ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪ್ರತಿ ಗರ್ಭಿಣಿ ಸ್ತ್ರೀಯರಿಗೆ ಗರ್ಭಾವಸ್ಥೆಯಲ್ಲಿ ಇರುವಾಗ ಪೌಷ್ಟಿಕಾಂಶದ ಹಾಗೂ ಕಬ್ಬಿಣಾಂಶದ ಕೊರತೆ ಕಾಣಬಾರದು, ಕೊರತೆ ಆದಲ್ಲಿ ಗರ್ಭಿಣಿಯರಿಗೆ ಗರ್ಭವಸ್ಥೆಯಲ್ಲಿ ಹಾಗೂ ಪ್ರಸವದ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ತುಂಬಾ ಏರುಪೇರುಗಳಾಗಿ ತೊಂದರೆಯಾಗುತ್ತದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾಕ್ಟರ್ ಲಕ್ಷ್ಮಿ ತೆಲ್ಲೂರ ಹೇಳಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ತಾಲೂಕಿನ ಕೂಡಗಿ ಎನ್ ಟಿಪಿಸಿಯವರು ಕೊಟ್ಟಂತಹ ನ್ಯೂಟ್ರಿಷನ್ ಕಿಟ್ಸ್ ಗಳನ್ನು ಗರ್ಭಿಣಿ ಸ್ತ್ರೀಯರಿಗೆ ವಿತರಿಸಿ ಮಾತನಾಡಿದರು.
ನ್ಯೂಟ್ರಿಷನ್ ಕಿಟ್ಸ್ ೨kg ಹೆಸರು ಬೆಳೆ, ೨kg ಮುಕಣಿ ಬೆಳೆ, ೨kg ಶೇಂಗಾ, ೨kg ಬೆಲ್ಲ, ೨ ಪ್ರೋಟೀನ್ ಪೌಡರ್, ೨ ಕಬ್ಬಿಣಾಂಶ ಸಿರಪಗಳನ್ನು ಹೊಂದಿದ್ದು, ಈ ನ್ಯೂಟ್ರಿಷನ್ ಕಿಟ್ಸ್ ಗಳನ್ನು ಗರ್ಭಿಣಿ ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾಗಿ ಬಳಸಿಕೊಳ್ಳಿ ಎಂದರು.
ಸ್ತ್ರೀ ರೋಗ ತಜ್ಞ ಡಾ.ಅರುಣ್ ಗಾಣಿಗೇರ್, ಗರ್ಭಿಣಿಯರು ತಪ್ಪದೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಿದರು. ಆಶಾ ಕಾರ್ಯಕರ್ತರು ಪ್ರತಿ ಗರ್ಭಿಣಿಯರನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬರಲು ಸೂಚಿಸಿದರು.
ಹೀಗೆ ಮಾಡುವುದರಿಂದ ಪ್ರತಿ ಮಗುವಿನ ಹಾಗೂ ತಾಯಿಯ ಮರಣವನ್ನು ನಾವು ಈ ಮೂಲಕ ತಡೆಯಬಹುದು.
ಚಿಕ್ಕ ಮಕ್ಕಳ ತಜ್ಞ ಡಾ. ಫೈಸಲ್ ಪಾರೊಕಿ ಇವರು ಗರ್ಭಾವಸ್ಥೆಯಲ್ಲಿ ಕಬ್ಬಿನಾಂಶ ಕೊರತೆಯನ್ನು ನೀಗಿಸಲು ಪ್ರತಿ ಗರ್ಭಿಣಿಯರು ಹಸಿ ತರಕಾರಿ, ದಾಳಿಂಬೆ ಹಣ್ಣು, ಬೀಟ್ರೂಟ, ಡ್ರೈಫ್ರೂಟ್ಸ್, ಕೆಂಪು ಮಾಂಸ ಹಾಗೂ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡಲು ಸೂಚಿಸಿದರು.
ಪ್ರತಿ ತಿಂಗಳು ಆರೋಗ್ಯ ಕೇಂದ್ರದಲ್ಲಿ ಕೊಡುವಂತಹ ಕಬ್ಬಿಣ ಮಾತ್ರೆ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಸುಮಿತ್ರ ಬಿಂಗಿ, ಸವಿತಾ ದೊಡ್ಮನಿ, ಶುಶ್ರೂಷಕಾಧಿಕಾರಿಗಳಾದ ರೂಪಾ ಚೂರಿ, ಪೂಜಾ ಮರಾಠೆ, ಇಬ್ರಾಹಿಂ ನದಾಫ್, ರಾಜೇಶ್ ಅಪ್ಪಣ್ಣವರ್, ಸಲೀಂ, ರೇಣುಕಾ, ಪ್ರಯೋಗಾಲಯ ತಜ್ಞರಾದ ರಾಜೇಶ್ ಹೊಟ್ಕರ್ ಉಪಸ್ಥಿತರಿದ್ದರು.
ಕೋಲ್ಹಾರ, ಯುಕೆಪಿ, ಮಟ್ಟಿಹಾಳ, ನಾಗರ್ದಿನ್ನಿ, ಹನುಮಾಪುರ್ ಹಾಗೂ ಬಳುತಿ ಗ್ರಾಮದ ಎಲ್ಲಾ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

