ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವ್ಯವಹಾರ ಅಧ್ಯಯನ ಮತ್ತು ಸಂಶೋಧನೆ ಕೇಂದ್ರ, ಎಂ.ಬಿ.ಎ. ವಿಭಾಗದಲ್ಲಿ ನಾನಾ ಕಾರ್ಪೋರೇಟ್ ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾನಾ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಕುಮಾರ ಅಭಿಷೇಕ ಬಿಲ್ಲದ, ಕಾವ್ಯಾ ಹಿರೇಮಠ ಅವರು ಪುಣೆಯ ಡಿಸೈನ್ ಕರ್ವ ಟೆಕ್ನಾಲಜಿ ಕಂಪನಿಗೆ ಆಯ್ಕೆಯಾದರೆ, ನಿವೇದಿತಾ ತೊಂಡಿಹಾಳ, ಸಚೀನ ಪಟ್ಟಣಶೆಟ್ಟಿ, ಬಸವರಾಜ ದಡ್ಡಿಮನಿ, ಅರುಣ ಮೊಪಗಾರ ಅವರು ಜಿಕ್ಸಿಸ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೇಮಕವಾಗಿದ್ದಾರೆ.
ಅದೇ ರೀತಿ ವೀಣಾ ಪಾಟೀಲ, ರೇಖಾ ಮನಗೂಳಿ, ಕೀರ್ತಿ ಪಾಟೀಲ ವಿಜಯಪುರದ ಎಂ.ಜಿ. ಹೆಕ್ಟರ್ ಕಂಪನಿಗೆ, ಸನ್ಮಿತಾ ಕುಲಕರ್ಣಿ, ಸ್ವಾತಿ ಬೋಮರಡ್ಡಿ, ಅಶ್ವೀನಿ ಮೊಕಾಶಿ, ಆರ್. ಎನ್. ಎಸ್ ಮೋಟಾರು ಕಂಪನಿಗೆ, ಶ್ರದ್ಧಾ ಅಕ್ಕಿ ಗುಜರಾತಿನ ಮಾನಸ ಸರೋವರ ಫಾರ್ಮರ್ ಪ್ರೋಡ್ಯೂಸರ್ ಕಂಪನಿ ಲಿಮಿಟೆಡ್‌ಗೆ, ಸೋಮಶೇಖರ ಗಲಗಲಿ ಮುಂಬೈನ ಹೋಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್‌ಗೆ, ಸಹನಾ ಜಿ. ಹುಬ್ಬಳ್ಳಿಯ ರಾಯ್ಸ್ ಎಂಪೈರ್ ಪ್ರೈವೇಟ್ ಲಿಮಿಟೆಡ್‌ಗೆ, ಸೈಲ್ ಏಷಿಯಾ ನೆಟ್ ಸೆಟ್ ಲೈಟ್ ಕಮ್ಯುನಿಕೇಶನ್ ಲಿಮಿಟೆಡ್‌ಗೆ, ರುದ್ರಗೌಡ ಚಡಚಣ ಏಷಿಯನ್ ಪೇಂಟ್ಸ್‌ಗೆ, ತೌಷಿಫ್ ನದಾಫ ಜುವೇಂಚರ್ ಹೆಲ್ತಕೇರ್‌ಗೆ, ಸಮರ್ಥ ಮಿರಜಕರ್ ಅಮೀತ್ ಕ್ರಿಯೇಷನ್ಸ್‌ಗೆ ಸರ್ವೇಶ ಹರಕಾರಿ ಧರೀಶ್ವರ ಟೆಕ್ ಅಗ್ರೋ ಸರ್ವಿಸ್‌ಗೆ ಆಯ್ಕೆ ಯಾಗಿದ್ದಾರೆ.
ನಾನಾ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ, ನೇಮಕಾತಿ ಅಧಿಕಾರಿ ಡಾ. ಮಹಾಂತೇಶ ಕನಮಡಿ, ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಅಭಿನಂದಿಸಿದ್ದಾರೆ.