Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಈ ಬಾರಿ ಡಿಸೆಂಬರ್ 13 ರಂದು ರವಿವಾರ ನಡೆಯಲಿದ್ದು, ನೋಂದಣಿ ಪ್ರಕ್ರಿಯೆಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಶನಿವಾರ ಚಾಲನೆ ನೀಡಿದರು.ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವರು ವೃಕ್ಷಥಾನ್ ಹೆರಿಟೇಜ್- 2026 ರನ್ ಪೋಸ್ಟರ್ ಬಿಡುಗಡೆ ಮಾಡಿದರು. ಅಲ್ಲದೇ, ರೈತರಿಗೆ ಸಸಿ ವಿತರಿಸಿದರು. ಬಳಿಕ ಹೆರಿಟೇಜ್ ರನ್ ಓಟದಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರನ್ನೂ ನೋಂದಣಿ ಮಾಡಿಸಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಸಂಭ್ರಮದಲ್ಲಿ ಹಸಿರಿನ ಹೆಜ್ಜೆ ಪ್ರತೀಕವಾಗಿ ವೃಕ್ಷಥಾನ್ ಹೆರಿಟೇಜ್ ರನ್-2026 ನೋಂದಣಿಗೆ ಚಾಲನೆ ನೀಡಿದ್ದೇನೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ, ಪಕ್ಷಿಗಳ ಉಳಿವಿಗಾಗಿ, ಮರ ಹಾಗೂ ಮಳೆಯ ಮಹತ್ವ ಸಾರುವ ಉದ್ದೇಶದಿಂದ “ಮರ, ಮಳೆಗಾಗಿ ಓಡಿ” ಎಂಬ ಕಳಕಳಿಯೊಂದಿಗೆ ಆಯೋಜಿಸಿರುವ ಈ ಓಟದಲ್ಲಿ ಸಹಸ್ರಾರು ಓಟಗಾರರು ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 13ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗಡಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.ಶನಿವಾರ ತಿಕೋಟಾ ತಾಲೂಕಿನ ಯತ್ನಾಳ ಗ್ರಾಮದಲ್ಲಿ ರೂ. 5 ಕೋ. ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಯತ್ನಾಳ-ಜಾಲಗೇರಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಯತ್ನಾಳ ಗ್ರಾಮದಿಂದ ಮಹಾರಾಷ್ಟ್ರದ ಗಡಿ ಭಾಗದ ವರೆಗಿನ ರಸ್ತೆ ಕಾಮಗಾರಿಗೆ ರೂ.5 ಕೋ. ಅನುದಾನ ಮಂಜೂರಾಗಿದ್ದು, ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಇಟ್ಟಂಗಿಹಾಳದಿಂದ ಯತ್ನಾಳ ಗ್ರಾಮದವರೆಗೆ ಎಸ್.ಎಚ್.ಡಿ.ಪಿ ಯೋಜನೆಯಡಿ ರೂ. 25 ಕೋ. ವೆಚ್ಚದ ರಸ್ತೆ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದ ಅವರು, ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದರು.ಗಡಿ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇದು ಗಡಿಯ ಕೊನೆ ಭಾಗವಾಗಿರುವುದರಿಂದ ನೀರಿಗೆ ಅಡೆತಡೆಯಾಗುವುದು ಸಹಜ. ಮೇಲ್ಭಾಗ ಮತ್ತು ಕೆಳ ಭಾಗದ ರೈತರು ಸಹಕಾರದಿಂದ ನೀರನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ…
ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಾಲಗೇರಿ ಕೆರೆ ತುಂಬಲು ಸಣ್ಣ ನೀರಾವರಿ ಇಲಾಖೆಯ ಮೂಲಕ ಯೋಜನೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರತಿಕೋಟಾ ತಾಲೂಕಿನ ಡೋಕಳೆವಾಡಿ ಗ್ರಾಮದಲ್ಲಿ ಸುಮಾರು ರೂ. 5 ಕೋ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಮತ್ತು ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.179 ಹಳ್ಳಗಳನ್ನು ತುಂಬುವುದರಿಂದ 1400 ಕಿ. ಮಿ. ನಷ್ಟು ಪ್ರದೇಶಕ್ಕೆ ನೀರಾವರಿಯ ಅನುಕೂಲವಾಗಲಿದೆ. ರೈತರಿಗೆ ಅಗತ್ಯವಿರುವರೆಗೆ ಕಾಲುವೆಗೆ ನೀರು ಹರಿಸಲಾಗುವುದು. ಅಲ್ಲದೇ, ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಕನಿಷ್ಟ ಐದು ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವ ಉದ್ದೇಶವಿದೆ. ಸ್ಥಳೀಯ ಮೀನಾದೇವಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.ಮುಖಂಡ ಎಸ್. ಎಚ್. ನಾಡಗೌಡ ಮಾತನಾಡಿ, ಸಚಿವ ಎಂ. ಬಿ. ಪಾಟೀಲರ ಅವಿರತ ಪ್ರಯತ್ನದಿಂದ ಬೇರಾವ ಕ್ಷೇತ್ರದಲ್ಲೂ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪ್ರೀತಿಯ ಸುಧಾ,ಹೇಳಿ ಕೇಳಿ ನೀನು ಮಾದಕ ಕಂಗಳ ಚೆಲುವೆ. ಬಲಗೆನ್ನೆಯ ಮೇಲಿರುವ ಗುಳಿಯೇ ನಿನಗೆ ಒಡವೆ. ನಿನ್ನಂತಹ ಮಂದಗಮನೆಯ ಮಂದಹಾಸ ನೋಡಲು ಸಿಗುವುದು ಅಪರೂಪವೆ. ನಿನ್ನ ರೂಪವೂ ಅಪರೂಪ. ಧೃಢತೆಯೂ ಅಪರೂಪ. ಅಂದದ ಮುಖಾರವಿಂದ, ನೀಳವಾದ ಕೇಶರಾಶಿ, ತಂಗಾಳಿಯೊಂದಿಗೆ ಆಟವಾಡುವ ದುಂಬಿಯಂತಹ ಮುಂಗುರುಳು, ಗುಲಾಬಿ ಬಣ್ಣದ ಅಧರಗಳಲ್ಲಿ ಅಚ್ಚಮಲ್ಲಿಗೆಯಂತಹ ಶುಭ್ರ ನಗು,ಚಂದನದ ಸುಗಂಧ ಬೀರುವ ಸುಂದರ ಯೌವ್ವನ ತುಂಬಿದ ಒಡಲು. ಅಂಗಾಂಗ ಸೌಂದರ್ಯವಂತೂ ಕವಿ ಕಾಳಿದಾಸನೂ ವರ್ಣಿಸಲಾಗದೆಂದು ಸೋಲುವನು. ಚೆಲುವಿನ ಸಾಗರ ನೀನು. ಬಿಂದು ನಾನು ಅನ್ನುತ್ತಿತ್ತು ಮನಸ್ಸು. ರಗಳೆ ರಂಪಗಳು ಗೊತ್ತಿಲ್ಲ. ಮಾನ ಸಮ್ಮಾನ ಉಳಿಸುವ ಬೆಳೆಸುವ ಕಲೆ ನಿನಗೆ ಚೆನ್ನಾಗಿ ಗೊತ್ತು. ಬೆಟ್ಟದಂತಹ ಅಡಚಣೆ ಬಂದರೂ ಸಲೀಸಾಗಿ ಬಿಡಿಸುವುದನ್ನು ಕರಗತ ಮಾಡಿಕೊಂಡಿರುವ ಚೆಲುವೆ. ಸೌಂದರ್ಯಸಾರದಂತೆ ಕಾಣುವವಳು. ಮನ್ಮಥನ ಹೂಬಾಣವನು ಸೀದಾ ಎದೆಗೆ ಬಿಟ್ಟವಳು. ನಿನ್ನ ನೆನೆಯುವುದು ಪುಳಕ ತರುವುದು. ನೀ ಮುಡಿಯದ ಹೂವಿನಲ್ಲಿ ಕಂಪಿಲ್ಲ. ನಾನೇನು ಸುರಸುಂದರಾಂಗನಲ್ಲ ನಿನ್ನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ್ ಜೋಡೋ ಯುವ ಸಂಘಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಥಾಪಿಸುವ ಮೂಲಕ ಯುವಜನರಲ್ಲಿ ಕ್ರೀಡೆ, ಫಿಟ್‌ನೆಸ್, ಆರೋಗ್ಯಕರ ಜೀವನಶೈಲಿ ಹಾಗೂ ನಾಯಕತ್ವದ ಅವಕಾಶಗಳನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ.ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ ೬,೦೦೦ ಜನಸಂಖ್ಯೆಗೆ ಒಂದು ಸಂಘ, ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ ಸರಾಸರಿ ೪,೦೦೦ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ, ಪ್ರತಿ ಪಟ್ಟಣ ಪಂಚಾಯಿತಿ (ಟಿ.