ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆದಿಂದ ಪೌರಕಾರ್ಮಿಕರಿಗೆ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಮನ್ನಾನ ಶಾಬಾದಿ, ತಾಲೂಕಾಧ್ಯಕ್ಷ ಸಂಜು ಬಿರಾದಾರ, ಪ್ರಶಾಂತ ಮುಂಜಾನೆ, ಸಂಗಮೇಶ ಜಾಲಗೇರಿ, ಜಟ್ಟಿಂಗರಾಯ ಮಾಲಗಾರ, ಸಂಗಮೇಶ ಬಿದರಿ ಬಸನಗೌಡ ಪಾಟೀಲ, ಪುರಸಭೆಯ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಇತರರು ಇದ್ದರು.

