Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾದ ವೃತ್ತಿ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಉಪಕುಲ ಸಚಿವ ಡಾ.ಡಿ.ಕೆ ಕಾಂಬಳೆ ಹೇಳಿದರು.ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರವಿವಾರ ಹಿರಿಯ ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ 14 ವರ್ಷದ ವಿದ್ಯಾರ್ಥಿಗಳ ಬೃಹತ್ ಸಮ್ಮಿಲನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡಿದರು.ಮಕ್ಕಳ ಬದುಕನ್ನು ರೂಪಿಸುವ ಶಿಕ್ಷಕನಿಗೆ ಸಮಾಜದಲ್ಲಿ ಉನ್ನತವಾದ ಸ್ಥಾನಮಾನವಿದೆ. ಇಂತಹ ವೃತ್ತಿಯನ್ನು ಗೌರವದಿಂದ ನಿರ್ವಹಿಸಿ ಸಮಾಜ ಸುಧಾರಿಸುವ ಮಕ್ಕಳನ್ನು ತಯಾರಿಸಬೇಕು ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಅಶೋಕ ಹಂಚಲಿ ಮಾತನಾಡಿ ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರ್ಯತೆ ಉಳಿಸಿಕೊಂಡ ವೃತ್ತಿ ಎಂದರೆ ಶಿಕ್ಷಕರ ವೃತ್ತಿ ಎಂದು ಹೇಳಿದರು.ಪ್ರಾಚಾರ್ಯ ಡಾ. ಎಸ್. ಬೋಳರೆಡ್ಡಿ ಮಾತನಾಡಿ, 2009 ರಿಂದ 2023ರ ವರಗಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ಸವಿ ನೆನಪಿನೊಂದಿಗೆ ಉಜ್ವಲ ಭವಿಷ್ಯಕ್ಕೆ ಹಾರೈಸಿದರು. ಕಾರ್ಯಕ್ರಮದಲ್ಲಿ ಸುಮಾರು 410 ಕ್ಕಿಂತ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಇರಬಾ ಶೆಟ್ಟಿ, ಶಂಕ್ರಮ್ಮಪಾಟೀಲ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಿದ್ಧೇಶ್ವರ ಪ್ರೌಢಶಾಲೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹೆಸರಾಂತ ಇಂಗ್ಲಿಷ್ ತಜ್ಞ ರಮೇಶ ಬಲ್ಲಿದ್ ರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಚಾರ್ಯ ಡಿ.ಎಚ್.ಗಾಂವ್ಕರ್, ಆಡಳಿತಾಧಿಕಾರಿ ಮಹಾಂತೇಶ ಬೀಳಗಿಮಠ, ಮುಖ್ಯಶಿಕ್ಷಕ ಶ್ರೀಕಾಂತ ತೋಳನೂರ ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕು ಬಮ್ಮನಜೋಗಿ ತಾಂಡಾಗೆ ಸರಕಾರಿ ಪ್ರೌಢಶಾಲೆ ಮಂಜೂರಾದ ಪ್ರಯುಕ್ತ ಶಾಸಕ ರಾಜುಗೌಡ ಪಾಟೀಲರಿಗೆ ಗ್ರಾಮಸ್ಥರು ಸನ್ಮಾನಿಸಿದರು.ಮತಕ್ಷೇತ್ರದ ಕುದರಿಸಾಲವಾಡಗಿ ಗ್ರಾಮದ ಶಾಸಕರ ನಿವಾಸಕ್ಕೆ ಶನಿವಾರ ತೆರಳಿದ ಬಮ್ಮನಜೋಗಿ ತಾಂಡಾ ನಿವಾಸಿಗಳು ಶಾಸಕರಿಗೆ ಸನ್ಮಾನ ಕೈಗೊಂಡರು.ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಬಿ.ಡಿ.