ಸಂತ್ರಸ್ತರ ಬೇಡಿಕೆಯಂತೆ 1 ಎಕರೆ ನೀರಾವರಿ ಭೂಮಿಗೆ 55 ಲಕ್ಷ ಒಣ ಬೇಸಾಯಿ 1 ಎಕರೆ ಜಮೀನಿಗೆ 45 ಲಕ್ಷ ರೂ. ಬೆಲೆ ನಿಗದಿಗೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಜಿಲ್ಲೆಯ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಮುಳುಗಡೆ ಹಾಗೂ ಕಾಮಗಾರಿಗೆ ವಿಜಯಪುರ-ಬಾಗಲಕೋಟ ಜಿಲ್ಲೆಗಳ ಸುಮಾರು 1 ಲಕ್ಷ 30 ಸಾವಿರ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ 1 ಎಕರೆ ನೀರಾವರಿ ಭೂಮಿಗೆ 55 ಲಕ್ಷ ಒಣ ಬೇಸಾಯಿ 1 ಎಕರೆ ಜಮೀನಿಗೆ 45 ಲಕ್ಷ ರೂ. ಗಳಂತೆ ಬೆಲೆ ನಿಗದಿ ಮಾಡಿ ಫರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಒತ್ತಾಯಿಸಿದರು.
ಪಟ್ಟಣದ ಎಸ್.ಕೆ. ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜ ಆವರಣದ ಕನ್ವೆನ್ಷನ್ ಹಾಲನಲ್ಲಿ ಶನಿವಾರ ಬಿಜೆಪಿ ಬಸವನ ಬಾಗೇವಾಡಿ ಮಂಡಲ ಸಭೆಯ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗ ದಿ.16 ರಂದು ವಿಶೇಷ ಸಂಪುಟ ಸಭೆ ಕರೆದಿದ್ದು ಆ ಸಭೆಯಲ್ಲಿ ಹಿನ್ನೀರಿನಲ್ಲಿ ಮುಳಗಡೆಯಾಗಲಿರುವ ಮತ್ತು ಕಾಲುವೆಗಳಿಗಾಗಿ ಭೂ-ಸ್ವಾದೀನ ಮಾಡಿಕೊಂಡಿರುವ ಜಮಿನಗಳಿಗೆ ರೈತರ ಬೇಡಿಕೆಯಂತೆ ಅದೇ ಸಚಿವ ಸಂಪುಟ ಸಭೆಯಲ್ಲಿ ಜಮಿನುಗಳಿಗೆ ರೈತರ ಬೇಡಿಕೆಯಂತೆ ಬೆಲೆ ನಿಗದಿ ಮಾಡಬೇಕು ಎಂದರು.
ಆಲಮಟ್ಟಿ ಜಲಾಶಯದಲ್ಲಿ ಮುಳಗಡೆಯಾದ ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ 1498 ಮನೆಗಳಿಗೆ ಮತ್ತು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಟಕ್ಕಳಕಿ ಗ್ರಾಮದ ಮನೆಗಳಿಗೆ ಮಾತ್ರ 3 ಕಂಡಿಶನ್ ಮೂಲಕ ಪರಿಹಾರ ಧನ ನೀಡಲಾಗಿತ್ತು. ಟಕ್ಕಳಕಿ ಗ್ರಾಮಕ್ಕೆ ಹಾಕಿದ 3 ಕಂಡಿಶನ್ ಸಡಿಲಗೊಳಿಸಿ ಎಲ್ಲಾ ಸಂತ್ರಸ್ತರಂತೆ ಫರಿಹಾರ ನೀಡಲಾಗಿದೆ. ಆದರೆ ಕೊಲ್ದಾರ ಗ್ರಾಮದ 1498 ಮನೆಗಳಿಗೆ ಹಾಕಿದ 3 ಕಂಡಿಶನ್‌ಗಳ ಪೈಕಿ 2 ಕಂಡಿಶನ್ ತಗೆದು ಹಾಕಲಾಗಿದೆ. 3ನೇ ಕಂಡಿಶನ್ ಹೆಚ್ಚುವರಿ ಫರಿಹಾರಕೆ ನ್ಯಾಯಾಲಯಕ್ಕೆ ಹೋಗಬಾರದು ಎನ್ನುವ ಕರಾರು ಮಾತ್ರ ಬಾಕಿ ಇದೆ. ಕಾರಣ 1498 ಮನೆ ಮಾಲಿಕರಿಗೆ ಇಡೀ ಆಲಮಟ್ಟಿ ಯೋಜನೆಯಡಿಯಲ್ಲಿ ಕೊಲ್ದಾರ ಗ್ರಾಮಕ್ಕೆ ಮಾತ್ರ ಅನ್ಯಾಯವಾಗಿದ್ದು ಹೆಚ್ಚುವರಿ ಫರಿಹಾರ ನೀಡಿ ಸರಿಪಡಿಸಬೇಕು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಮುಳಗಡೆಯಾಗುವ ಜಮೀನುಗಳ ರೈತರ ಬೇಡಿಕೆಯಂತೆ ಪರಿಹಾರ ಒದಗಿಸುವ ಬೇಡಿಕೆಗೆ ಭಾರತೀಯ ಜನತಾ ಪಾರ್ಟಿ ಹಾಗೂ ಸಂತ್ರಸ್ತರ ಜೊತೆ ಸೇರಿ ದಿ14 ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹತ್ತಿರ ಹುಬ್ಬಳ್ಳಿ-ವಿಜಯಪುರ-ಹುಮ್ನಾಬಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 12 ಘಂಟೆಗೆ ಸಾಂಕೇತಿಕವಾಗಿ ರಸ್ತೆ ತಡೆಹಿಡಿದು ಪ್ರತಿಭಟಿಸಲಾಗುವುದು.
ದಿನಾಂಕ: 15 ರಿಂದ 20 ರವರೆಗೆ ಕೊಲ್ದಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಹತ್ತಿರ ಬೆಳ್ಳಗ್ಗೆ 10-30 ರಿಂದ ಸಂಜೆ 5-30ರ ವರೆಗೆ ಸರದಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು. ಒಂದು ವೇಳೆ ಸರಕಾರ 16-09-2025ರಂದು ನಡೆಯುವ ಸಂಪುಟ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡದೇ ಇದ್ದರೆ ದಿನಾಂಕ: 21-09-2025 ರಿಂದ ಅಮಾರಣ ಉಪವಾಸ ಸತ್ಯಾಗ್ರಹವನ್ನು ಬೇಡಿಕೆ ಈಡೇರುವರೆಗೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾಶ್ಯಾಳ, ರಾಜ್ಯ ಸಂಚಾಲಕ ಸಂಜಯ ಪಾಟೀಲ ಕನಮಡಿ, ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಮಲ್ಲಮ್ಮ ಜೋಗೂರ, ಅಶ್ವಿನಿ ಪಟ್ಟಣಶೆಟ್ಟಿ, ರಾಜಶೇಖರ ಹೊಳ್ಳಿ, ಇಸ್ಮಾಯಿಲ್ ತಹಶೀಲ್ದಾರ, ಪೀರ ಅಹಮ್ಮದ್ ಗಿರಗಾಂವಿ, ಸಂಗಮೇಶ ಗೂಗಿಹಾಳ, ಹಣಮಂತ ಗುಡದಿನ್ನಿ ಉಪಸ್ಥಿತರಿದ್ದರು.