Author: editor.udayarashmi@gmail.com

ಯುಕೆಪಿ 3ನೇ ಹಂತ ಯೋಜನೆ | ನೀರಾವರಿ ಭೂಮಿಗೆ ರೂ.40 ಲಕ್ಷ ಪರಿಹಾರ ನೀಡಲು ಸಚಿವ ಸಂಪುಟ ನಿರ್ಧಾರ ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ(ಯುಕೆಪಿ) ಮೂರನೇ ಹಂತದ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಮಂಗಳವಾರ ಪರಿಹಾರ ನಿಗದಿ ಮಾಡಿದ್ದು, ನೀರಾವರಿ ಭೂಮಿಗೆ ಎಕರೆಗೆ 40 ಲಕ್ಷ ರೂ. ಮತ್ತು ಒಣ ಭೂಮಿಗೆ ಎಕರೆಗೆ 30 ಲಕ್ಷ ರೂ. ಪರಿಹಾರವನ್ನು ನೀಡಲು ನಿರ್ಧರಿಸಿದೆ.ಈ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಯುಕೆಪಿ ಮೂರನೇ ಹಂತವು ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ರಿಂದ 524 ಮೀಟರ್‌ಗೆ ಹೆಚ್ಚಿಸುವುದನ್ನು ಒಳಗೊಂಡಿರುತ್ತದೆ. ಇದು ಶೇಖರಣಾ ಸಾಮರ್ಥ್ಯವನ್ನು 100 ಟಿಎಂಸಿ ಅಡಿ ಹೆಚ್ಚಿಸುತ್ತದೆ. ಇದಕ್ಕೆ 1.33 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ. ಇದರಲ್ಲಿ ಮುಳುಗಡೆಯಾಗುವ 75,563 ಎಕರೆ ಭೂಮಿ ಸಹ ಸೇರಿದೆ. ಈ ಪ್ರದೇಶದ ರೈತರು, ಸಚಿವರು ಮತ್ತು ಶಾಸಕರು ನೀರಾವರಿ ಭೂಮಿಗೆ ಎಕರೆಗೆ ಕನಿಷ್ಠ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿನ ಮನಗೂಳಿ ರಸ್ತೆಯ ಇಬ್ರಾಹಿಂಪುರ ಹಿರೇಮಠದಲ್ಲಿ ಇದೇ ದಿ. 19 ರಂದು ಲಿಂ. ಶ್ರೀ. ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ 114ನೇ ಪುಣ್ಯಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪುಣ್ಯಾರಾಧನೆಯ ಅಂಗವಾಗಿ ಅಂದು ಕುಂಭಮೇಳ, ಶ್ರೀಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಪುಣ್ಯಾರಾಧನೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕೆಂದು ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ವಂಶಸ್ಥರಾದ ವಿರುಪಾಕ್ಷಯ್ಯ ಹಿರೇಮಠ, ಪ್ರಭು ಹಿರೇಮಠ, ಉಮೇಶ ಹಿರೇಮಠ, ಮಹೇಶ ಹಿರೇಮಠ, ಶಿವಲಿಂಗಯ್ಯ ಹಿರೇಮಠ ಅವರು ಕೋರಿದ್ದಾರೆ.ಪುಣ್ಯಾರಾಧನೆಯ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವೂ ಇಬ್ರಾಹಿಂಪುರ ಹಿರೇಮಠದಲ್ಲಿ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ದಿ. 