ಪಾಟೀಲ ಮಾತನಾಡಿ, ತಾಂಡಾ ಜನತೆಯ ಬಹುದಿನಗಳ ಬೇಡಿಕೆಯಂತೆ ಪ್ರೌಢಶಾಲೆ ಮಂಜೂರು ಮಾಡಿದ್ದು ಬಹಳ ಸಂತೋಷ. ತಾಂಡಾದ ಮಕ್ಕಳು ಎಂಟನೇ ತರಗತಿ ನಂತರ ಶಾಲೆ ಬಿಡುತ್ತಿದ್ದರು. ಇವರ ಉನ್ನತ ಅಭ್ಯಾಸಕ್ಕಾಗಿ ಪ್ರೌಢಶಾಲೆ ಅತ್ಯಗತ್ಯವಾಗಿತ್ತು. ಈ ಪ್ರೌಢಶಾಲೆಯಿಂದ ಸುತ್ತಲಿನ ರಾಮನವಸ್ತಿ, ಇಬ್ರಾಹಿಂಪುರ ಹಾಗೂ ತಾಂಡಾ, ಬಮ್ಮನಜೋಗಿ ಹಾಗೂ ತಾಂಡಾಗಳ ಶಾಲೆಗಳ ಮಕ್ಕಳಿಗೆ ಕಲಿಯಲು ಅನುಕೂಲವಾಗಲಿದೆ ಎಂದರು.ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಅಶೋಕ ನಾಯಿಕ, ಭೂದಾನಿ ದೇಸು ನಾಯಿಕ, ತಾಲ್ಲೂಕು ಪಂಚಾಯಿತ ಮಾಜಿಸದಸ್ಯ ದಿಲೀಪ್ ರಾಥೋಡ, ಗ್ರಾಮ ಪಂಚಾಯಿತ ಸದಸ್ಯರಾದ ಕಾಮಸಿಂಗ ಚವ್ಹಾಣ, ಶಾಂತು ರಾಥೋಡ, ಬಾಬು ರಾಠೋಡ, ಭೀಮು ನಾಯಕ, ರಾಮು ಪವಾರ, ವಿ.ಕೆ.ರಾಠೋಡ, ಅರವಿಂದ ರಾಠೋಡ, ನೀಲು ಪವಾರ, ಹೆಗ್ಗು ನಾಯಿಕ, ಶಿಕ್ಷಕರಾದ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ರೈತರ ಅಪ್ಲಿಕೇಶನ್ ಈಗಾಗಲೇ ಚಾಲನೆಯಲ್ಲಿದೆ. ಇದರ ಮೂಲಕ ರೈತರು ತಮ್ಮ ಬೆಳೆ ಸಮೀಕ್ಷೆ ಮಾಡಬಹುದಾಗಿದೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಇತ್ತೀಚಿಗೆ ಜರುಗಿದ ಬೆಳೆ ಸಮೀಕ್ಷೆ ಕುರಿತಾದ ಪಿಆರ್‌ಓಗಳ ತರಬೇತಿ ಹಾಗೂ ಕಿಟ್ ವಿತರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಇದೇ ತಿಂಗಳ ದಿ: ೧೫ ರಿಂದ ೩೧ ರವರೆಗೆ ರೈತರು ತಮ್ಮ ಬೆಳೆ ಸಮೀಕ್ಷೆಯನ್ನು ರೈತರ ಅಪ್ಲಿಕೇಶನ್ ಮೂಲಕ ವೈಯಕ್ತಿಕವಾಗಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ನಂತರ ಸೆಪ್ಟೆಂಬರ್ ೩೦ ರವರೆಗೆ ಬೆಳೆ ಸಮೀಕ್ಷೆಗಾರರ ಮೂಲಕ ಬೆಳೆ ಸಮೀಕ್ಷೆ ಮಾಡಿಸಬಹುದಾಗಿದೆ ಎಂದರು.ತಹಶೀಲ್ದಾರ ಪ್ರಕಾಶ ಸಿಂದಗಿ ಮಾತನಾಡಿ, ಕಳೆದ ಸಾಲಿನಲ್ಲಿ ಬೆಳೆಸಮೀಕ್ಷೆ ಕೈಗೊಂಡಾಗ ಜಮೀನಿನಲ್ಲಿ ಎರಡು ಬೆಳೆಗಳಿದ್ದಾಗ ಸಮೀಕ್ಷೆಗಾರರು ಸಮೀಕ್ಷೆಯಲ್ಲಿ ಕೇವಲ ಒಂದೇ ಬೆಳೆಯ ಹೆಸರು ನಮೂದಿಸಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾದ ಕುರಿತು ವರದಿಯಾಗಿವೆ. ಆದ್ದರಿಂದ ಈ ಬಾರಿ ಅಂತಹ ಯಾವುದೇ ತಪ್ಪಗಳು ಮರುಕಳಿಸದಂತೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ದಿ.ಖತಾಲಸಾಬ ಆಲಗೂರ ಇವರ ಹೆಸರಿನಲ್ಲಿ ಪ್ರತಿ ವರ್ಷವೂ ಕೊಡಮಾಡುವ ಅಪ್ಪ ರಾಜ್ಯ ಪ್ರಶಸ್ತಿಗೆ ಬೆಂಗಳೂರಿನ ಇನ್ ಸೈಟ್ಸ್ ಯುಪಿಎಎಸ್‌ಸಿ ಕೆರಿಯರ್ ಅಕಾಡೆಮಿ ಮುಖ್ಯಸ್ಥ ವಿನಯಕುಮಾರ ಜಿ.