ಪಿ.) ವ್ಯಾಪ್ತಿಯಲ್ಲಿ ಸರಾಸರಿ ೪,೦೦೦ ಜನಸಂಖ್ಯೆಗೆ, ಪಟ್ಟಣ ಪುರಸಭೆ (ಟಿ.ಎಂ.ಸಿ.) ವ್ಯಾಪ್ತಿಯಲ್ಲಿ ೬,೦೦೦ ಜನಸಂಖ್ಯೆಗೆ, ನಗರಸಭೆ (ಸಿ.ಎಂ.ಸಿ.) ವ್ಯಾಪ್ತಿಯಲ್ಲಿ ೮,೦೦೦ ಜನಸಂಖ್ಯೆಗೆ ಹಾಗೂ ಮಹಾನಗರ ಪಾಲಿಕೆ ಮತ್ತು ಜಿ.ಬಿ.ಎ. ವ್ಯಾಪ್ತಿಯಲ್ಲಿ ಸರಾಸರಿ ೧೦,೦೦೦ ಜನಸಂಖ್ಯೆಗೆ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲು ಅವಕಾಶವಿದೆ.ಜಿಲ್ಲೆಯಾದ್ಯಂತ ಒಟ್ಟು ೧೦,೦೦೦ ಭಾರತ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈ ಸಂಘಗಳ ಮೂಲಕ ೫೦ ಲಕ್ಷಕ್ಕೂ ಅಧಿಕ ಯುವಜನರನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೃಷಿ ಕೇಂದ್ರದಿಂದ ಜಿಲ್ಲೆಯ ರೈತರು ಹಾಗೂ ರೈತ ಮಹಿಳೆಯರಿಗಾಗಿ ನೈಸರ್ಗಿಕ ಕೃಷಿ ಪದ್ಧತಿಗಳು, ತತ್ವಗಳು, ತಂತ್ರಜ್ಞಾನಗಳು ಹಾಗೂ ಅನುಷ್ಠಾನದ ವಿಧಾನಗಳು ಕುರಿತು ಒಂದು ದಿನದ ಆನ್ ಲೈನ್ ತರಬೇತಿ ಕಾರ್ಯಕ್ರಮ ಆ. ೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಲಾಗಿದೆ.ತರಬೇತಿಯಲ್ಲಿ ಧಾರವಾಡ ಕೃಷಿ ವಿವಿಯ ಬೇಸಾಯ ಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿಗಳಾದ ಡಾ. ಸುನೀಲ್ ಕುಮಾರ್ ಎಸ್. ನೂಲಿ ವಿಷಯ ಮಂಡನೆ ಮಾಡಲಿದ್ದಾರೆ. ನೈಸರ್ಗಿಕ ಕೃಷಿಯ ತತ್ತ್ವಗಳು, ಪ್ರಮುಖ ತಂತ್ರಜ್ಞಾನಗಳು ಹಾಗೂ ಅವುಗಳನ್ನು ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಧಾನಗಳ ಕುರಿತು ತರಬೇತಿಯಲ್ಲಿ ಸಮಗ್ರ ಮಾಹಿತಿಯನ್ನು ನೀಡಲಾಗುವುದು.ಆಸಕ್ತ ರೈತರು ಹಾಗೂ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. Google Meet Link: https://mcet.google.com/xjy-jugo-mxyಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ ಲೈನ್ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ತಾಲ್ಲೂಕಿನ ತೊರವಿ ಗ್ರಾಮ ಬಳಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ಶೀತಲಗೃಹಕ್ಕೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಭೇಟಿ ನೀಡಿ ಪರಿಶೀಲಿಸಿದರು.ಈ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಒಟ್ಟು ವಿಸ್ತೀರ್ಣ ೧೪೧ ಎ.ಗುಂಟ ಇದೆ. ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದೆ. ರಸ್ತೆಗಳ ನಿರ್ಮಾಣ ಹಾಗೂ ೧೦ ಬೋರವೆಲ್ ಗಳಿದ್ದು, ಪ್ರಸ್ತುತ ನಬಾರ್ಡ ಯೋಜನೆಯಡಿ ಸುಮಾರು ೧೦೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ ನಿರ್ಮಾಣಗೊಳ್ಳುತ್ತಿದ್ದು, ವೈನ್ ಮತ್ತು ದ್ರಾಕ್ಷಿ ಬೋರ್ಡದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದಂತೆ ೨ ರಿಂದ ೩ ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಅವರು, ಶೀತಲ ಗೃಹದ ಕುರಿತು ಜಿಲ್ಲಾಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿದರು.ಬಳಿಕ ಜಿಲ್ಲಾಧಿಕಾರಿಗಳು ಶೀತಲ ಗೃಹದ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಚರ್ಚಿಸಿದರು. ಬಳಿಕ ಇದಕ್ಕೆ ಸಂಬಂಧಿಸಿದಂತೆ ಬೋರ್ಡಿನ ವ್ಯವಸ್ಥಾಪಕರ ನಿರ್ದೇಶಕರು ಮುಂದಿನ ದಿನಗಳಲ್ಲಿ ಬಂದು ಮಾಹಿತಿ ನೀಡುವಂತೆ…
ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ರೈತರಿಗೆ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೋಟಗಾರಿಕೆ ಬೆಳೆಗಳನ್ನು ಹುಲುಸಾಗಿ ಬೆಳೆಯಲು ವಿಜಯಪುರ ಜಿಲ್ಲೆ ಸೂಕ್ತ ವಾತಾವರಣ ಹೊಂದಿದೆ. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯವು ಹಲವಾರು ವರ್ಷಗಳಿಂದ ತೋಟಗಾರಿಕೆ ಬೆಳೆಗಳ ಮೇಲೆ ಸಂಶೋಧನೆ ಕೈಗೊಳ್ಳುತ್ತಿದೆ. ರೈತರು ಈ ಕಾರ್ಯಾಗಾರದ ಲಾಭ ಪಡೆದುಕೊಂಡು ಹುಲುಸಾದ ಬೆಳೆ, ಬೆಳೆದು ಉತ್ತಮ ಇಳುವರಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ತಿಡಗುಂದಿಯ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಸಹಯೋಗದಲ್ಲಿ ತಿಡಗುಂದಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಯೋಜನೆಗಳ ಕಾರ್ಯಾಗಾರ ಹಾಗೂ ಪ್ರಮುಖ ಹೆಣ್ಣಿನ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ ದೊರೆಯುವ ಸೌಲಭ್ಯ ಪಡೆದುಕೊಂಡು ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ಮಾಡಿದರು.ತೋಟಗಾರಿಕೆ ವಿಜ್ಞಾನಗಳ ವಿವಿಯ ವಿಸ್ತರಣಾ ನಿರ್ದೇಶಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಮನೆ-ಮನೆ ಸಮೀಕ್ಷೆ ವೇಳೆ ಗೈರು ಹಾಜರಿ, ಶಾಶ್ವತ ಸ್ಥಳಾಂತರ, ಮರಣ ಹೊಂದಿದ, ನಕಲಿ (ಡುಪ್ಲಿಕೇಟ್) ಮತ್ತು ಇತರೆ ಮತದಾರರ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಮಾಹಿತಿ ನೀಡಿದ್ದಾರೆಕ್ಷೇತ್ರವಾರು ಎಎಸ್ ಡಿಡಿಒ ಮತದಾರರ ವಿವರ:ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೨,೯೫೯ ಮತದಾರರು ಗೈರು, ೧೯೪೪೮ ಶಾಶ್ವತವಾಗಿ ಸ್ಥಳಾಂತರಗೊAಡರೆ, ೮, ೮೪೭ ಮತದಾರರು ಮೃತಪಟ್ಟಿದ್ದರೆ, ೪೭೨೯ ನಕಲಿ, ೨೫ ಇತರೇ ಸೇರಿ ೩೬,೦೦೮ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ: ೮೩೬ ಮತದಾರರು ಗೈರು, ೧೮೬೬೪ ಶಾಶ್ವತವಾಗಿ ಸ್ಥಳಾಂತರಗೊAಡರೆ, ೭೯೪೧ ಮತದಾರರು ಮೃತಪಟ್ಟಿದ್ದರೆ, ೨೯೯೩ ನಕಲಿ, ಇತರೇ ೭೦ ಸೇರಿ ೩೦೫೦೪ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.ಬಸವನಬಾಗೇವಾಡಿ: ಮತಕ್ಷೇತ್ರದಲ್ಲಿ ೧,೪೯೪ ಮತದಾರರು ಗೈರು, ೧೩೦೬೩ ಶಾಶ್ವತವಾಗಿ ಸ್ಥಳಾಂತರಗೊಂಡರೆ, ೬೦೩೯ ಮತದಾರರು ಮೃತಪಟ್ಟರೆ, ೪೪೨೩ ನಕಲಿ, ಇತರೇ ೪೨ ಸೇರಿ ೨೫೦೬೧ ಎಎಸ್…
