ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಕನ್ನಡ ಸಾಹಿತ್ಯ ಪರಿಷತ್ತಿನ 112 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಪಟ್ಟಣದ ಕನ್ನಡ ಭವನದಲ್ಲಿ ಆಚರಣೆ ಮಾಡಲಾಯಿತು.
ಬಳಿಕ ಮಾಜಿ ಕಸಾಪ ತಾಲೂಧ್ಯಕ್ಷ ಡಿ.ಎಂ.ನದಾಫ್ ಮಾತನಾಡಿ, ಕನ್ನಡ ಸಾಹಿತದಯ ಪರಿಷತ್ತು ಕನ್ನಡ ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ. ಪರಿಷತ್ತಿನ ಧ್ಯೇಯಧೋರಣೆಯನ್ನು ಸಕಾರಗೊಳಿಸುವಲ್ಲಿ ಎಲ್ಲರೂ ಶ್ರಮಿಸಬೇಕು.
ಆಗಾಗ ದತ್ತಿ ಉಪನ್ಯಾಸಗಳು ನಡೆಯುತ್ತಿರಬೇಕು ಎಂದರು.
ಹಿರಿಯ ಮಹಿಳಾ ಲೇಖಕಿ ಅನುಮಪಾ ಅಪಗೊಂಡೆ ಮಾತನಾಡಿ ಯುವ ಜನಾಂಗ ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಮುನೀರ್ ಪಟೇಲ್ ಮಾತನಾಡಿ ತಾಲೂಕಿನ ಹಿರಿಯ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಿರುವುದು ಖುಷಿ ತಂದಿದೆ ಎಂದರು.
ಮಾಜಿ ಕಸಾಪ ತಾಲೂಕಾಧ್ಯಕ್ಷ ಮುರಗೇಂದ್ರ ಮಸಳಿ,
ಕಸಾಪ ಅಧ್ಯಕ್ಷ ಪ್ರಭಾವತಿ ಮೇತ್ರಿ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ವಕೀಲರ ಸಂಘದ ತಾಲೂಕಾಧ್ಯಕ್ಷ ಅರ್ಜುನ ಕೇರೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮೃತ್ಯುಂಜಯ ಕಳ್ಳಿಮಠ, ಮಲ್ಲಿನಾಥ ಆಲೇಗಾಂವ, ಬಸಣ್ಣ ಗುಣಾರಿ, ಗುರಣ್ಣ ಪಡಶೇಟ್ಟಿ, ಜಗದೇವಪ್ಪ ಅಂಜುಟಗಿ, ಶೇಕಪ್ಪ ಮಾಸ್ತಾರ ಜೋಗೂರ, ಬಿ.ಎಂ.ರಾವ್, ಗೋಪಾಲ ಹಳ್ಯಾಳ, ಚಿನ್ನು ಮನಿಯಾರ, ಗೌತಮ ಸಕ್ಕರಗಿ, ಬಿ.ಡಿ.ಅಂಜುಟಗಿ, ಭಾಗ್ಯಶ್ರೀ ಹಳ್ಯಾಳ, ಸುಶ್ಮೀತಾ ಅತ್ತೆ, ಐಶ್ವರ್ಯ ಡಿ.ರೇವೂರ, ಚಂದ್ರ ಜಮಶೇಟ್ಟಿ, ಪ್ರತಿಭಾ ಮಹಿಂದ್ರಕರ್ ಇದ್ದರು.
ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಸಂಗಣ್ಣ ಎಂ.ಸಿಂಗೆ ಕಾರ್ಯಕ್ರಮ ನಿರೂಪಿಸಿದರು. ಪರಮಾನಂದ ಸರಸಂಬಿ ಸ್ವಾಗತಿಸಿದರು.

