ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ರೈತ ಹಾಗೂ ಯುವ ಧುರಿಣ ಯುನುಸ್‌ಅಲಿ ಶೇರ್‌ಅಲಿ ಮಕಾನದಾರ ಅವರನ್ನು ಗುರುತಿಸಿ ಅವರ ಅಪಾರ ಅನುಭವ ಹಾಗೂ ಸಾರ್ವಜನಿಕರೊಂದಿಗಿನ ಒಡನಾಟ ಮತ್ತು ಸಹಕಾರ, ಪರಿಗಣಿಸಿ ಇಂಡಿ ಶಾಖೆಯ ಶ್ರೀ ಭೀಮಾಶಂಕರ, ಸೌಹಾರ್ದ ಸಹಕಾರಿ ಸಂಘ ನಿಯಮಿತ ಚಡಚಣ ಶಾಖೆಯ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಅಧ್ಯಕ್ಷರು ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿಯ ಶ್ರೀ ಭೀಮಾಶಂಕರ, ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯುನುಸ್‌ಅಲಿ ಮಕಾನದಾರ ಅವರು, ತಾಲೂಕಿನಲ್ಲಿ ಜನರ ಅಭಿವೃಧ್ದಿಯ ಜೊತೆಗೆ ಶಾಖೆಯನ್ನು ಅಭಿವೃಧ್ದಿ ಪಥದತ್ತ ಕೊಂಡೊಯ್ಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಭೀಮಾಶಂಕರ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ರಾಜಶೇಖರ ಡೋಣಗಾಂವ, ೪ ಬ್ರ್ಯಾಂಚಿನ ಸಿಬ್ಬಂದಿ ಇದ್ದರು.