ಬಿ ಹಾಗೂ ವಿಜಯಪುರದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೊತದಾರ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ೫ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಆ.೩೦ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ ಮಂದಿರ ಭವನದಲ್ಲಿ ನಡೆಯುವ ಆರಕ್ಷಕ ಕಲಾ ಸಂಗಮ, ಅಪ್ಪ ಪ್ರಶಸ್ತಿ ಪ್ರದಾನ, ಶಿಕ್ಷಕರ ದಿನಾಚರಣೆ ಹಾಗೂ ವಿವಿಧ ಸಾಧಕರಿಗೆ ಪುರಸ್ಕಾರ ಸಮಾರಂಭದಲ್ಲಿ ನಟ ವಿಜಯ ರಾಘವೇಂದ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಲೋಕಾಯುಕ್ತ ಡಾ.ಸಂತೋಷ ಹೆಗಡೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಿರಿಯ ಸಾಹಿತಿಗಳು ಉಪಸ್ಥಿತರಿರುವರು ಎಂದು ಮೌಲಾಲಿ ಆಲಗೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದಾವಣಗೆರೆಯ ವಿನಯಕುಮಾರ ಜಿ.ಬಿ ಸುಮಾರು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಯುಪಿಎಸ್‌ಸಿ…
ಬಸವ ಸಂಸ್ಕ್ರತಿ ಅಭಿಯಾನದ ಸಮಾಲೋಚನಾ ಸಭೆಯಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಸೆ.೧ ರಿಂದ ಅ.೫ ರವರೆಗೆ ರಾಜ್ಯದ ಎಲ್ಲ ೩೨ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಬಸವ ಸಂಸ್ಕ್ರತಿ ಅಭಿಯಾನವು ಸೆ. ೧ ರಂದು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಸಚಿವ ಶಿವಾನಂದ ಪಾಟೀಲ ಸೇರಿದಂತೆ ನಾಡಿನ ಅನೇಕ ಶ್ರೀಗಳು ಈ ಅಭಿಯಾನದ ಬಸವ ರಥಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗಗಳಿಂದ ಅನೇಕ ಶ್ರೀಗಳು, ಜನರು ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗೆ ರಚಿಸಲಾಗುವ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಲ್ಲಿರುವ ಪದಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿಯಿದೆ. ರಾಜ್ಯದಲ್ಲಿಯೇ ಅಭೂತಪೂರ್ವಕ ಕಾರ್ಯಕ್ರಮವಾಗುವಂತೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯ ಸಿಬಿಎಸ್ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಸಂಸ್ಕ್ರತಿ ಅಭಿಯಾನದ…
