ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ಮನಗೂಳಿ ರಸ್ತೆಯ ಇಬ್ರಾಹಿಂಪುರ ಹಿರೇಮಠದಲ್ಲಿ ಇದೇ ದಿ. 19 ರಂದು ಲಿಂ. ಶ್ರೀ. ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ 114ನೇ ಪುಣ್ಯಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪುಣ್ಯಾರಾಧನೆಯ ಅಂಗವಾಗಿ ಅಂದು ಕುಂಭಮೇಳ, ಶ್ರೀಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪುಣ್ಯಾರಾಧನೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕೆಂದು ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ವಂಶಸ್ಥರಾದ ವಿರುಪಾಕ್ಷಯ್ಯ ಹಿರೇಮಠ, ಪ್ರಭು ಹಿರೇಮಠ, ಉಮೇಶ ಹಿರೇಮಠ, ಮಹೇಶ ಹಿರೇಮಠ, ಶಿವಲಿಂಗಯ್ಯ ಹಿರೇಮಠ ಅವರು ಕೋರಿದ್ದಾರೆ.
ಪುಣ್ಯಾರಾಧನೆಯ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವೂ ಇಬ್ರಾಹಿಂಪುರ ಹಿರೇಮಠದಲ್ಲಿ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ದಿ. 14 ರಿಂದ ಪುರಾಣ ಪ್ರಾರಂಭವಾಗಿದ್ದು, ದಿ.18 ರಂದು ಮಂಗಲಗೊಳ್ಳುವುದು. ಬೆಳಗಾವಿ ಜಿಲ್ಲೆಯ ಮಾಂಜರಿ, ತುಂಗಳ, ಕೊಕಟನೂರ ಕಾಡಸಿದ್ಧೇಶ್ವರ ಮಠದ ಶ್ರೀ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯರು ಪುರಾಣವನ್ನು ನಡೆಸಿಕೊಡುತ್ತಿದ್ದಾರೆ. ಪ್ರತಿದಿನ ಸಂಜೆ 6.30 ರಿಂದ 8 ಗಂಟೆಯವರೆಗೆ ಪುರಾಣ ನಡೆಯುತ್ತಿದ್ದು, ಪುರಾಣ ಕೇಳಲು ಬಹುಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ.
ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಸೂತಿ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರಿಯರಾದ ಶಿವಪ್ಪ ಕೋವಳ್ಳಿ, ಹಣಮಂತ ಜುಮನಾಳ, ಬಸಪ್ಪ ಕೋವಳ್ಳಿ, ರೇವಣಸಿದ್ದ ಜುಮನಾಳ, ಮುರುಗೇಶಗೌಡ ಪಾಟೀಲ, ಚನ್ನಬಸಪ್ಪ ಬಗಲಿ, ರೇವಣ್ಣ ನುಚ್ಚಿ, ಗಿರಮಲ್ಲಪ್ಪ ನುಚ್ಚಿ, ಶ್ರೀಶೈಲ ಗಡಗಿ, ರೇವಪ್ಪ ಕೋವಳ್ಳಿ, ಶ್ರೀಶೈಲ ಗುನ್ನಾಪುರ ಮುಂತಾದವರು ಪಾಲ್ಗೊಂಡಿದ್ದರು.

