ಇಂದು (ಸೆಪ್ಟಂಬರ್ ೧೬, ಮಂಗಳವಾರ) “ವಿಶ್ವ ಓಝೋನ್ ದಿನ”ದ ನಿಮಿತ್ಯ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು, “ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಒದಗಿಸುತ್ತದೆ. ಆದರೆ ಪ್ರತಿಯೊಬ್ಬ ಮನುಷ್ಯನ ದುರಾಶೆಗಳಿಗಲ್ಲ” ಎಂದು ಹೇಳಿದ್ದಾರೆ. ವಿಜ್ಞಾನ-ತಂತ್ರಜ್ಞಾನ ಮತ್ತು ಆಧುನಿಕತೆ ಹೆಸರಿನಲ್ಲಿ ಮಾನವ, ಪಶು, ಪಕ್ಷಿ, ಜೀವಜಂತು, ಸಸ್ಯರಾಶಿಗಳಿಗೆ ಆಶ್ರಯ ತಾಣವಾಗಿರುವ ಪೃಥ್ವಿ, ಪರಿಸರ ಮತ್ತು ರಕ್ಷಾ ಕವಚವಾಗಿರುವ ಓಝೋನ್ ನಾಶ ಮಾಡುತ್ತಿದ್ದಾನೆ. ಸೂರ್ಯನಿಂದ ಹೊರಸೂಸುವ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಪೃಥ್ವಿಯ ಮೇಲಿನ ಸಕಲ ಜೀವರಾಶಿಗಳನ್ನು ರಕ್ಷಣೆ ಮಾಡುವಲ್ಲಿ ಓಝೋನ್ ಪದರವು ಪ್ರಮುಖ ಪಾತ್ರ ವಹಿಸುತ್ತಿದೆ. ಅದರೆ ಖಾಸಗೀಕರಣ. ಜಾಗತೀಕರಣ ಮತ್ತು ಉದಾರೀಕರಣಗಳಿಂದ ತಲೆ ಎತ್ತುತ್ತಿರುವ ನಗರೀಕರಣ, ಕೈಗಾರಿಕೆ, ಅವಿಷ್ಕಾರ, ಸಂಶೋಧನೆ, ಅಣ್ವಸ್ತ್ರ ಪ್ರಯೋಗ, ಐಷಾರಾಮಿ ವಸ್ತುಗಳ ಉಪಯೋಗ, ಮಿತಿ ಮೀರಿದ ವಾಹನಗಳ ಬಳಕೆಯಿಂದ ಓಝೋನ್ ಪದರದಲ್ಲಿ ರಂಧ್ರಗಳುಂಟಾಗಿ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿ.
ಇಂದು ಆಧುನಿಕತೆಗೆ ಮಾರು ಹೋಗುತ್ತಿರುವ ಮಾನವ ಕಂಪ್ಯುಟರ್, ಏರ್‌ಕಂಡಿಷನ್, ಏರ್‌ಕೂಲರ್, ಓವ್ಹನ್, ಫ್ರೀಜ್, ಸ್ವಚ್ಛಗೊಳಿಸಬಲ್ಲ ಸಾಧನಗಳಿಂದ ಉತ್ಪತ್ತಿಯಾಗುವ ಕ್ಲೋರೋಫಾರಂ ಕಾರ್ಬನ್‌ದಿಂದ ಮತ್ತು ಕೈಗಾರಕೆಗಳಿಂದ ಹೊರ ಸೂಸುವ ಕಾರ್ಬನ್ ಮೋನಾಕ್ಸೆöÊಡ್‌ನಂತಹ ವಿಷಾನೀಲದಿಂದ ಜೀವ ರಕ್ಷಕ ಓಝೋನ್ ಪದರವು ತೆಳುವಾಗುತ್ತಿದೆ. ಇದರಿಂದ ಸೂರ್ಯನಲ್ಲಿರುವ ಅತಿ ನೇರಳೆ ಕಿರಣಗಳು ನೇರವಾಗಿ ಭೂಮಿಗೆ ತಲುಪಿ, ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗುವಂತಹ ರೋಗ-ರುಜಿನಗಳು ಉತ್ಪತ್ರಿಯಾಗುತ್ತವೆ. ಅಷ್ಟೇ ಅಲ್ಲದೆ ಸೂರ್ಯನ ತೀವ್ರ ಶಾಖ ಬಿಡುಗಡೆಗೊಂಡು ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿದೆ. ಪ್ರಕೃತಿಯ ಕೊಡುಗೆಯಾದ ಓಝೋನ್ ಸಂರಕ್ಷಣೆಗಾಗಿ ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸಪ್ಟಂಬರ ೧೬ ರಂದು ವಿಶ್ವ ಓಝೋನ್ ದಿನವನ್ನು ಆವರಿಸಲಾಗುತ್ತಿದೆ.

