ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಸರಕಾರ ಅಂಬೇಡ್ಕರ ಅಭಿವೃದ್ಧಿ ನಿಗಮದಡಿ ವಿವಿಧ ಸಾಲ ಸೌಲಭ್ಯಗಳಿಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಮಹಾನಾಯಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು,
ಸರ್ಕಾರ ಭೂವಡೆತನ ಯೋಜನೆಯಡಿ ಜಮೀನು ಖರೀದಿಯು ನಾಲ್ಕೈದು ವರ್ಷಗಳಿಂದ ನೆಲಗುದಿಗೆ ಬಿದ್ದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಮೀನು ಖರೀದಿ ಮಾಡಲು ಫಲಾನುಭವಿಗಳು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆಯ್ಕೆ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ.
ಈ ಹಿಂದೆ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
ಹಾಗೂ ಅಭಿವೃದ್ಧಿ ನಿಗಮದಡಿ ಸಿಗುತ್ತಿರುವ ಸೌಲಭ್ಯಗಳು ಜನ ಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕು. ತಾಲೂಕಿಗೆ ಎರಡರಿಂದ ಮೂರು ಫಲಾನುಭಿಗಳ ಆಯ್ಕೆ ಮಾಡಲಾಗುತ್ತಿದೆ. ಗಂಗಾ ಕಲ್ಯಾಣ ಕೊಳವೆ ಬಾವಿ ಸೇರಿ ವಿವಿಧ ಸೌಲಭ್ಯಗಳು ಹೆಚ್ಚಿಸಬೇಕು.
ಸರಕಾರದ ಮಹತ್ವದ ಯೋಜನೆಯಾಗಿರುವ ನಿಗಮದ ಯೋಜನೆಗಳು ಅರ್ಹರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಗುವಂತಾಗಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನಿಟ್ಟಿನಲ್ಲಿ ಕಾಳಜಿವಹಿಸಿ ಸಮೂದಾಯದ ಜನರ ಆರ್ಥಿಕ ಮಟ್ಟ ಸುದಾರಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಪಜಾ ಜನಾಂಗದವರು ಹಚ್ಚಾಗಿರುವುದರಿಂದ ತಾಲೂಕಿಗೆ ಎರಡ್ಮೂರು ಜನರಿಗೆ ಆಯ್ಕೆ ಮಾಡಲಾಗುತ್ತದೆ. ನೀರಾವರಿ ಕ್ಷೇತ್ರ ಹೆಚ್ಚಳಕೆ, ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು ನೀಡುವ ಕೆಲಸ ಕೂಡಲೇ ಸರಕಾರ ಮಾಡಬೇಕು ಇಲ್ಲದಿದ್ದರೆ ಸಂಘಟನೆಯ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ
ಮುಖಂಡರಾದ ಚಿದಾನಂದ ಬಸರಿಗಿಡ, ಚಂದ್ರಕಾಂತ ಬಡದಾಳ, ಅಜೇಯ ಕುಮಾರ್ ಬಿಲಗುಂದಿ ಇದ್ದರು.

