Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಕಮೀಟಿಯ ಆಡಳಿತ ಮಂಡಳಿಯನ್ನು ದಿನಾಂಕ: 22.08.2025ರಂದು ರಚನೆ ಮಾಡಲಾಗುವುದು. ಆದಕಾರಣ, ಶುಕ್ರವಾರದ ನಮಾಜ ಮುಗಿದ ತಕ್ಷಣ ಸಮಾಜದ ಎಲ್ಲಾ ಭಾಂದವರು ಮದೀನಾ ಮಸ್ಜಿದನಲ್ಲಿ ಹಾಜರಾಗಲು ಸಮಾಜದ ಮುಖಂಡರಾದ ಬಂದೆನವಾಜ ಬೆವನೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗಣೇಶನ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗಿನ ಉತ್ಸವವನ್ನು ಶಾಂತಿಯುತವಾಗಿ ಆಚರಿಸುವುದರ ಮೂಲಕ ಮಂಡಳಿ ಹಾಗೂ ಯುವಕ ಸಂಘಗಳು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಿಪಿಆಯ್ ಆರ್.ಸಿ.ಆವುಜಿ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಅಂಗವಾಗಿ ಮಂಗಳವಾರ ಜರುಗಿದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಟ್ಟಣ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಎಲ್ಲರೂ ಪೊಲೀಸ್ ಇಲಾಖೆಯ ನಿಯಮಾವಳಿ ಪಾಲನೆ ಮಾಡಬೇಕು. ಡಿಜೆಯಂತ ಅಬ್ಬರದ ಸಂಗೀತಕ್ಕೆ ಅವಕಾಶವಿಲ್ಲ. ಯಾವುದೇ ಅನಗತ್ಯ ವಿಷಯಗಳತ್ತ ಗಮನ ನೀಡದೇ, ಶಿಸ್ತು, ಸಹನೆಯಿಂದ ಹಬ್ಬದ ಆಚರಣೆಗೆ ಮುಂದಾಗಬೇಕು ಎಂದರು.ಪಿಎಸ್‌ಐ ಸಚೀನ್ ಆಲಮೇಲಕರ ಪ್ರಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿದೆ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿ ಕದಡುವ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲ. ಪಟ್ಟಣದ ಎಲ್ಲ ಗಣೇಶ ಮಹಾಮಂಡಳಿಗಳಿಗೆ ಹೆಸ್ಕಾಂ, ಪಟ್ಟಣ ಪಂಚಾಯಿತಿ ಸೇರಿದಂತೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರವಿದ್ದು, ಗಣೇಶ ಯುವಕ ಮಂಡಳಿಗಳು ಇಲಾಖೆಯ ನಿಯಮಾವಳಿಗಳನ್ನು ಪಾಲಿಸಬೇಕು ಎಂದರು.ಮಹಾಮಂಡಳ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಉಪನ್ಯಾಸಕರು ಎಲ್ಲ ರೀತಿಯ ಶೈಕ್ಷಣಿಕ ಕ್ರಮ ತೆಗೆದುಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಸಿ.ಕೆ.ಹೊಸಮನಿ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಘದಡಿ ಜರುಗಿದ ಶಿಕ್ಷಣಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ವಿಷಯಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪರೀಕ್ಷೆಗಳು ಭವಿಷ್ಯದಲ್ಲಿ ಅತ್ಯಂತ ಸೂಕ್ಷ್ಮತೆಯನ್ನು ಒಳಗೊಂಡಿವೆ ಹೀಗಾಗಿ ಉಪನ್ಯಾಸಕರು ಫಲಿತಾಂಶ ಸುಧಾರಣೆಗೆ ತಮ್ಮ ತಮ್ಮ ವಿಷಯಗಳ ಮೇಲೆ ಮಕ್ಕಳಿಗೆ ಉಪಯುಕ್ತ ಹಾಗೂ ಬಹುಮುಖ್ಯ ಅಂಶಗಳ ಬಗ್ಗೆ ಚರ್ಚಿಸಬೇಕು. ಪ್ರತಿ ವಿದ್ಯಾರ್ಥಿಗಳ ಕಡೆಗೆ ಉಪನ್ಯಾಸಕರು ಗಮನ ಹರಿಸಬೇಕು. ವಿಷಯಗಳ ಬಗ್ಗೆ ಇರುವ ಪಾಸಿಂಗ್ ಪ್ಯಾಕೇಜ ತಯಾರಿಸಿ ಮಕ್ಕಳಿಗೆ ನೀಡಬೇಕು ವಿಜಯಪುರ ಜಿಲ್ಲೆಯ ಫಲಿತಾಂಶ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮೂಡಿಬರುವಂತೆ ಪ್ರಯತ್ನಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ ಎ.ಬಿ.ಸಾಲಕ್ಕಿ ಕಾಲೇಜು ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ ಮಾತನಾಡಿ, ಪರೀಕ್ಷೆಗಳು ವಿಭಿನ್ನವಾಗಿ ಬರುವದರಿಂದ ಕಾರ್ಯಾಗಾರಗಳು ಹೆಚ್ಚು ಉಪಯುಕ್ತಗೊಂಡಿª.ೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗುರು ಮತ್ತು ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಎನ್.ಎಸ್.ಢವಳಗಿ ಕಾಲೇಜಿನ ಭಾನುವಾರ ಜರುಗಿದ ೧೯೮೮ ರಿಂದ ೨೦೨೫ ರವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಗುರುವಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಶಿಕ್ಷಣವೇ ಶ್ರೇಷ್ಠ ಸಂಪತ್ತು ಜೊತೆಗೆ ಸ್ನೇಹಕ್ಕಿಂತ ಹಿರಿದಾದದ್ದು ಯಾವುದು ಇಲ್ಲ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಧ ಅತ್ಯಂತ ಪವಿತ್ರವಾದದು ಎಂದರು.ಸೇವಾ ನಿವೃತ್ತಿ ಹೊಂದಿದ ಎಸ್.ವ್ಹಿ.ಜೋಷಿ ಮಾತನಾಡಿ, ಅಕ್ಷರಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನಾ ಕಾರ್ಯಕ್ರಮ ಜರುಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.ನಿವೃತ್ತ ಪ್ರಾಚಾರ್ಯ ಎಸ್.ಟಿ.ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪ್ರಾಚಾರ್ಯ ಬಿ.ಜಿ.ಬಿರಾದಾರ, ನಿವೃತ್ತ ಉಪನ್ಯಾಸಕರಾದ ಎಂ.ಆರ್.ಶಿರಸಂಗಿ, ಐ.ಎಸ್.ವೀರಘಂಟಿಮಠ, ನಿವೃತ್ತ ಶಿಕ್ಷಕರಾದ ಆರ್.ಎಸ್.ಪಾಟೀಲ, ಎಂ.ಎಂ.ಬಿರಾದಾರ, ಎಮ್.ಆರ್.ಚಿಂಚೋಳಿ, ಎಸ್.ಬಿ.ಸಾಸನೂರ, ಬಿ.ಜಿ.ಬಿರಾದಾರರನ್ನು ಸನ್ಮಾನಿಸಲಾಯಿತು.ಸಿಂದಗಿ ಸಿ.ಎಂ.ಮನಗೂಳಿ ಕಾಲೇಜಿನ ಉಪನ್ಯಾಸಕ ಬಿ.ಎನ್.ಪಾಟೀಲ, ಪ್ರಾಚಾರ್ಯ ಎಸ್.ಎಸ್. ಮೋರಟಗಿ, ಉಪನ್ಯಾಸಕ ಎಸ್.ಬಿ.ಮಠ, ಬಿ.ಜಿ.ಸಿದ್ದರಡ್ಡಿ, ಶಶಿಕಲಾ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮೈಸೂರ ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ , ದೂರಗಾಮಿಯಾಗಿ ಯೋಚನೆ ಮಾಡಬಲ್ಲ ದಾರ್ಶನಿಕ, ಸಮಾಜ ಸುಧಾರಕ ಅವರ ಯೋಜನೆಗಳೆಲ್ಲವೂ ಭವಿಷ್ಯದ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಕೊಂಡಿರುವ ನಿರ್ಧಾರಗಳು ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.