ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಸುಮಾರು ಎರಡು ಕೋಟಿಗೂ ಅಧಿಕ ಪರಿಹಾರ ಮೊತ್ತ ಒಳಗೊಂಡಂತೆ ಒಟ್ಟು ೩೭೭೬ ಪ್ರಕರಣಗಳು ಇತ್ಯರ್ಥ ಗೊಂಡಿವೆ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಕೋಟಪ್ಪ ಕಾಂಬಳೆ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಭಾಗವಹಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜಿ ಮೂಲಕ ನ್ಯಾಯ ಇತ್ಯರ್ಥದಿಂದ ನ್ಯಾಯಾಲಯಗಳಿಗೆ ಅಲೆದಾಟ ತಪ್ಪುತ್ತದೆ, ಪರಸ್ಪರ ಸೌಹಾರ್ಧತೆ ಬೆಳೆಯುತ್ತದೆ ಎಂದರು.
ರಾಜಿ ಮೂಲಕ ಇತ್ಯರ್ಥಕ್ಕೆ ವಕೀಲರು ಸಹಕಾರ ನೀಡುತ್ತಿದ್ದು ಅವರಿಗೆ ಧನ್ಯವಾದ ಎಂದ ಅವರು ಸಾರ್ವಜನಿಕರು ಸಹ ರಾಜಿ ಸಂಧಾನಕ್ಕೆ ಆದ್ಯತೆ ನೀಡಿ ಪ್ರಕರಣ ಇತ್ಯರ್ಥದ ಮೂಲಕ ನೆಮ್ಮದಿಯ ಜೀವನ ನಡೆಸಲು ಮುಂದೆ ಬರಬೇಕು ಎಂದರು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಕ್ರಿಮಿನಲ್ ವಿಮಾ ಪರಿಹಾರ ಪ್ರಕರಣ ರಾಜಿ ಮೂಲಕ ಮುಕ್ತಾಯ ಗೊಂಡಿವೆ ಎಂದರು.
ಅದರಲ್ಲಿ ವ್ಯಾಜ್ಯ ಪೂರ್ವ ಬ್ಯಾಂಕ ಟ್ರಾಫಿಕ ಪ್ರಕರಣಗಳು ಹಾಗೂ ಇತರೆ ಸಾರ್ವಜನಿಕ ಉಪಯುಲಕ್ತತಾ ಪ್ರಕರಣ ಸೇರಿವೆ ಎಂದರು.
ಕ್ರಿಮಿನಲ್, ಚೆಕ್ ಬೌನ್ಸ, ಕೌಟುಂಬಿಕ ವ್ಯಾಜ್ಯ ವಿಭಾಗದ ದಾವೆ ಸಿವಿಲ್ ಪ್ರಕರಣ ಮೋಟಾರು ವಾಹನ ಅಪಘಾತ ಪ್ರಕರಂ ಸೇರಿವೆ ಎಂದರು.
ದಿವಾನಿ ನ್ಯಾಯಾಧೀಶ ಸುನೀಲ ಕುಮಾರ ಎಂ.ಎಸ್, ಹೆಚ್ಚುವರಿ ದಿವಾನಿ ನ್ಯಾಯಾಧೀಶ ವಿಕಾಸ ದಳವಾಯಿ, ನ್ಯಾಯವಾದಿಗಳಾದ ಶ್ರೀಮತಿ ಎಸ್.ಬಿ.ಪಾಟೀಲ, ಶ್ರೀಮತಿ ಟಿ.ವಿ.ಸಿಂದಗಿ, ಕುಮಾರಿ ಎ.ಜಿ.ಗಾಯಕವಾಡ, ಸರಕಾರಿ ಅಪರ ವಕೀಲರಾದ ಎಸ್.ಆರ್. ಬಿರಾದಾರ, ರಾಖಿ ಕಟ್ಟಿಮನಿ, ಐ.ಕೆ.ಗಚ್ಚಿನಮಹಲ, ಮಲ್ಲೆಶಿ ಯಂಬತನಾಳ, ವಕೀಲ ಸಂಘದ ಅಧ್ಯಕ್ಷ ಎಸ್.ಬಿ.ಬೂದಿಹಾಳ, ಎಸ್.ಎಲ್ ನಿಂಬರಗಿಮಠ, ಬಿ.ಬಿ.ಬಿರಾದಾರ ಎಸ್.ಎಸ್.ಪಾಟೀಲ, ರಮೇಶ ಕಾಂತ, ಸಿಬ್ಬಂದಿ ಬಿ.ಎಂ.ಲಿಂಗಸಗೂರ, ಎಂ.ಬಿ.ಅಂಬಲಗಿ ಸಿದ್ದು ಹಾವಳಗಿ ಮತ್ತಿತರಿದ್ದರು.