ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಳ್ಳುತ್ತಿರುವ ಎಲ್ಲ ಗಣತಿದಾರರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೨೫ ಅಂಗವಾಗಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಗಣತಿದಾರರ ಕಿಟ್ ವಿತರಿಸಿ ಮಾತನಾಡಿದರು. ಸಾರ್ವಜನಿಕರು ಗಣತಿದಾರರು ತಮ್ಮಲ್ಲಿಗೆ ಬಂದಾಗ ತಮ್ಮ ನೈಜ ಮಾಹಿತಿಯನ್ನು ಒದಗಿಸುವುದರ ಮೂಲಕ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಿಬ್ಬಂದಿ ನಾನಾಗೌಡ ಸಿದರೆಡ್ಡಿ, ಸೈಫನ್ ಮುಲ್ಲಾ ಮಾಂತಯ್ಯ ಮಠಪತಿ, ಪ್ರಭಾಕರ ಬಿರಾದಾರ ಮತ್ತು ನಂದಪ್ಪ ಅನಗೊಂಡ ಇವರ ನೇತೃತ್ವದಲ್ಲಿ ಗಣತಿದಾರರಿಗೆ ಕಿಟ್ಟುಗಳನ್ನು ವಿತರಿಸಿ ಸಮೀಕ್ಷೆಗೆ ಚಾಲನೆ ನೀಡಲಾಯಿತು.
ಶಿರಸ್ತೇದಾರರುಗಳಾದ ಸುರೇಶ ಮ್ಯಾಗೇರಿ, ಡಿ.ಬಿ.ಭೋವಿ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಮ್.ವಾಲೀಕಾರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪಿ. ಬಿರಾದಾರ, ಜಿ.ಬಿ.ಹೊಕ್ಕುಂಡಿ, ನಾಗೇಶ ನಾಗೂರ, ಬಿ.ಎಮ್.ವಾಲೀಕಾರ, ಬಾಬು ನಡುವಿನಕೇರಿ ಸಿಬ್ಬಂದಿ ಕಿಶೋರ ರಾಠೋಡ ಕುಮಾರ ಅವರಾದಿ, ಚನ್ನಬಸು ಹೊಸಮನಿ, ಆಕಾಶ ಮೇತ್ರಿ, ರಾಜು ಕಂಠಿ, ಸುರೇಶ ಮಣೂರ ಇದ್ದರು.

