ವಿಜಯಪುರ ಕಸಾಪ ಬಬಲೇಶ್ವರ ಘಟಕದ ವತಿಯಿಂದ ಕಸಾಪ ಸಂಸ್ಥಾಪನಾ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಉಳಿಗಾಗಿ ನಾವು ಒಂದಾಗಬೇಕಿದ್ದು, ಬೇರೆ ಬೇರೆ ಭಾಷೆಯಿಂದ ಕನ್ನಡ ಮರೆಯಾಗುತ್ತಿರುವುದು ನೋವಿನ ಸಂಗತಿ. ಆದಕ್ಕಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಿ, ಕನ್ನಡ ಉಳಿವಿಗಾಗಿ ಹೋರಾಟ ಮಾಡಬೇಕು ಎಂದು ರೈತ ಹೋರಾಟಗಾರ್ತಿ ಸಂಗೀತಾ ರಾಠೋಡ ಹೇಳಿದರು.
ನಗರದಲ್ಲಿ ಬಬಲೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ೧೧೨ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ಮು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಬಲೇಶ್ವರ ಕಸಾಪ ತಾಲೂಕು ಅಧ್ಯಕ್ಷ ಹಾಗೂ ಪತ್ರಕರ್ತ ಖಾಜಾಮೈನುದ್ದೀನ್ ಪಟೇಲ್ ಮಾತನಾಡಿ, ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಜನ್ಮತಾಳಿದ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಸುಮಾರು ಒಂದು ಶತಮಾನಕ್ಕೂ ಅಧಿಕ ಇತಿಹಾಸವಿರುವ ಈ ಸಂಸ್ಥೆಯು ಕೇವಲ ಒಂದು ಕಟ್ಟಡವಲ್ಲ, ಅದು ಏಳು ಕೋಟಿ ಕನ್ನಡಿಗರ ಭಾವನಾತ್ಮಕ ಕೇಂದ್ರವಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಬಲೇಶ್ವರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮಕಬುಲ್ ಕೇಜಿ, ಶರಣ ಚಿಂತಕ ರಾಜುಗೌಡ ಬಿರಾದಾರ, ಕಸಾಪ ಪದಾಧಿಕಾರಿ ಮೀರಾಸಾಬ ದಳವಾಯಿ, ಮಹಾದೇವ ಹರಿಜನ, ರೇಖಾ ಬಿರಾದಾರ, ನಿಲಾಂಬಿಕಾ ಬಿರಾದಾರ, ಅನಸೂಯಾ ಬಡಿಗೇರ, ಜಾವೀದ್ ಇನಾಮದಾರ, ಚಂದ್ರು ಚಲವಾದಿ ಪಾಲ್ಗೊಂಡಿದ್ದರು.