14 ರಿಂದ ಪುರಾಣ ಪ್ರಾರಂಭವಾಗಿದ್ದು, ದಿ.18 ರಂದು ಮಂಗಲಗೊಳ್ಳುವುದು. ಬೆಳಗಾವಿ ಜಿಲ್ಲೆಯ ಮಾಂಜರಿ, ತುಂಗಳ, ಕೊಕಟನೂರ ಕಾಡಸಿದ್ಧೇಶ್ವರ ಮಠದ ಶ್ರೀ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯರು ಪುರಾಣವನ್ನು ನಡೆಸಿಕೊಡುತ್ತಿದ್ದಾರೆ. ಪ್ರತಿದಿನ ಸಂಜೆ 6.30 ರಿಂದ 8 ಗಂಟೆಯವರೆಗೆ ಪುರಾಣ ನಡೆಯುತ್ತಿದ್ದು, ಪುರಾಣ ಕೇಳಲು ಬಹುಸಂಖ್ಯೆಯಲ್ಲಿ ಭಕ್ತರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ(ರಿ) ನಾಗರಾಭಾವಿ ಬೆಂಗಳೂರು, ಇದರ ವಿಜಯಪುರ ಜಿಲ್ಲಾ ಶಾಖೆ ಅಡಿಯಲ್ಲಿ ಸದಸ್ಯತ್ಪ ಅಭಿಯಾನ ಹಾಗೂ ತಿಕೋಟಾ ತಾಲೂಕಿನ ನೂತನ ಅಧ್ಯಕ್ಷರಾಗಿ ಹಣುಮಂತ ಸಿದ್ದಪ್ಪ ಸೂರ್ಯವಂಶಿ ಹಾಗೂ ಉಪಾಧ್ಯಕ್ಷರಾಗಿ ಅನೀಲ ಬಸವರಾಜ ಕಾಂಬಳೆ, ಭಾರತ ಏಕನಾಥ ಜಾಧವ, ಯಲ್ಲಪ್ಪ ದಾಬಡೆ ಆಯ್ಕೆಯಾಗಿದ್ದಾರೆ.ಸೋಮವಾರ ತಿಕೋಟಾ ಸಮುದಾಯದ ಭವನದಲ್ಲಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸಮೂರ್ತಿ ಶಾಪೂರ ನೇತೃತ್ವದಲ್ಲಿ ನಡೆದ ಸದಸ್ಯತ್ವ ಅಭಿಯಾನ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಯಲ್ಲಪ್ಪ ಸೋಮಣ್ಣ ಹೋನಕಟ್ಟಿ. ಪ್ರಧಾನ ಕಾರ್ಯದರ್ಶಿಯಾಗಿ ನಾತಾಜಿ ಸಕಾರಾಮ ಹೋನಕಟ್ಟಿ, ಸಿದ್ದು ಸೂರ್ಯವಂಶಿ, ಖಜಾಂಚಿಯಾಗಿ ಲಕ್ಕಪ್ಪಾ ಹೊಸಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಾರುತಿ ಸಮಗಾರ, ಮೋಹನ ತಾಜವ, ಯಶವಂತ ಸಮಗಾರ, ಸದಸ್ಯರಾಗಿ ಶೋಭಾ ಚವ್ಹಾಣ, ಗಣಪತಿ ಶಿಂಧೆ, ಅಮಗೊಂಡ ಹೋನಕಟ್ಟಿ, ಮೋಹನ ಮಾನೆ, ವಿಠ್ಠಲ ಸಂಕಪಾಳ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಶ್ರೀನಿವಾಸಮೂರ್ತಿ ಶಹಾಪುರ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲೆಯ ಮತ್ತು ತಿಕೋಟಾ ತಾಲೂಕಿನ ಹರಳಯ್ಯ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮೊತ್ತ ಮೊದಲನೆಯದಾಗಿ ನಾವು ಸಂಸ್ಕಾರ ಎಂಬ ಪದದ ಅರ್ಥವನ್ನು ತಿಳಿಯೋಣ. ಸಂಸ್ಕಾರ ಎಂದರೆ ಸಂಸ್ಕೃತಿ ಸಂಸ್ಕಾರ ಎಂದರೆ ಮೌಲ್ಯಗಳು ಸಂಸ್ಕಾರ ಎಂದರೆ ನಮ್ಮ ನಡೆ ನುಡಿಗಳು ಮತ್ತು ಸಂಸ್ಕಾರ ಎಂದರೆ ಬೆಳವಣಿಗೆ. ಸಂಸ್ಕಾರವು ವ್ಯಕ್ತಿಯಲ್ಲಿ ನೈತಿಕ ಮತ್ತು ಮೌಲಿಕ ವಿಷಯಗಳನ್ನು ಸನಾತನ ಸಂಪ್ರದಾಯದ ಉತ್ತಮ ಮತ್ತು ಮೌಲಿಕ ವಿಷ ವಿಷಯಗಳನ್ನು ತಲೆಮಾರುಗಳಿಂದ ನಡೆದುಕೊಂಡು ಬಂದ ಉನ್ನತ ವಿಷಯಗಳನ್ನು ನಮ್ಮ ಮುಂದಿನ ತಲೆಮಾರಿಗೆ ಸಾಗಿಸುವ ಒಂದು ಮಹೋನ್ನತ ಜವಾಬ್ದಾರಿ. ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಸುವ ಮೂಲಕ ಓರ್ವ ಜವಾಬ್ದಾರಿ ಪ್ರಜ್ಞೆಯುಳ್ಳ ನಾಗರಿಕನನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ನೀಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ… ಅದರಲ್ಲೂ ಈ ಜವಾಬ್ದಾರಿಯ ಸಿಂಹ ಪಾಲು ಇರುವುದು ಹೆಣ್ಣು ಮಕ್ಕಳ ಮೇಲೆ.ಸಂಸ್ಕಾರದ ಮೂಲ ತತ್ವಗಳುಮೊದಲನೆಯದಾಗಿ ಮೌಲ್ಯಗಳು, ಪ್ರಾಮಾಣಿಕತೆ, ಗೌರವ, ಶಿಸ್ತು ಮತ್ತು ಸಹಾನುಭೂತಿಯಂತಹ ಮೌಲ್ಯಗಳು ನಮಗೆ ನೈತಿಕತೆಯನ್ನು ನೀಡುತ್ತವೆ. ಮನುಷ್ಯನ ಯೋಚನೆ ಮತ್ತು ಆತನ ಕ್ರಿಯೆಗೆ ಇವುಗಳೇ…