ಶ್ರೀ ಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಶ್ರೀಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕು ಎಲ್ಲ ಸದಸ್ಯರ, ಬ್ಯಾಂಕಿನ ಸಿಬ್ಬಂದಿ ಹಾಗೂ ನಿರ್ದೇಶಕರ ಶ್ರಮದಿಂದ ೨೦೨೪-೨೫ ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ.೩೫,೧೩೨.೩೭ ವ್ಯವಹಾರ ಮಾಡಿ ೧.೧ ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಶ್ರೀಬಸವೇಶ್ವರ ಕೋ-ಆಪರೇಟಿವ್ಹ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿದರು.ಪಟ್ಟಣದ ಪಂಚಾಚಾರ್ಯ ಜನಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ೬೧ ನೇ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಬ್ಯಾಂಕಿನಲ್ಲಿ ಪ್ರಸ್ತುತ ೩,೨೫೬ ಸಾಮಾನ್ಯ ಸದಸ್ಯರು, ೩,೨೭೨ ಸಹ ಸದಸ್ಯರನ್ನು ಹೊಂದಿದೆ. ಒಟ್ಟು ರೂ. ೩೪೮.೮೨ ಲಕ್ಷ ಶೇರು ಬಂಡವಾಳ, ೪೧೦.೧೩ ಲಕ್ಷ ಕಾಯ್ದಿಟ್ಟ ನಿಧಿ ಹಾಗೂ ಇತರೇ ನಿಧಿಗಳು ಸೇರಿ ಒಟ್ಟು ೯೫೬.೪೯ ಲಕ್ಷ ರೂ. ಹೊಂದಿದೆ. ಗ್ರಾಹಕರಿಂದ ರೂ.೧೦,೩೩೮.೧೯ ಲಕ್ಷ ಠೇವುಗಳು ಹೊಂದಿದೆ. ದುಡಿಯುವ ಬಂಡವಾಳ ರೂ. ೧೨,೦೯೦.೯೭ ಲಕ್ಷ ಇದೆ. ೨೦೨೫ರ…
ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀರಾವರಿಯಿಂದಾಗಿ ಕೃಷಿಯಷ್ಟೇ ಅಲ್ಲ, ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಮಾರಾಟ ಮಾಡುವವರಿಗೂ ವರದಾನವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಸಿಂದಗಿ ಪಟ್ಟಣದಲ್ಲಿ ಸ್ವರಾಜ್ ಟ್ರ್ಯಾಕ್ಟರ್ ನೂತನ ಶೋ ರೂಂ ಉದ್ಘಾಟಿಸಿ ಅವರು ಮಾತನಾಡಿದರು.ಜಗತ್ತು ಆಧುನೀಕರಣದತ್ತ ಸಾಗಿರುವುದರಿಂದ ಅದಕ್ಕೆ ತಕ್ಕಂತೆ ಕೃಷಿ ಸಲಕರಣೆಗಳನ್ನು ಬಳಸಬೇಕಾಗುತ್ತಿದೆ. ಟ್ರ್ಯಾಕ್ಟರ್ ರೈತರ ಬೆನ್ನೆಲುಬಾಗಿದ್ದು, ರೈತರ ಶ್ರಮವನ್ನು ಕಡಿಮೆ ಮಾಡಿ ಹೊಲದ ಕೆಲಸವನ್ನು ಬೇಗ ಮತ್ತು ಸುಲಭವಾಗಿ ಮಾಡಲು ಸಹಾಯವಾಗುತ್ತದೆ. ನೀರಾವರಿ ಯೋಜನೆಗಳು ರೈತರಿಗೆ ಆರ್ಥಿಕ ಬಲ ಮತ್ತು ಸಮೃದ್ಧಿ ತರುತ್ತವೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಮಾಡಿರುವ ನೀರಾವರಿ ಯೋಜನೆಗಳಿಂದ ಕೃಷಿಗಷ್ಟೇ ಅಲ್ಲ, ಕೃಷಿ ಸಲಕರಣೆಗಳ ವ್ಯಾಪಾರಿಗಳಿಗೂ ವರದಾನವಾಗಿದೆ. ಅಟೊಮೊಬೈಲ್ ಉದ್ಯಮಿ ಬಿ. ಟಿ. ತರಸೆ ಅವರು ಸೂರತ್ಕಲ್ ನಲ್ಲಿ ಕೆಮಿಕಲ್ ಎಂಜಿನಿಯರ್ ಮುಗಿಸಿ ಕೃಷಿಯ ಕಡೆಗೆ ತಮ್ಮನ್ನು ತೊಡಗಿಸಿಕೊಂಡಿದ್ದು, ಸದಾ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 25 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಡಾ. ವಿರುಪಾಕ್ಷಿ ಪೂಜಾರ ಹಳ್ಳಿಯವರು ಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯದ ಪುನರುಜ್ಜೀವನದ ಬಗೆಗೆ ಅತ್ಯಂತ ಪ್ರಬುದ್ಧವಾಗಿ ತಮ್ಮ ಅನುಭಾವವನ್ನು ನೀಡಿದರು.