Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಜಾಪ್ರಭುತ್ವದ ಆಶಯಗಳ ರಕ್ಷಣೆ, ಆದರ್ಶಗಳನ್ನು ಪಾಲನೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಾಚಾರ್ಯೆ ಡಾ. ರಾಬಿಯಾ. ಎಂ. ಮಿರ್ಧೆ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ, ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ರಕ್ಷಣಾ ಕೋಶ ಹಾಗೂ ಸಮಾನ ಅವಕಾಶ ಕೋಶಗಳ ಸಹಯೋಗದಲ್ಲಿ ಸೋಮವಾರ ಅಯೋಜಿಸಲಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅವರು ಮಾತನಾಡಿದರು.ವಿಶ್ವದ ಗಣತಂತ್ರದ ದೇಶಗಳಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲು,ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸುವ ಸಲುವಾಗಿ ಜಾಗತಿಕವಾಗಿ ಪ್ರತಿ ವರ್ಷ ಸೆ.೧೫ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.ಈ ವೇಳೆಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ತರನ್ನುಮ್ ಜಬೀನ್ ಖಾನ್ ಮಾತನಾಡಿ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಆಶಯ ಮತ್ತು ಮಹತ್ವದ ಬಗ್ಗೆ ಹೇಳಿ, ಪ್ರತಿಜ್ಞಾ ವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಮಾನವ ಹಕ್ಕುಗಳ ರಕ್ಷಣಾ ಕೋಶದ ಅಧ್ಯಕ್ಷ ಡಾ.ಧರ್ಮಗುರು ಪ್ರಸಾದ್, ಸಮಾನ…
ವಿಚಾರ ಕ್ರಾಂತಿ ಕೃತಿಯ ವಿಚಾರ ಸಂಕಿರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮೂಳೆಗಾಂವ ಅಭಿಮತ ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಧಾರ್ಮಿಕ ಮೌಢ್ಯ ಮತ್ತು ಸಾಮಾಜಿಕ ಮೌಢ್ಯ ಜನರ ಬದುಕನ್ನು ಹಾಳು ಮಾಡುತ್ತಿದೆ, ಹೀಗಾಗಿ ಕುವೆಂಪು ಸಾಹಿತ್ಯ ಅಧ್ಯಯನದಿಂದ ಜನರಲ್ಲಿ ವೈಚಾರಿಕ ಮನೋಭಾವ ವೃದ್ದಿಯಾಗಿ ಸರಳ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ನಿವೃತ್ತ ಡಿಡಿಪಿಐ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮೂಳೆಗಾಂವ ಅಭಿಪ್ರಾಯ ಪಟ್ಟರು.ಅವರು ಪಟ್ಟಣದ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಅಫಜಲಪುರ ಘಟಕದ ವತಿಯಿಂದ ಬರಗೂರು ರಾಮಚಂದ್ರಪ್ಪ ಸಂಪಾದಿತ ಕುವೆಂಪು ವಿಚಾರ ಕ್ರಾಂತಿ ಕೃತಿಯ ಕುರಿತು ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಮಾತನಾಡುತ್ತಾ, ಮೌಢ್ಯ ಮತ್ತು ಮೂಢ ನಂಬಿಕೆಗಳನ್ನು ನಮ್ಮ ಮೇಲೆ ಶತಮಾನಗಳಿಂದ ಹೇರಲಾಗುತ್ತಿದೆ, ಸತ್ಯ ಹೇಳಿದರೆ ನಂಬದ ಜನ, ಸುಳ್ಳನ್ನು ಬಹು ಬೇಗ ನಂಬಿ ಆಚರಣೆ ಮಾಡುತ್ತಾರೆ. ಇವುಗಳ ನಡುವೆ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಜನರಲ್ಲಿ ಬಿತ್ತುವುದು ಬಹಳ ಸವಾಲಿನ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಜನಪ್ರಿಯತೆ ಹೊಂದಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಸಿದ್ದಲಿಂಗ ರಾಠೋಡ್ ಹೇಳಿದರು.ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಶ್ವದ ಪ್ರಜೆಗಳಾಗಿ ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಯುವಜನತೆ ಎಚ್ಚೆತ್ತುಕೊಳ್ಳಿ ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಮಾತನಾಡಿ ಪ್ರತಿ ವರ್ಷವೂ ಸೆಪ್ಟೆಂಬರ್ 15 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅರ್ಥಪೂರ್ಣವಾದುದು, ಎಲ್ಲಾ ದಾನಗಳಲ್ಲಿ ಮತದಾನದ ಶ್ರೇಷ್ಠವಾದದ್ದು. ವಿದ್ಯಾರ್ಥಿಗಳು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಕಡ್ಡಾಯ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲು ಸಾಧ್ಯ ಎಂದರು.ಪ್ರಮುಖರಾದ ಕಾಲೇಜು…
ಮುಳುಗಡೆ ಸಂತ್ರಸ್ತರ ಬೇಡಿಕೆಯಂತೆ ಪ್ರತಿ ಎಕರೆ ನೀರಾವರಿ ಭೂಮಿಗೆ 55 ಲಕ್ಷ ರೂ, ಒಣ ಬೇಸಾಯ ಭೂಮಿ ಪ್ರತಿ ಎಕರೆಗೆ 45 ಲಕ್ಷ ರೂ. ಬೆಲೆ ನಿಗದಿಗೆ ಮಾಜಿ ಸಚಿವ ಬೆಳ್ಳುಬ್ಬಿ ಆಗ್ರಹ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಯುಕೆಪಿಯ ಪ್ರವಾಸಿ ಮಂದಿರದ ಮುಂದೆ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ವಿಜಯಪುರ-ಬಾಗಲಕೋಟ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆಯಾಗುವ ಸುಮಾರು 1 ಲಕ್ಷ 30 ಸಾವಿರ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ ಪ್ರತಿ ಎಕರೆ ನೀರಾವರಿ ಭೂಮಿಗೆ 55 ಲಕ್ಷ ರೂಪಾಯಿ, ಒಣ ಬೇಸಾಯಿಗೆ ಭೂಮಿ ಪ್ರತಿ ಎಕರೆಗೆ 45 ಲಕ್ಷ ರೂಪಾಯಿ ಬೆಲೆ ನಿಗಧಿ ಮಾಡಿ ಫರಿಹಾರ ನೀಡುವುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪ್ರತಿ ಗರ್ಭಿಣಿ ಸ್ತ್ರೀಯರಿಗೆ ಗರ್ಭಾವಸ್ಥೆಯಲ್ಲಿ ಇರುವಾಗ ಪೌಷ್ಟಿಕಾಂಶದ ಹಾಗೂ ಕಬ್ಬಿಣಾಂಶದ ಕೊರತೆ ಕಾಣಬಾರದು, ಕೊರತೆ ಆದಲ್ಲಿ ಗರ್ಭಿಣಿಯರಿಗೆ ಗರ್ಭವಸ್ಥೆಯಲ್ಲಿ ಹಾಗೂ ಪ್ರಸವದ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ತುಂಬಾ ಏರುಪೇರುಗಳಾಗಿ ತೊಂದರೆಯಾಗುತ್ತದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾಕ್ಟರ್ ಲಕ್ಷ್ಮಿ ತೆಲ್ಲೂರ ಹೇಳಿದರು.ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ತಾಲೂಕಿನ ಕೂಡಗಿ ಎನ್ ಟಿಪಿಸಿಯವರು ಕೊಟ್ಟಂತಹ ನ್ಯೂಟ್ರಿಷನ್ ಕಿಟ್ಸ್ ಗಳನ್ನು ಗರ್ಭಿಣಿ ಸ್ತ್ರೀಯರಿಗೆ ವಿತರಿಸಿ ಮಾತನಾಡಿದರು.ನ್ಯೂಟ್ರಿಷನ್ ಕಿಟ್ಸ್ ೨kg ಹೆಸರು ಬೆಳೆ, ೨kg ಮುಕಣಿ ಬೆಳೆ, ೨kg ಶೇಂಗಾ, ೨kg ಬೆಲ್ಲ, ೨ ಪ್ರೋಟೀನ್ ಪೌಡರ್, ೨ ಕಬ್ಬಿಣಾಂಶ ಸಿರಪಗಳನ್ನು ಹೊಂದಿದ್ದು, ಈ ನ್ಯೂಟ್ರಿಷನ್ ಕಿಟ್ಸ್ ಗಳನ್ನು ಗರ್ಭಿಣಿ ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾಗಿ ಬಳಸಿಕೊಳ್ಳಿ ಎಂದರು.ಸ್ತ್ರೀ ರೋಗ ತಜ್ಞ ಡಾ.ಅರುಣ್ ಗಾಣಿಗೇರ್, ಗರ್ಭಿಣಿಯರು ತಪ್ಪದೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಿದರು. ಆಶಾ ಕಾರ್ಯಕರ್ತರು ಪ್ರತಿ ಗರ್ಭಿಣಿಯರನ್ನು ತಾಯಿ ಮತ್ತು ಮಕ್ಕಳ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಸರಕಾರ ಅಂಬೇಡ್ಕರ ಅಭಿವೃದ್ಧಿ ನಿಗಮದಡಿ ವಿವಿಧ ಸಾಲ ಸೌಲಭ್ಯಗಳಿಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಮಹಾನಾಯಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಸರ್ಕಾರ ಭೂವಡೆತನ ಯೋಜನೆಯಡಿ ಜಮೀನು ಖರೀದಿಯು ನಾಲ್ಕೈದು ವರ್ಷಗಳಿಂದ ನೆಲಗುದಿಗೆ ಬಿದ್ದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಮೀನು ಖರೀದಿ ಮಾಡಲು ಫಲಾನುಭವಿಗಳು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆಯ್ಕೆ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ.ಈ ಹಿಂದೆ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.ಹಾಗೂ ಅಭಿವೃದ್ಧಿ ನಿಗಮದಡಿ ಸಿಗುತ್ತಿರುವ ಸೌಲಭ್ಯಗಳು ಜನ ಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕು. ತಾಲೂಕಿಗೆ ಎರಡರಿಂದ ಮೂರು ಫಲಾನುಭಿಗಳ ಆಯ್ಕೆ ಮಾಡಲಾಗುತ್ತಿದೆ. ಗಂಗಾ ಕಲ್ಯಾಣ ಕೊಳವೆ ಬಾವಿ ಸೇರಿ ವಿವಿಧ ಸೌಲಭ್ಯಗಳು ಹೆಚ್ಚಿಸಬೇಕು.ಸರಕಾರದ ಮಹತ್ವದ ಯೋಜನೆಯಾಗಿರುವ ನಿಗಮದ ಯೋಜನೆಗಳು ಅರ್ಹರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಗುವಂತಾಗಬೇಕು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನಿಟ್ಟಿನಲ್ಲಿ ಕಾಳಜಿವಹಿಸಿ ಸಮೂದಾಯದ ಜನರ ಆರ್ಥಿಕ ಮಟ್ಟ ಸುದಾರಿಸುವ ಕೆಲಸ ಮಾಡಬೇಕು ಎಂದರು.ಜಿಲ್ಲೆಯಲ್ಲಿ…