ಓಝೋನ್ ದಿನದ ಆಚರಣೆಯ ಹಿನ್ನೆಲೆ
ಜಗತ್ತಿನಲ್ಲಿ ಪ್ರಪ್ರಥಮವಾಗಿ ಸಪ್ಟಂಬರ ೧೬, ೧೯೮೭ ರಂದು ಕೆನಡಾದ ಮಾಂಟ್ರಿಯಾಲ್‌ನಲ್ಲಿ ಜರುಗಿದ ಒಪ್ಪಂದದಲ್ಲಿ ವಿಶ್ವಸಂಸ್ಥೆ ಮತ್ತು ಸುಮಾರು ೪೫ ದೇಶಗಳು ಓಝೋನ್ ಪದರ ನಾಶಪಡಿಸುವ ವಸ್ತುಗಳ ಬಳಕೆಯ ಮೇಲೆ ನಿರ್ಬಂಧ ಹಾಕುವದಕ್ಕೆ ಸಹಿ ಹಾಕಿದವು. ಮುಂದೆ ಡಿಸೆಂಬರ ೧೯, ೧೯೯೪ ರಂದು ವಿಶ್ವಸಂಸ್ಥೆಯು ತನ್ನ ಸಾಮಾನ್ಯ ಸಭೆಯಲ್ಲಿ ‘ಸಪ್ಟಂಬರ ೧೬’ ಅನ್ನು ಓಝೋನ್ ಪದರ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ದಿನವೆಂದು ಘೋಷಿಸಿತು. ಕೆನಡಾದ ಮಾಂಟ್ರಿಯಾಲ್ ನಗರದಲ್ಲಿ ಜರುಗಿದ ಕೆಲವು ದೇಶಗಳ ಮಧ್ಯೆ ಒಪ್ಪಂದವೊಂದು ನಡೆದಿತ್ತು. ಈ ಐತಿಹಾಸಿಕ ದಿನದ ಸವಿನೆನಪಿಗಾಗಿ ವಿಶ್ವಸಂಸ್ಥೆಯು ೧೯೯೪ ರಿಂದಲೂ ಈ ದಿನವನ್ನು ಆಚರಿಸಲು ತೀರ್ಮಾನಿಸಿತು. ಕ್ಷೀಣಿಸುತ್ತಿರುವ ಪೃಥ್ವಿ, ಪರಿಸರ ಮತ್ತು ಓಝೋನ್ ಪದರ ರಕ್ಷಣೆ ಮತ್ತು ಜನ ಸಾಮಾನ್ಯರು ಏನು ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ಓಝೋನ್ ಪದರ ಉಳಿಸಿ ಆಭಿಯಾನ ಒಂದು ಭಾಗವಾಗಿ ಪ್ರತಿವರ್ಷ ಸಪ್ಟಂಬರ್ ೧೬ ರಂದು ವಿಶ್ವ ಓಝೋನ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಆಚರಣೆಯ ಮಹತ್ವ
ಮನುಷ್ಯನ ಆಸೆ-ದುರಾಶೆಗಳಿಗೆ ಕೊನೆಯೆಂಬುದಿಲ್ಲ ಎಂದು ಸಾಬೀತಾಗುತ್ತಲೇ ಇದೆ. ಮನುಷ್ಯನ ನಿಸರ್ಗ ವಿರೋಧಿ ಪ್ರಕ್ರಿಯೆಗಳಿಂದ ಓಝೋನ್ ಪದರವು ಕ್ಷೀಣಿಸುತ್ತಿರುವದರಿಂದ ಇಡೀ ಭೂಮಂಡಲದ ಮೇಲಿರುವ ಎಲ್ಲ ಜೀವ ಸಂಕುಲಗಳು ನಾಶವಾಗಿ ಪರಿಸರ ಸಮತೋಲನ ತಪ್ಪಬಹುದು. ಆದ್ದರಿಂದ ಪರಿಸರ ಮತ್ತು ಓಝೋನ್‌ಗೆ ಮಾರಕವಾಗಬಲ್ಲ ಅನಿಲಗಳನ್ನು ಹೊರ ಸೂಸುವ ಯಂತ್ರೋಪಕರಣಗಳ ಬಳಕೆಯನ್ನು ಕಡಿಮೆಗೊಳಿಸಿ, ಈ ಭೂಮಂಡಲ ಮತ್ತು ಪ್ರಕೃತಿಯ ಕೊಡುಗೆಗಳನ್ನು ನಮ್ಮ ನಂತರದ ಪೀಳಿಗೆಗೆ ಉಳಿಸಿಕೊಡಬೇಕಾದ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ಮತ್ತು ಆಧುನಿಕತೆಗಳ ನಡುವಣ ಅವಶ್ಯಕ ಹೊಂದಾಣಿಕೆ ಮಾಡುವತ್ತ ಕಾರ್ಯೋನ್ಮುಖರಾಗಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಮತ್ತು ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಒಂದೊಂದು ಗಿಡ ಬೆಳೆಸಿ, ನಾಡನ್ನು ಉಳಿಸಿ ಬೆಳೆಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ.