ಪಟ್ಟಣದ ಗುರುಭವನದಲ್ಲಿ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ೧೧೦ ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮೀಣ ಸುಧಾರಣೆ, ಭೂ ಸುಧಾರಣೆ , ಉಳುವವನೆ ಭೂ ಒಡೆಯ, ಹಿಂದುಳಿದ ವರ್ಗದವರಿಗೆ ಹಾವನೂರ ಆಯೋಗ ಮಾಡಿ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ, ಲ್ಯಾಂಡ ಟ್ರಿಮಿನಲ್, ಜೀತದಾಳು ಪದ್ದತಿ, ಭಾಗ್ಯಜ್ಯೋತಿ, ಗರಿಬಿ ಹಟಾವೋ, ದಲಿತ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವಸತಿ ನಿಲಯ, ವಿದ್ಯಾರ್ಥಿ ವೇತನ ನೀಡಿದ ಧೀಮಂತ ಅಭಿವೃದ್ದಿ ಹರಿಕಾರರು ಆಗಿದ್ದರು ಎಂದರು.ಉಪನ್ಯಾಸ ನೀಡಿದ ಶ್ರೀ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸತ್ಯಣ್ಣ ಹಡಪದ ಮಾತನಾಡಿದರು.ತಹಸೀಲ್ದಾರ…

Read More

ತಾಯಿಯ ಸ್ಮರಣಾರ್ಥ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಕೊಡುಗೆ ನೀಡಿದ ಸುಧಾಕರ ಅಡಕಿ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ತಾಯಿಯನ್ನು ಜಗತ್ತಿನ ಯಾವುದೇ ಭಾಷೆಯಲ್ಲಿ ವರ್ಣಿಸಲು ಸಾಧ್ಯವಿಲ್ಲ, ಹೆತ್ತ ತಾಯಿ ತನಗೆ ಒದಗಿದ ಎಲ್ಲ ನೋವು ನಲಿವುಗಳನ್ನು ಸಮಚಿತ್ತದಲ್ಲಿ ಸ್ವಿಕರಿಸುವ ವಾತ್ಸಲ್ಯ ಮೂರ್ತಿಯಾಗಿದ್ದು ಅವರನ್ನು ಪ್ರತಿನಿತ್ಯವೂ ಸ್ಮರಿಸುವಂತಹ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹಣಮಂತ ವಡ್ಡರ್ ಹೇಳಿದರು.ಕಲಕೇರಿ ಗ್ರಾಮದ ಮಾತೃ ಸೇವಾ ಸಂಸ್ಥೆಯ ವತಿಯಿಂದ ಗ್ರಾಪಂ ಸದಸ್ಯ ಸುಧಾಕರ ಅಡಕಿ ಅವರು ತಮ್ಮ ತಾಯಿ ಗಂಗಮ್ಮ ಅಡಕಿ ಅವರ ೧೨ನೇ ವರ್ಷದ ಪುಣ್ಯಾರಾಧನೆಯ ನಿಮಿತ್ಯವಾಗಿ ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು ತುರ್ತು ಆಕ್ಸಿಜನ್ ಸಿಲಿಂಡರ್ ಕೊಡುಗೆಯಾಗಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಾತೃ ಸೇವಾ ಸಂಸ್ಥೆಯ ಮುಖ್ಯಸ್ಥ ಗ್ರಾಪಂ ಸದಸ್ಯ ಸುಧಾಕರ ಅಡಕಿ ಮಾತನಾಡಿ, ನನ್ನ ತಾಯಿಯ ಸವಿನೆನಪಿಗಾಗಿ ಕಳೆದ ೧೧ ವರ್ಷಗಳಿಂದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ಸುಮಾರು ೧೦೦-೨೦೦ ಹಣ್ಣಿನ ಸಸಿಗಳನ್ನು ನೀಡುತ್ತಾ ಬಂದಿರುವೆ. ಅದರಂತೆ ಈ ವರ್ಷ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳಗಾರರ ಸಂಘ ಬೆಂಗಳೂರು, ವಿಜಯಪುರ ಪ್ರಾದೇಶಿಕ ಕಚೇರಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಅಗಷ್ಟ 22 ಶುಕ್ರವಾರ ರಂದು ಸನ್ 2024-25 ನೇ ಸಾಲಿನ ದ್ರಾಕ್ಷಿ ಬೆಳೆ ವಿಮೆ ಪರಿಹಾರ ಬಿಡುಗಡೆಗೊಳಿಸುವ ಕುರಿತು ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.