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಸಮಾಜದಲ್ಲಿ ಬಸವಾದಿ ಶರಣರ ಆಚಾರ-ವಿಚಾರಗಳು, ಧರ್ಮ ಉಳಿಯಬೇಕಾದರೆ ವೀರಶೈವ-ಲಿಂಗಾಯತ ಸಮಾಜ ಬಾಂಧವರು ಒಗ್ಗೂಡುವದು ತುಂಬಾ ಅಗತ್ಯವಿದೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿಷತ್ತಿನ ಸರ್ವಸದಸ್ಯರ ಮೂವತ್ತೊಂದನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಉಪೇಕ್ಷೆ ಮಾಡದೇ ಬದುಕು ಕಟ್ಟಿಕೊಳ್ಳವುದು ಅನಿವಾರ್ಯ. ಮಾನವೀಯತೆ ಎತ್ತಿಹಿಡಿಯುವದೇ ಧರ್ಮವಾಗಿದೆ. ವೀರಶೈವ-ಲಿಂಗಾಯತ ಧರ್ಮವು ಮಾನವೀಯತೆ ಎತ್ತಿ ಹಿಡಿದ ಧರ್ಮವಾಗಿದೆ.ಇದು ಜಾತ್ಯಾತೀತವಾಗಿ ನಡೆದ ಧರ್ಮವಾಗಿದೆ. ನಮ್ಮಂತಹವರು ರಾಜಕೀಯವಾಗಿ ಬೆಳೆ ಬೇಯಿಸಿಕೊಳ್ಳಲು ಧರ್ಮವನ್ನು ಬಳಸಿಕೊಳ್ಳುತ್ತಾರೆ. ಸಂತರು-ಶರಣರು ಸಮಾಜವನ್ನು ಎಂದಿಗೂ ಒಡೆಯದೇ ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ ಎಂದರು.ಬಸವಾದಿ ಶರಣರ ತತ್ವ ಸಂದೇಶಗಳನ್ನು ನಾಡಿನಲ್ಲಿ ಜನಮಾನಸಕ್ಕೆ ಮುಟ್ಟಿಸುವಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸುತ್ತಲೂ ಗಿಡ,ಮರಗಳಿಂದ ಕಂಗೊಳಿಸುವ ಕಾಡು, ನಳನಳಿಸುವ ಹಸಿರಿನಿಂದ ಕಣ್ಮನ ಸೆಳೆಯುವ ವನದ ಮಧ್ಯೆದಲ್ಲಿ ಹುಲಿ, ಸಿಂಹ. ಚಿರತೆ, ಕರಡಿ ಸಹಿತ ಹಲವು ವನ್ಯಜೀವಿಗಳ ದರ್ಶನ. ಇದು ಚಿಣ್ಣರ ವನದರ್ಶನದಲ್ಲಿ ಮಕ್ಕಳ ಸಂತಸದ ಕ್ಷಣಗಳಿಗೆ ಸಾಕ್ಷಿಯಾಗಿ ಮುದನೀಡಿತು.ಅರಣ್ಯ ಇಲಾಖೆ ಸಿಂದಗಿ ಪ್ರಾದೇಶಿಕ ವಲಯದ ಚಿಣ್ಣರ ವನದರ್ಶನ ಮೂಲಕ ಮಕ್ಕಳಲ್ಲಿ ಅರಣ್ಯ, ಗಿಡಮರಗಳು, ಮತ್ತು ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಅಂಗವಾಗಿ ಎರಡು ದಿನಗಳ ಕಾಲ ಅರಣ್ಯಾಧಿಕಾರಿ ಜಿ.ಬಿ.ರಾಮಗಿರಿಮಠ ನೇತೃತ್ವದಲ್ಲಿ ಕೈಗೊಂಡ ವನದರ್ಶನದ ಮೂಲಕ ಇಂಗಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮದ್ದೇಬಿಹಾಳ ಅರಣ್ಯ ಇಲಾಖೆಯ ಸಸಿ ಉತ್ಪಾದನಾ ಕೇಂದ್ರ, ಹೊಸಪೇಟೆ ಹತ್ತಿರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯ ಹಾಗೂ ಮೀಸಲು ಅರಣ್ಯ ಪ್ರದೇಶ ಹಾಗೂ ದರೋಜಿ ಕರಡಿಧಾಮಗಳನ್ನು ವೀಕ್ಷಿಸಿ ಸಂತಸಪಟ್ಟರು.ತಾಲ್ಲೂಕಿನ ಮುಳಸಾವಳಗಿ, ಭೈರವಾಡಗಿ, ದೇವರಹಿಪ್ಪರಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಈಗಾಗಲೇ ವನದರ್ಶನ ಮಾಡಿದ್ದು, ಈಗ ಈ ವರ್ಷ ಇಂಗಳಗಿ ಶಾಲೆಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರಾಷ್ಟಿçಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನನ್ನ ಮತ ನನ್ನ ಹಕ್ಕು ಜಾಗೃತಿ ಅಭಿಯಾನಕ್ಕೆ ರವಿವಾರ ನಗರದ ಗೋಳಗುಮ್ಮಟ ಆವರಣದಲ್ಲಿ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಕೆ.ಅನಂದ ಚಾಲನೆ ನೀಡಿದರು.ರಾಜ್ಯದ ರಾಜಧಾನಿಯಲ್ಲಿ ಸೆ.೧೫ರಂದು ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಜಾಪ್ರಭುತ್ವದ ಕುರಿತು ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳನ್ನು ಬೈಕ್ ಮೂಲಕ ಪಾಲ್ಗೊಳ್ಳಲಿದ್ದಾರೆ. ನಮ್ಮ ಜಿಲ್ಲೆಯಿಂದಲೂ ಬೈಕ್ ರ‍್ಯಾಲಿ ಮೂಲಕ ಯುವಕರು ಪ್ರತಿನಿಧಿಸುತ್ತಿದ್ದಾರೆ. ಭವ್ಯವಾದ ಪ್ರಜಾಪ್ರಭುತ್ವ ಪಡೆದ ನಾವುಗಳು ಅದರ ಪಾಲನೆಯನ್ನು ಮಾಡುವುದು ಬಹಳ ಅವಶ್ಯ ಇದೆ ಎಂದು ಹೇಳಿದರು.ಈ ಸಂದರ್ಬದಲ್ಲಿ ಬೈಕ್ ರ‍್ಯಾಲಿ ಸುರಕ್ಷಿತವಾಗಿ ತಲುಪುವಂತೆ ಶುಭ ಕೋರಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷಣ ನಿಂಬರಗಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲಿಕ ಮಾನವರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ್ ಪೂಜಾರಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಕೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಿ, ಸಮಾಜ ಕಲ್ಯಾಣ ಇಲಾಖೆಯ…
ಇಂದು (ಸೆಪ್ಟಂಬರ್ ೧೬, ಮಂಗಳವಾರ) “ವಿಶ್ವ ಓಝೋನ್ ದಿನ”ದ ನಿಮಿತ್ಯ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು, “ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಒದಗಿಸುತ್ತದೆ. ಆದರೆ ಪ್ರತಿಯೊಬ್ಬ ಮನುಷ್ಯನ ದುರಾಶೆಗಳಿಗಲ್ಲ” ಎಂದು ಹೇಳಿದ್ದಾರೆ. ವಿಜ್ಞಾನ-ತಂತ್ರಜ್ಞಾನ ಮತ್ತು ಆಧುನಿಕತೆ ಹೆಸರಿನಲ್ಲಿ ಮಾನವ, ಪಶು, ಪಕ್ಷಿ, ಜೀವಜಂತು, ಸಸ್ಯರಾಶಿಗಳಿಗೆ ಆಶ್ರಯ ತಾಣವಾಗಿರುವ ಪೃಥ್ವಿ, ಪರಿಸರ ಮತ್ತು ರಕ್ಷಾ ಕವಚವಾಗಿರುವ ಓಝೋನ್ ನಾಶ ಮಾಡುತ್ತಿದ್ದಾನೆ. ಸೂರ್ಯನಿಂದ ಹೊರಸೂಸುವ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಪೃಥ್ವಿಯ ಮೇಲಿನ ಸಕಲ ಜೀವರಾಶಿಗಳನ್ನು ರಕ್ಷಣೆ ಮಾಡುವಲ್ಲಿ ಓಝೋನ್ ಪದರವು ಪ್ರಮುಖ ಪಾತ್ರ ವಹಿಸುತ್ತಿದೆ. ಅದರೆ ಖಾಸಗೀಕರಣ. ಜಾಗತೀಕರಣ ಮತ್ತು ಉದಾರೀಕರಣಗಳಿಂದ ತಲೆ ಎತ್ತುತ್ತಿರುವ ನಗರೀಕರಣ, ಕೈಗಾರಿಕೆ, ಅವಿಷ್ಕಾರ, ಸಂಶೋಧನೆ, ಅಣ್ವಸ್ತ್ರ ಪ್ರಯೋಗ, ಐಷಾರಾಮಿ ವಸ್ತುಗಳ ಉಪಯೋಗ, ಮಿತಿ ಮೀರಿದ ವಾಹನಗಳ ಬಳಕೆಯಿಂದ ಓಝೋನ್ ಪದರದಲ್ಲಿ ರಂಧ್ರಗಳುಂಟಾಗಿ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿ.ಇಂದು ಆಧುನಿಕತೆಗೆ ಮಾರು ಹೋಗುತ್ತಿರುವ ಮಾನವ…
