಟಿ ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಭೋರಿ ಹಳ್ಳ ತುಂಬಿ ಹರಿಯುತ್ತಲಿದ್ದು, ಹಳ್ಳದ ನೀರಿನಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಪ್ರವಾಹ ಪೀಡಿತ ಊರುಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಭನ್ವರಸಿಂಗ್ ಮೀನಾ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವಿಕ್ಷಣೆ ಮಾಡಿದರು.ಬಳಿಕ ಮಾತನಾಡಿದ ಅವರು ಮಳೆ ಹೆಚ್ಚಾಗಿ ಭೋರಿ ಹಳ್ಳ ತುಂಬಿ ಹರಿಯುತ್ತಿದೆ, ಹಳ್ಳದ ನೀರು ಭೀಮಾ ನದಿ ಸೇರಿಕೊಂಡು ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಭೋರಿ ಹಳ್ಳದ ಪಾತ್ರದಲ್ಲಿರುವ ಊರುಗಳಲ್ಲಿ ಮಳೆ ನೀರು, ಹಳ್ಳದ ನೀರಿನಿಂದಾಗಿ ಸಮಸ್ಯೆ ಉಲ್ಬಣಿಸಿದೆ. ಸಮಸ್ಯೆ ಉಲ್ಬಣಿಸಿದ ಕಡೆಗಳಲ್ಲಿ ಸ್ಥಳೀಯ ಪಂಚಾಯಿತಿಯವರಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇವೆ. ಸಾರ್ವಜನಿಕರು ಕೂಡ ಹಳ್ಳದ ನೀರಿಗೆ ಇಳಿಯುವುದು ಬೇಡ ಎಂದು ಸಲಹೆ ನೀಡಿದರು.ಭೋರಿ ಹಳ್ಳದ ನೀರು ಜನರ ಮನೆಗಳಿಗೆ ನುಗ್ಗಿದ್ದ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.ದಿಕ್ಸಂಗಾ(ಕೆ) ಗ್ರಾಮದಲ್ಲಿ ಪ್ರವಾಹ ಪೀಡಿತ ಕುಟುಂಬಗಳಿಗಾಗಿ ಗ್ರಾಮ ಪಂಚಾಯಿತಿಯಿಂದಾಗಿ ಆಹಾರ ವ್ಯವಸ್ಥೆ…
ಬೆಂಗಳೂರಿಗೆ ಯೆಲ್ಲೋ ಅಲರ್ಟ್ | ಹವಾಮಾನ ಇಲಾಖೆ ಮುನ್ಸೂಚನೆ ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ಇನ್ನೊಂದಿಷ್ಟು ದಿನ ಮುಂದುವರೆಯಲಿದ್ದು ಮುಂದಿನ ನಾಲ್ಕು ದಿನ ಅಂದರೆ ಸೆಪ್ಟೆಂಬರ್ 16ರವರೆಗೂ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಸೆಪ್ಟೆಂಬರ್ 16ವರೆಗೂ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಜೋರಾಗಿರಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಮಳೆ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅಂತೆಯೇ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮಳೆ ಜೋರಾಗಲಿದೆ. ವಿಜಯಪುರ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ದಕ್ಷಿಣ ಒಳನಾಡು, ಉಡುಪಿ, ಉತ್ತರ ಕನ್ನಡ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಜಾರಿ! ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಮತ್ತೊಂದಿಷ್ಟು ದಿನ ಮುಂದುವರೆಯುವ…
ಒಟ್ಟು ೧೪೨೦ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವ್ಯಾಜ್ಯವೊಂದರಲ್ಲಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ದಂಪತಿಗಳನ್ನು ಒಂದು ಮಾಡಿ ಲೋಕ್ ಅದಾಲತ್ ಜನಸಾಮಾನ್ಯರಿಗೆ ಸಹಾಯಕಾರಿಯಾಗುತ್ತಿದೆ ಎಂಬ ಸಂದೇಶವನ್ನು ಇಲ್ಲಿನ ನ್ಯಾಯಾಲಯ ಮತ್ತೊಮ್ಮೆ ಸಾಕ್ಷೀಕರಿಸಿದೆ.ಮದುವೆಯಾಗಿ ಎರಡು ವರ್ಷಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆ, ತನ್ನ ಪತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಒಂದು ವರ್ಷದಲ್ಲಿ ೯ ಬಾರಿ ನ್ಯಾಯಾಲಯಕ್ಕೆ ಅಲೆದಿದ್ದರು. ದಂಪತಿಗಳಿಬ್ಬರೂ ದೂರಾಗುವ ಸಂಭವವಿತ್ತು. ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಇಲ್ಲಿನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ರಾಮಮೂರ್ತಿ ಎನ್ ಅವರು ಎರಡೂ ಪಕ್ಷಗಳಿಗೆ ತಿಳುವಳಿಕೆ ಹೇಳಿ, ಮನವೊಲಿಸಿ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂಲಕ ಕೌಟುಂಬಿಕ ದೌರ್ಜನ್ಯದ ಅಡಿ ದಾಖಲಾಗಿದ್ದ ಪ್ರಕರಣ, ರಾಜೀ ಸಂಧಾನದ ಮೂಲಕ ಸುಖಾಂತ್ಯ ಕಂಡು ದಂಪತಿಗಳಲ್ಲಿ ಮಂದಹಾಸ ಮೂಡಿದೆ.ಈ ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಮಂಡಲ ಸೇವಾ ಪಾಕ್ಷಿಕ ಕಾರ್ಯಾಗಾರ ಜರುಗಿತು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಮಂಡಲ ಸೇವಾ ಪಾಕ್ಷಿಕ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ ೧೭ ರಿಂದ ಮಹಾತ್ಮಾ ಗಾಂಧಿ ಜನ್ಮದಿನವಾದ ಅಕ್ಟೋಬರ್ ೨ರವರೆಗೆ ಸಾಮಾಜಿಕ ಸೇವಾ ಕಾರ್ಯಗಳ ಕುರಿತಾಗಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಮಂಡಲ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ, ತಾಯಿಯ ಹೆಸರಿನಲ್ಲಿ ಒಂದು ಸಸಿ, ರಕ್ತದಾನ, ಆರೋಗ್ಯಶಿಬಿರ, ಕ್ರೀಡೆ, ಹಾಗೂ ಚಿತ್ರಕಲಾ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಹಾಗೂ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿ, ಪ್ರಧಾನಿ ಮೋದಿಯವರ ಜೀವನ ಮತ್ತು ಸಾಧನೆ ಪಕ್ಷದ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ. ಅವರ ನಾಯಕತ್ವದಲ್ಲಿ ಜಾಗತಿಕ ವೇದಿಕೆಗಳಲ್ಲಿ ಭಾರತದ ಹೊಸನೋಟ ಹಾಗೂ ಕಲ್ಯಾಣ ಯೋಜನೆಗಳನ್ನು ಇಂದು ಗ್ರಾಮೀಣ ಭಾರತದ ಜನತೆಗೆ ತಿಳಿಸುವುದು ಅಗತ್ಯವಾಗಿದೆ ಎಂದರು.ಜಿಲ್ಲಾ ಸಂಚಾಲಕ ಗೋಪಾಲ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನವರಸಪುರ ಶಾಖಾ ವ್ಯಾಪ್ತಿಯಲ್ಲಿ ಹೆಚ್.ಟಿ ವಾಹಕ ಬದಲಾವಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಸೇನಾ ನಗರ ಫೀಡರ್‌ನ ಮೇಲೆ ಬರುವ ಟ್ರೇಸರಿ ಕಾಲೋನಿ, ರಾಮದೇವ ನಗರ,ಅಯ್ಯಪ್ಪ ಸ್ವಾಮಿ ದೇವಸ್ಥಾನ,ಇಟಗಿ ಕಾಲೋನಿ, ವೇದಾಂತ ಹಾಸ್ಪಿಟಲ್, ನಿಂಬರಗಿ ಬಡಾವಣೆ, ಕುಲಕರ್ಣಿ ಲೇಔಟ್, ಖುರೇಷಿ ಕಾಲೋನಿ ಹತ್ತಿರದ ಪ್ರದೇಶಗಳಲ್ಲಿ ಸೆ.15ರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿರುತ್ತಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವ್ಯವಹಾರ ಅಧ್ಯಯನ ಮತ್ತು ಸಂಶೋಧನೆ ಕೇಂದ್ರ, ಎಂ.ಬಿ.ಎ. ವಿಭಾಗದಲ್ಲಿ ನಾನಾ ಕಾರ್ಪೋರೇಟ್ ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾನಾ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.ಕುಮಾರ ಅಭಿಷೇಕ ಬಿಲ್ಲದ, ಕಾವ್ಯಾ ಹಿರೇಮಠ ಅವರು ಪುಣೆಯ ಡಿಸೈನ್ ಕರ್ವ ಟೆಕ್ನಾಲಜಿ ಕಂಪನಿಗೆ ಆಯ್ಕೆಯಾದರೆ, ನಿವೇದಿತಾ ತೊಂಡಿಹಾಳ, ಸಚೀನ ಪಟ್ಟಣಶೆಟ್ಟಿ, ಬಸವರಾಜ ದಡ್ಡಿಮನಿ, ಅರುಣ ಮೊಪಗಾರ ಅವರು ಜಿಕ್ಸಿಸ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೇಮಕವಾಗಿದ್ದಾರೆ.ಅದೇ ರೀತಿ ವೀಣಾ ಪಾಟೀಲ, ರೇಖಾ ಮನಗೂಳಿ, ಕೀರ್ತಿ ಪಾಟೀಲ ವಿಜಯಪುರದ ಎಂ.ಜಿ. ಹೆಕ್ಟರ್ ಕಂಪನಿಗೆ, ಸನ್ಮಿತಾ ಕುಲಕರ್ಣಿ, ಸ್ವಾತಿ ಬೋಮರಡ್ಡಿ, ಅಶ್ವೀನಿ ಮೊಕಾಶಿ, ಆರ್. ಎನ್. ಎಸ್ ಮೋಟಾರು ಕಂಪನಿಗೆ, ಶ್ರದ್ಧಾ ಅಕ್ಕಿ ಗುಜರಾತಿನ ಮಾನಸ ಸರೋವರ ಫಾರ್ಮರ್ ಪ್ರೋಡ್ಯೂಸರ್ ಕಂಪನಿ ಲಿಮಿಟೆಡ್‌ಗೆ, ಸೋಮಶೇಖರ ಗಲಗಲಿ ಮುಂಬೈನ ಹೋಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್‌ಗೆ, ಸಹನಾ ಜಿ.…