ಈ ದಿನದಂದು ಸಂಘದ ರಾಜ್ಯ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ, ದ್ರಾಕ್ಷಿ ಮತ್ತು ವೈನ್ ಬೋರ್ಡ್ ನಿಗಮದ ಮಾಜಿ ಅಧ್ಯಕ್ಷ ಎಂ.ಎಸ್. ರುದ್ರಗೌಡರ, ಪ್ರಗತಿಪರ ದ್ರಾಕ್ಷಿ ಬೆಳೆಗಾರರು ಹಾಗೂ ಉದ್ದಿಮೆದಾರ ಎಸ್. ಎಚ್. ನಾಡಗೌಡರು, ಎನ್.ಆರ್.ಸಿ ನಿರ್ದೇಶಕ ಸಂಜಯ ಪಾಟೀಲ್ ಕನಮಡಿ, ಪ್ರಾದೇಶಿಕ ಕಚೇರಿಯ ಅಧ್ಯಕ್ಷ ಮಲ್ಲಿಕಾರ್ಜುನ್ ಎಸ್. ಲೋಣಿ, ಪ್ರಧಾನ ಕಾರ್ಯದರ್ಶಿ ಸಿದಗೊಂಡ ರುದ್ರಗೌಡರ, ಸಂಘದ ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸುತ್ತಾರೆ. ಆದ್ದರಿಂದ ಜಿಲ್ಲೆಯ ಮತ್ತು ನೆರೆ ಜಿಲ್ಲೆಯ ಎಲ್ಲ ದ್ರಾಕ್ಷಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಕ್ಕಮಹಾದೇವಿ ಮಹಿಳಾ ವಿವಿ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಊಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಕಾನೂನಿನ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಿದ ಮಹಾನ್ ನಾಯಕ ದಿವಂಗತ ಡಿ.ದೇವರಾಜ ಅರಸರು,” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಹೇಳಿದರು.ವಿಶ್ವವಿದ್ಯಾಲಯದ ಸಮಾನ ಅವಕಾಶ ಘಟಕದ ವತಿಯಿಂದ ಬುಧವಾರ ಸಿಂಡಿಕೇಟ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ದಿವಂಗತ ಡಿ. ದೇವರಾಜ ಅರಸರ ೧೧೦ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ವಿಭಾಗದ ಪ್ರೊ.ನಾರಾಯಣ ಪವಾರ ಅವರು, “ಪ್ರಗತಿಪರ ಸಾಧನೆಗಳ ಸರದಾರ ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ ಅರಸರ ಕೊಡುಗೆಗಳು ಅಪಾರವಾಗಿವೆ ಎಂದು ಹೇಳಿದರು.ಪ್ರೊ.ಎಂ.ನಾಗರಾಜರು ಮಾತನಾಡಿ, “ಸಮಾಜವಾದದ ಬೆನ್ನೆಲುಬಾಗಿ, ಅದನ್ನು ಕರ್ನಾಟಕದಲ್ಲಿ ಬಿತ್ತಿ ಬೆಳೆಸಿದ ಮಹಾನ್ ನಾಯಕ ದೇವರಾಜ ಅರಸರು. ಅವರ ಮೌಲ್ಯಾಧಾರಿತ ರಾಜಕಾರಣ ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಹೊಸ ದಿಕ್ಕು ತೋರಿಸಿತು,” ಎಂದು ಅಭಿಪ್ರಾಯಪಟ್ಟರು.ಹಿರಿಯ ಪ್ರಾಧ್ಯಾಪಕ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪುರಸಭೆ ಅಧಿಕಾರಿಗಳು ವಿರುದ್ಧ ದೂರು ನೀಡಿ ತಿಂಗಳಾದರೂ ಉನ್ನತ ತನಿಖೆ ಕೈಗೊಳ್ಳದ ಉನ್ನತಾಧಿಕಾರಿಗಳ ನಡೆ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕಂದೀಲು ರಂಗಣ್ಣ ತಿಮ್ಮಯ್ಯ ಅನುಮಾನ ವ್ಯಕ್ತಪಡಿಸಿದರು.ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಪುರಸಭೆಯಲ್ಲಿ 2023-24‌ & 2024-25 ನೇ ಸಾಲಿನ ಸರ್ಕಾರದ ಅನುದಾನವನ್ನು, ಕೆಟಿಸಿ ಕಾಯ್ದೆ ಉಲ್ಲಂಘನೆ ಮಾಡಿ, ಬಂದಿರುವ ಅನುದಾನ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಉಪಯೋಗಿಸದೆ, ತಮಗಿಷ್ಟ ಬಂದವರ ಹೆಸರಿಗೆ ಎರಡೆರಡು ಬಾರಿ ಅನುದಾನದ ಹಣ ವರ್ಗಾವಣೆ ಮಾಡಿ ಕರ್ತವ್ಯ ಲೋಪ ಎಸಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಂಗಳ ಹಿಂದೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದವರು, ಪುರಸಭೆ ಅಧಿಕಾರಿಗಳು ಯಾರು ಏನೇ ಮಾಡಿದರೂ ಎಷ್ಟೇ ದೂರ ನೀಡಿದರು ನಮಗೆ ಯಾರೂ ಏನೂ ಮಾಡಲಾರರು ಎಂದು ಮತ್ತಷ್ಟು ಅವ್ಯವಹಾರದಲ್ಲಿ ತೊಡಗಿದ್ದಾರೆ. ಕೂಡಲೇ ಥರ್ಡ್ ಪಾರ್ಟಿ ಏಜೆನ್ಸಿ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಲು,…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಹೆಣ್ಣಿರಲಿ ಗಂಡಿರಲಿ ಪ್ರತಿಯೊಬ್ಬರೂ ದೇಶದ ಕಾನೂನಿನ ಕುರಿತು ತಿಳುವಳಿಗೆ ಪಡೆದುಕೊಳ್ಳುವುದು ಇಂದಿನ ಅವಶ್ಯವಾಗಿದೆಯೆಂದು ನ್ಯಾಯವಾದಿ ಎಂ.ಎನ್. ಕೋಪರ್ಡೆ ಹೇಳಿದರು.ಸ್ಥಳೀಯ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮೀತಿ, ಅಭಿಯೋಜನಾ ಇಲಾಖೆ, ವಕೀಲರ ಸಂಘ, ಖಾಯಂ ಜನತಾ ನ್ಯಾಯಾಲಯ ಬೆಳಗಾವಿ ಹಾಗೂ ಮಧ್ಯಸ್ಥಿಕೆ ಅಭಿಯಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕಾನೂನು ಅರಿವು ನೆರವು ಕಾರ್ಯಕ್ರಮ”ದ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು ದುರ್ಬಲರಿಗಾಗಿ ಕಾನೂನು ನೆರವು ಉಚಿತವಾಗಿ ದೊರೆಯುತಿದ್ದು ಇದರ ಸದುಪಯೋಗ ಪ್ರತಿಯೊಬ್ಬರು ಪಡೆಯಬೇಕೆಂದರು.ವಕೀಲ ವಿದ್ಯಾರ್ಥಿನಿ ಗ್ರಾ.ಪಂ. ಸದಸ್ಯೆ ಮೇಘಾ ಬಿ.ಪಾಟೀಲ ಮಾತನಾಡಿ ಮಹಿಳೆಯರಿಗೆ ಇರುವ ಕಾನೂನಾತ್ಮಕ ಸೌಲಭ್ಯಗಳು ಹಾಗೂ ಉಚಿತ ಕಾನೂನು ನೆರವು ಪಡೆಯಲು ಬೇಕಾದ ಅರ್ಹತೆಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕಾರ್ಯಕ್ರಮದಲ್ಲಿ ವಿವರಣೆ ನೀಡುವಂತಾಗಬೇಕೆಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಂ.ಪಂ. ಅಧ್ಯಕ್ಷೆ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ ವಹಿಸಿದ್ದರು. ನ್ಯಾಯವಾದಿ ಮಹಾದೇವ ಕೋಳಿ, ಭಾಸ್ಕರ ಬಡಿಗೇರ, ಪ್ರಕಾಶ ಪಾಟೀಲ, ಬಾಳಪ್ಪ…

Read More