ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಭೀಮಾ ನದಿ ಜಲಾನಯನ ಪ್ರದೇಶ ಹಾಗೂ ಭೋರಿ ಹಳ್ಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳದ ನೀರು ಪುನಃ ಭೀಮಾ ನದಿಗೆ ಸೇರುತ್ತಿರುವ ಕಾರಣದಿಂದಾಗಿ ಭೀಮಾ ನದಿಯಲ್ಲಿ ಮತ್ತೆ ನೀರಿನ ಹರಿವು ಹೆಚ್ಚಾಗಿದೆ.
ಈ ಕುರಿತು ಕೆಎನ್‌ಎನ್‌ಎಲ್ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಸಜ್ಜನ್ ಅವರು ಮಾಹಿತಿ ನೀಡಿದ್ದು ಭೀಮಾ ನದಿಯಲ್ಲಿಗ ೩೪ ಸಾವಿರ ಕ್ಯೂಸೇಕ್ ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಬ್ಯಾರೇಜ್‌ನಿಂದ ಹೊರಗಡೆ ಬಿಡಲಾಗುತ್ತಿದೆ, ಹೀಗಾಗಿ ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣದಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಮನವಿ ಮಾಡಿದ್ದಾರೆ.