ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ(ರಿ) ನಾಗರಾಭಾವಿ ಬೆಂಗಳೂರು, ಇದರ ವಿಜಯಪುರ ಜಿಲ್ಲಾ ಶಾಖೆ ಅಡಿಯಲ್ಲಿ ಸದಸ್ಯತ್ಪ ಅಭಿಯಾನ ಹಾಗೂ ತಿಕೋಟಾ ತಾಲೂಕಿನ ನೂತನ ಅಧ್ಯಕ್ಷರಾಗಿ ಹಣುಮಂತ ಸಿದ್ದಪ್ಪ ಸೂರ್ಯವಂಶಿ ಹಾಗೂ ಉಪಾಧ್ಯಕ್ಷರಾಗಿ ಅನೀಲ ಬಸವರಾಜ ಕಾಂಬಳೆ, ಭಾರತ ಏಕನಾಥ ಜಾಧವ, ಯಲ್ಲಪ್ಪ ದಾಬಡೆ ಆಯ್ಕೆಯಾಗಿದ್ದಾರೆ.
ಸೋಮವಾರ ತಿಕೋಟಾ ಸಮುದಾಯದ ಭವನದಲ್ಲಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸಮೂರ್ತಿ ಶಾಪೂರ ನೇತೃತ್ವದಲ್ಲಿ ನಡೆದ ಸದಸ್ಯತ್ವ ಅಭಿಯಾನ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಯಲ್ಲಪ್ಪ ಸೋಮಣ್ಣ ಹೋನಕಟ್ಟಿ. ಪ್ರಧಾನ ಕಾರ್ಯದರ್ಶಿಯಾಗಿ ನಾತಾಜಿ ಸಕಾರಾಮ ಹೋನಕಟ್ಟಿ, ಸಿದ್ದು ಸೂರ್ಯವಂಶಿ, ಖಜಾಂಚಿಯಾಗಿ ಲಕ್ಕಪ್ಪಾ ಹೊಸಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಾರುತಿ ಸಮಗಾರ, ಮೋಹನ ತಾಜವ, ಯಶವಂತ ಸಮಗಾರ, ಸದಸ್ಯರಾಗಿ ಶೋಭಾ ಚವ್ಹಾಣ, ಗಣಪತಿ ಶಿಂಧೆ, ಅಮಗೊಂಡ ಹೋನಕಟ್ಟಿ, ಮೋಹನ ಮಾನೆ, ವಿಠ್ಠಲ ಸಂಕಪಾಳ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಶ್ರೀನಿವಾಸಮೂರ್ತಿ ಶಹಾಪುರ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಮತ್ತು ತಿಕೋಟಾ ತಾಲೂಕಿನ ಹರಳಯ್ಯ ಸಮಾಜದ ವಿವಿಧ ಗ್ರಾಮಗಳಲ್ಲಿನ ಮುಖಂಡರು ಪಾಲ್ಗೊಂಡಿದ್ದರು.