Read More

ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಶಾಸಕ ವಿಠ್ಠಲ ಕಟಕಧೋಂಡ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂವಿಧಾನದ ಮುಂದೆ ದೇಶದ ಎಲ್ಲ ಪ್ರಜೆಗಳು ಸಮಾನರು ಎಂಬ ಸಮಾನತೆ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಮಹತ್ವದಾಗಿದೆ ಎಂದು ಶಾಸಕ ವಿಠ್ಠಲ ಧೋಂಡಿಬಾ ಕಟಕಧೋಂಡ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯರ ರಂಗಮಂದಿರದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನನ್ನ ಮತ ನನ್ನ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಅನೇಕ ದೇಶಗಳಲ್ಲಿ ಹಂತ ಹಂತವಾಗಿ ಸಂವಿಧಾನ ಜಾರಿಗೆ ಬಂದು ಅಲ್ಲಿನ ಜನತೆಗೆ ಸಮಾನತೆ ದೊರಕಲು ದೀರ್ಘ ಕಾಲ ಪಡೆಯಿತು. ಆದರೆ, ವಿವಿಧತೆಯಲ್ಲಿ ಏಕತೆವಿರುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಆಧಾರದ ಸಂವಿಧಾನ ಜಾರಿಗೆ ಬಂದ ದಿನದಿಂದಲೇ ಪ್ರತಿಯೊಬ್ಬರಿಗೂ ಸಮಾನತೆ ದೊರೆತಿದೆ ಎಂದು ಅವರು ಹೇಳಿದರು.ಸರ್ವರ ಏಳ್ಗೆಯ ಅಂಶಗಳನ್ನು ಹೊಂದಿರುವ ಪ್ರಜಾಪ್ರಭುತ್ವದ ಸಂವಿಧಾನದ ಆಶಯಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ವಿಜಯ ಟೈಯರ್ಸ್ ಹತ್ತಿರ ಸೆ.೧೩ರಂದು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ವಿಜಯ ಟೈಯರ್ಸ್ ಹತ್ತಿರ ತಡೆದು ವಿಚಾರಿಸಿ, ಒಟ್ಟು ೨೧೦ ಕ್ವಿಂಟಲ್ ೪೩ ಕೆಜಿ ರೂ ೪,೭೬,೩೧೦ ಮೌಲ್ಯದ ಪಡಿತರ ಧಾನ್ಯ ಜಪ್ತಿ ಮಾಡಿ ಅಗತ್ಯ ವಸ್ತುಗಳ ಕಾಯ್ದೆ ೧೯೫೫ರ ಮೇರೆಗೆ ಆದರ್ಶನಗರ ಪೋಲಿಸ್ ಠಾಣೆಯಲ್ಲಿ ಗಜಾನನ ಮಕಾಲೆ ಎನ್ನುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.ಈ ದಾಳಿಯಲ್ಲಿ ವಿಜಯಪುರ ನಗರದ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಆದರ್ಶನಗರ ಪಿಎಸ್‌ಐ ಸೀತಾರಾಮ ಲಮಾಣಿ ಸೇರಿದಂತೆ ಪೋಲಿಸ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಈ ದಾಳಿಯಲ್ಲಿ ಇದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಸುಮಾರು ಎರಡು ಕೋಟಿಗೂ ಅಧಿಕ ಪರಿಹಾರ ಮೊತ್ತ ಒಳಗೊಂಡಂತೆ ಒಟ್ಟು ೩೭೭೬ ಪ್ರಕರಣಗಳು ಇತ್ಯರ್ಥ ಗೊಂಡಿವೆ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಕೋಟಪ್ಪ ಕಾಂಬಳೆ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಭಾಗವಹಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ರಾಜಿ ಮೂಲಕ ನ್ಯಾಯ ಇತ್ಯರ್ಥದಿಂದ ನ್ಯಾಯಾಲಯಗಳಿಗೆ ಅಲೆದಾಟ ತಪ್ಪುತ್ತದೆ, ಪರಸ್ಪರ ಸೌಹಾರ್ಧತೆ ಬೆಳೆಯುತ್ತದೆ ಎಂದರು.ರಾಜಿ ಮೂಲಕ ಇತ್ಯರ್ಥಕ್ಕೆ ವಕೀಲರು ಸಹಕಾರ ನೀಡುತ್ತಿದ್ದು ಅವರಿಗೆ ಧನ್ಯವಾದ ಎಂದ ಅವರು ಸಾರ್ವಜನಿಕರು ಸಹ ರಾಜಿ ಸಂಧಾನಕ್ಕೆ ಆದ್ಯತೆ ನೀಡಿ ಪ್ರಕರಣ ಇತ್ಯರ್ಥದ ಮೂಲಕ ನೆಮ್ಮದಿಯ ಜೀವನ ನಡೆಸಲು ಮುಂದೆ ಬರಬೇಕು ಎಂದರು.ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಕ್ರಿಮಿನಲ್ ವಿಮಾ ಪರಿಹಾರ ಪ್ರಕರಣ ರಾಜಿ ಮೂಲಕ ಮುಕ್ತಾಯ ಗೊಂಡಿವೆ ಎಂದರು.ಅದರಲ್ಲಿ ವ್ಯಾಜ್ಯ ಪೂರ್ವ ಬ್ಯಾಂಕ ಟ್ರಾಫಿಕ ಪ್ರಕರಣಗಳು ಹಾಗೂ ಇತರೆ ಸಾರ್ವಜನಿಕ ಉಪಯುಲಕ್ತತಾ ಪ್ರಕರಣ ಸೇರಿವೆ ಎಂದರು.ಕ್ರಿಮಿನಲ್, ಚೆಕ್ ಬೌನ್ಸ, ಕೌಟುಂಬಿಕ ವ್ಯಾಜ್ಯ ವಿಭಾಗದ ದಾವೆ ಸಿವಿಲ್…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯಾವುದೇ ಅಪರಾಧ ಕೃತ್ಯಗಳು ಜರುಗಿದರೂ ೨೪ ಗಂಟೆಗಳ ಅವಧಿಯಲ್ಲಿ ಅಪಾರಾಧಿಗಳನ್ನು ಪತ್ತೆ ಹಚ್ಚುವ ಈ ತಾಂತ್ರಿಕ ಯುಗದಲ್ಲಿ ತಿಂಗಳುಗಳೇ ಗತಿಸಿದರೂ ಯಾವೊಬ್ಬ ಅಪರಾಧಿಯನ್ನು ತಂದು ಕಟಕಟೆಯಲ್ಲಿ ನಿಲ್ಲಿಸದಿರುವುದು ಪೊಲೀಸರ ಕಾರ್ಯದಕ್ಷತೆಯ ಮೇಲೆ ಸಂಶಯ ವ್ಯಕ್ತವಾಗುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಬನ್ನೆಟ್ಟಿ ಗ್ರಾಮದಲ್ಲಿ ಮಹಾದೇವಪ್ಪ ಪೂಜಾರಿ ಎಂಬ ದಲಿತ ವ್ಯಕ್ತಿಯ ಕೊಲೆಯಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಕೊಲೆಗಾರರನ್ನು ಬಂದಿಸದೇ ಇರುವುದು ಪೊಲೀಸ್ ಇಲಾಖೆಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ಇಲಾಖೆ ಈ ರೀತಿ ನಿರ್ಲಿಪ್ತತೆ ತೋರುತ್ತಿರುವುದು ಯಾವ ಕಾರಣಕ್ಕೆ? ಇಲ್ಲಿ ಕೊಲೆಗಾರನ ರಕ್ಷಣೆ ಮಾಡಲಾಗುತ್ತಿದೆಯೇ ಅಥವಾ ಯಾವುದೋ ಆಮಿಷಕ್ಕೊಳಗಾಗಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದಯೇ ಎಂಬುದು ಮೊದಲು ದೃಢವಾಗಬೇಕು. ತನಿಖೆಯಲ್ಲಿನ ಈ ಎಲ್ಲ ವೈಫಲ್ಯಗಳನ್ನು ಖಂಡಿಸಿ ಬರುವ ಸೆ.೧೯ರಂದು ಬನ್ನೆಟ್ಟಿ ಗ್ರಾಮದಿಂದ ಕಾಲ್ನಡಿಗೆಯ ಜಾಥಾ ಪ್ರಾರಂಭಿಸಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಸೆ.