ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಈ ವರ್ಷದ ಮಳೆಗಾಲ ಭರ್ಜರಿಯಾಗಿದ್ದು ಹಳ್ಳ ಕೊಳ್ಳಗಳು ತುಂಬಿಕೊಂಡು ಜನ ಸಾಮಾನ್ಯರಿಗೆ ಹಳ್ಳ ದಾಟಲು ಕೂಡ ಸಮಸ್ಯೆ ತಂದೊಡ್ಡಿದೆ. ತಾಲೂಕಿನ ಬಿದನೂರ ಗ್ರಾಮದಲ್ಲಿನ ಹಳ್ಳ ತುಂಬಿ ಹರಿದು ಹಳ್ಳದ ಸೇತುವೆ ತುಂಬಿಕೊಂಡಿದ್ದರಿಂದ ಹಳ್ಳ ದಾಟಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಶಿಕ್ಷಕರು ಹರಸಾಹಸ ಪಡುವಂತಾಗಿದೆ.
ಬಿದನೂರ ಹಳ್ಳದ ಸೇತುವೆಯ ಎತ್ತರ ಬಹಳ ಕಡಿಮೆ ಇದ್ದು ಪ್ರತಿ ವರ್ಷ ಮಳೆ ಹೆಚ್ಚಾದರೆ ಸೇತುವೆ ಮುಳುಗಡೆಯಾಗುತ್ತಿದೆ ಎಂದು ಎಸ್‌ಡಿಎಂಸಿಯವರು ಕಳೆದ ಬಾರಿಯ ಸಭೆಯಲ್ಲಿ ಚರ್ಚೆ ನಡೆಸಿ ಸಂಬಂಧ ಪಟ್ಟವರ ಗಮನಕ್ಕೆ ತಂದು ಸೇತುವೆ ಎತ್ತರ ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರು. ಆದರೂ ಕೂಡ ಸಂಬಂಧ ಪಟ್ಟವರು ಸೇತುವೆ ಎತ್ತರಕ್ಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿಲ್ಲ, ಅಲ್ಲದೆ ಅವಗಢ ಸಂಭವಿಸುವ ಮುನ್ನ ಶಾಲೆ ಮಕ್ಕಳು, ಶಿಕ್ಷಕರು, ಸಾರ್ವಜನಿಕರು, ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಬಿದನೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.