ವಿಜಯನಗರ ಸಾಮ್ರಾಜ್ಯವು ಸಂಗಮ, ಸಾಳುವ, ತುಳುವ, ಅರವೀಡು ಮನೆತನಗಳಿಂದ ಆಳ್ವಿಕೆಯಾಗಿದ್ದು, ಪ್ರೌಢ ದೇವರಾಯ ಸಮರ್ಥ ಆಡಳಿತಗಾರನಾಗಿ, ಒರಿಸ್ಸಾದ ಕಟಕ್ ವರೆಗೆ ರಾಜ್ಯವನ್ನು ವಿಸ್ತರಿಸಿದ್ದು, ರಾಜನು ಹೇಗೆ ಕಲೆ, ಸಾಹಿತ್ಯ, ನಾಟ್ಯ, ಸಂಗೀತ, ವಾಸ್ತುಶಿಲ್ಪ, ಚರಿತ್ರೆ, ಧರ್ಮ, ನಾಗರೀಕತೆಯನ್ನು ಉತ್ತುಂಗಮಟ್ಟಕ್ಕೆ ತೆಗೆದು ಕೊಂಡು ಹೋಗಿ ಹಲವಾರು ಪ್ರಸಿದ್ಧ ಕನ್ನಡ ಕವಿಗಳಿಗೆ ಪೋಷಕರಾಗಿದ್ದುದನ್ನು, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಪ್ರೌಢದೇವರಾಯ ಅವರನ್ನು ಸಂಗಮ ರಾಜ ವಂಶದ ಆಡಳಿತಗಾರರಲ್ಲಿ ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ಹೇಳುತ್ತಾ, 12ನೇ ಶತಮಾನದಲ್ಲಿ ನಡೆದ ಶರಣರ ಕ್ರಾಂತಿ ಮತ್ತು 15 ನೆಯ ಶತಮಾನದ ಮಧ್ಯಕಾಲೀನ ಸಮಯದಲ್ಲಿ ಕರ್ನಾಟಕದಲ್ಲಿ ಪ್ರೌಢದೇವರಾಯನ ಕಾಲ ಸ್ಮರಣೆ ಮಾಡುವಂತಹುದ್ದುಎಂದು ಅಭಿಪ್ರಾಯ ಪಟ್ಟರು. ಪ್ರೌಢದೇವರಾಯನ ಕಾಲವು ಕನ್ನಡ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ 24 ನೆಯ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿಶರಣ ಶಿವಶರಣಪ್ಪ ಮದ್ದೂರ ಅವರು ಅನುಭವ ಮಂಟಪದಕುರಿತು ಅತ್ಯಂತ ವಿದ್ವತ್ ಪೂರ್ಣವಾಗಿ ಮಾತಾಡಿದರು.ಬಸವಣ್ಣನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು ಅನುಭವ ಮಂಟಪವನ್ನು ಸ್ಥಾಪಿಸಿದ್ದು, 12ನೇ ಶತಮಾನದಲ್ಲಿ ಭಾರತಾದ್ಯಂತ ಎಲ್ಲ ವರ್ಗದವರು ಬಂದು ಸೇರುತ್ತಿದ್ದ ಒಂದು ಸಾಮಾಜಿಕ ಧಾರ್ಮಿಕ ಸಂಸತ್ತು, ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿದ್ದವರು ಅಲ್ಲಮಪ್ರಭುಗಳು, ವಿವಿಧ ಜಾತಿ,ಕಾಯಕದವರು ಅನುಭವ ಮಂಟಪದ ಸದಸ್ಯರಾಗಿದ್ದರೆನ್ನುವುದು, ಇದರಲ್ಲಿ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದುದು ಹಾಗೂ ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದುದನ್ನು ತಿಳಿಸಿ ದರು. ಬಸವಣ್ಣನವರು ವಿಶ್ವವೇ ಒಂದು ಕುಟುಂಬವೆನ್ನು ವುದನ್ನು, ಕೂಡಲಸಂಗಮ ದೇವರ ಮನೆಯ ಮಗನು ನಾನು ಎನ್ನುವ ವಿನೀತ ಭಾವನೆ, ವರ್ಣ, ವರ್ಗ,ಲಿಂಗ, ಬೇಧ ಇಲ್ಲದೆ ಸ್ಥಾಪಿಸಿದ ಸಂಸ್ಥೆ ಅನುಭವ ಮಂಟಪ, ದಯವೇ ಧರ್ಮದ ಮೂಲವಯ್ಯವೆನ್ನುವುದು, ನಮ್ಮ ದುಡಿಮೆಯಿಂದ ಬಂದ ಪ್ರತಿಫಲದ ಒಂದಿಷ್ಟು ಭಾಗವನ್ನು…