೧೬ರಂದು ಬೆಳಿಗ್ಗೆ ೧೦ಗಂಟೆಗೆ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಎಸ್.ಎಮ್.ಪೂಜಾರಿ ತಿಳಸಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಚೇರಮನ್ನರು ಹಾಗೂ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಂ.ಪೂಜಾರಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮವಿವಿ ಕುಲಸಚಿವರಾದ ಶಂಕರಗೌಡ ಎಸ್.ಸೋಮನಾಳ ಆಗಮಿಸಲಿದ್ದಾರೆ. ಅತಿಥಿಗಳಾಗಿ ಸಂಸ್ಥೆಯ ಸಹ ಕಾರ್ಯದರ್ಶಿ ಅಶೋಕ ವಾರದ, ಉಪಸ್ಥಿತಿಯನ್ನು ನಿವೃತ್ತ ದೈಹಿಕ ಉಪನ್ಯಾಸಕ, ಸಾಹಿತಿ ಎಂಜೆಎಫ್ ಲಾಯನ್ ಕೆ.ಹೆಚ್.ಸೋಮಾಪೂರ ವಹಿಸುವರು. ವಿದ್ಯಾರ್ಥಿ ಒಕ್ಕೂಟ ಕಾರ್ಯಾಧ್ಯಕ್ಷೆ ಜಿ.ವಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಸಂಗಮ್ಮ ಪೂಜಾರಿ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಪತ್ರಿಕಾ ವಿಭಾಗದ ಕಾರ್ಯಾಧ್ಯಕ್ಷ ಮಹಾಂತೇಶ ನೂಲಾನವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಳೆ ನೀರಿನಿಂದ ಮನೆ ಪೂರ್ಣ ಆವೃತ್ತವಾಗಿ ಮಾರಾಟಕ್ಕೆ ತಯಾರಿಸಿದ್ದ ಸಿಹಿತಿಂಡಿ ಸಹಿತ ಐವತ್ತು ಸಾವಿರ ಮೌಲ್ಯದ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಳಾದ ಘಟನೆ ಪಟ್ಟಣದಲ್ಲಿ ಭಾನುವಾರ ಜರುಗಿದೆ.ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಸತತ ಮಳೆಯಿಂದ ಸದಯ್ಯನಮಠ ಸುತ್ತಮುತ್ತಲಿನ ಆನಂದ, ಮಲ್ಲಯ್ಯ, ಶಿವಯ್ಯ ಹಾಗೂ ಶ್ರೀಶೈಲ ಸ್ಥಾವರಮಠ ಎಂಬುವವರ ಮನೆಗಳಿಗೆ ಮಳೆ ನೀರು ಪ್ರವೇಶಿಸಿ ಅವಾಂತರ ಮಾಡಿದೆ. ಮಳೆ ನೀರು ಮನೆಯುದ್ದಕ್ಕೂ ತುಂಬಿದ ಪರಿಣಾಮ ಮಕ್ಕಳು ಸಹಿತ ಕುಟುಂಬದವರೆಲ್ಲ ನಿದ್ರಿಸಲು ಆಗದೇ ಅಸಹಾಯಕರಾಗಿ ಒಂದೆಡೆ ಕುಳಿತರು. ಜೊತೆಗೆ ಸೋಮವಾರ ಸಂತೆಯ ಮಾರಾಟಕ್ಕೆ ಸಿದ್ಧಪಡಿಸಿದ್ದ ಶೇವು, ಬೂಂದೆ ಲಾಡು, ಜಿಲೇಬಿಯಂತಹ ಸಾವಿರಾರು ರೂ.ಗಳ ಮೌಲ್ಯದ ತಿನಿಸುಗಳು ಸಂಪೂರ್ಣವಾಗಿ ಹಾಳಾಗಿವೆ. ಆನಂದ ಸದಯ್ಯನಮಠ ಅವರ ಮನೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ರಾತ್ರಿ ಇಡೀ ಇದ್ದ ಕಾರಣ ಪ್ರೀಜ್, ಕೂಲರ್ ಸಹಿತ ಹಲವು ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾನಿಗೊಳಗಾಗಿವೆ.ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದ ತಗ್ಗಾದ ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರ ತೊಂದರೆ ಉಂಟು…

Read More