೨೦೨೫ ನೇಯ ವರ್ಷದ ಘೋಷವಾಕ್ಯ

ಜಾಗತಿಕ ಮಟ್ಟದಲ್ಲಿ ಒಪ್ಪಂದಗಳನ್ನು ಆಯೋಜಿಸಿ, ವಿಜ್ಞಾನ ಮತ್ತು ಪರಿಸರದ ಮಧ್ಯೆ ಸಮತೋಲನ ಕಾಯ್ದುಕೊಳ್ಳುತ್ತಾ, ಪರಿಸರ ಸಂರಕ್ಷಣೆಗಾಗಿ ವಿಶ್ವದೆಲ್ಲೆಡೆ ಮಾಂಟ್ರಿಯಲ್ ಪ್ರೋಟೋಕಾಲ್ ನಂತಹ ಒಪ್ಪಂದಗಳನ್ನು ಆಯೋಜಿಸುವಲ್ಲಿ ಮತ್ತು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ೨೦೨೫ ನೇಯ ವರ್ಷದ ಘೋಷವಾಕ್ಯ “ವಿಜ್ಞಾನದಿಂದ ಜಾಗತಿಕ ಕ್ರಾರ್ಯ ಯೋಜನೆಯತ್ತ” (ಈಡಿom Sಛಿieಟಿಛಿe ಣo ಉಟobಚಿಟ ಂಛಿಣioಟಿ) ಎಂಬ ಸಂದೇಶದೊಂದಿಗೆ ಎಲ್ಲ ರಾಷ್ಟçಗಳ ಪಾಲುಗಾರಿಕೆ ಮತ್ತು ಸಹಭಾಗಿತ್ವದಡಿಯಲ್ಲಿ ಅನೇಕ ಕ್ರೀಯಾಯೋಜನೆಗಳನ್ನು ರೂಪಿಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಓಝೋನ್ ರಕ್ಷಣೆಗಾಗಿ ಕೈ ಜೋಡಿಸಬೇಕೆಂಬುದೇ ಪ್ರಮುಖ ಧ್ಯೇಯೋದ್ಧೇಶವಾಗಿದೆ.
ಕೊನೆಯ ನುಡಿ ಪರಿಸರವಿದ್ದರೆ ನಾವು ಎಂಬ ಕಟು ಸತ್ಯವನ್ನು ಅರಿತು ಗಿಡ-ಮರಗಳನ್ನು ನೆಟ್ಟು “ಹಸಿರೇ ನಮ್ಮ ಉಸಿರು” ಎಂಬ ಪರಿಸರ ಪ್ರಜ್ಞೆಯೊಂದಿಗೆ ಪ್ರತಿ ಶಾಲೆ-ಕಾಲೇಜು, ಸರ್ಕಾರಿ-ಸರ್ಕಾರೇತರ, ಸಂಘ ಸಂಸ್ಥೆಗಳು, ಎನ್.ಎಸ್.ಎಸ್, ಇಕೋ ಕ್ಲಬ್‌ಗಳ ಮೂಲಕ ವಿಶ್ವ ಓಝೋನ್ ದಿನವನ್ನು ಆಚರಿಸಬೇಕು. ಓಝೋನ್ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ವೃಕ್ಷಥಾನ, ಮ್ಯಾರಾಥಾನಂತಹ ಅಭಿಯಾನಗಳು, ವಿಚಾರ ಸಂಕೀರಣ, ಕಾರ್ಯಾಗಾರ ಮತ್ತು ಸಭೆ-ಸಮಾರಂಭಗಳನ್ನು ಆಯೋಜಿಸಿ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಪರಿಸರಾತ್ಮಕ ಪ್ರಜ್ಞೆ ಮೂಡಿಸುವಂತಾಗಬೇಕು. ಪರಿಸರತಜ್ಞ ಕ್ರೀಸ್ಟೀನ್ ಲಗಾರ್ಡೆ ರವರ ಪ್ರಕಾರ “Iಣ’s ಚಿ ಛಿoಟಟeಛಿಣive eಟಿಜeಚಿvouಡಿ, iಣ’s ಛಿoಟಟeಛಿಣive ಚಿಛಿಛಿouಟಿಣಚಿbiಟiಣಥಿ ಚಿಟಿಜ iಣ mಚಿಥಿ ಟಿoಣ be ಣoo ಟಚಿಣe” ಎನ್ನುವಂತೆ, ಹೀಗೆಯೇ ಪರಿಸ್ಥಿತಿ ಕೈ ಮೀರಿ ಹೋಗುವ ಮುನ್ನವೇ ನಾವೆಲ್ಲರೂ ಎಚ್ಚೆತ್ತುಕೊಂಡು ಪೃಥ್ವಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಮತ್ತು ಹವಾಮಾನದಲ್ಲಾಗುತ್ತಿರುವ ಬದಲಾವಣೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರಾತ್ಮಕ ಕಠಿಣ ನಿರ್ಧಾರಗಳು ಹೊರ ಬಂದಾಗ ಮಾತ್ರ ಪೃಥ್ವಿ, ಪರಿಸರ ಮತ್ತು ಓಝೋನ್ ನಂತಹ ಪ್ರಕೃತಿಯ ಕೊಡುಗೆಗಳು ನಮ್ಮ ಮುಂದಿನ ಜನಾಂಗಕ್ಕೆ ಉಳಿಯಲು ಸಾಧ್ಯ ಎಂಬುದು ನನ್ನ ಅಂಬೋಣ.
