ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ವಿಜಯ ಟೈಯರ್ಸ್ ಹತ್ತಿರ ಸೆ.೧೩ರಂದು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ವಿಜಯ ಟೈಯರ್ಸ್ ಹತ್ತಿರ ತಡೆದು ವಿಚಾರಿಸಿ, ಒಟ್ಟು ೨೧೦ ಕ್ವಿಂಟಲ್ ೪೩ ಕೆಜಿ ರೂ ೪,೭೬,೩೧೦ ಮೌಲ್ಯದ ಪಡಿತರ ಧಾನ್ಯ ಜಪ್ತಿ ಮಾಡಿ ಅಗತ್ಯ ವಸ್ತುಗಳ ಕಾಯ್ದೆ ೧೯೫೫ರ ಮೇರೆಗೆ ಆದರ್ಶನಗರ ಪೋಲಿಸ್ ಠಾಣೆಯಲ್ಲಿ ಗಜಾನನ ಮಕಾಲೆ ಎನ್ನುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಈ ದಾಳಿಯಲ್ಲಿ ವಿಜಯಪುರ ನಗರದ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಆದರ್ಶನಗರ ಪಿಎಸ್‌ಐ ಸೀತಾರಾಮ ಲಮಾಣಿ ಸೇರಿದಂತೆ ಪೋಲಿಸ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಈ ದಾಳಿಯಲ್ಲಿ ಇದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.